ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ತಹಶಿಲ್ದಾರ ಕಛೇರಿಯ ಲ್ಲಿ ಕೆಂಪೇಗೌಡ ರ 515 ನೇ ಜಯಂತಿ ಅಚರಣೆ

ಕೊಟ್ಟೂರು:ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ನಾಡಪ್ರಭು ಕೇಂಗೇಗೌಡ 515ನೇ ಜಯಂತಿ ಕಾರ್ಯಕ್ರಮವನ್ನು ಕೊಟ್ಟೂರಿನ ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಆಚರಿಸಲಾಯಿತು.
ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ತಹಶೀಲ್ದಾರರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರುದೇವ ಶಾಲೆಯ ಶಿಕ್ಷಕರಾದ ಶಿವರಾಜ ಮತ್ತು ಗುರುರಾಜ ಇವರು ಪ್ರಾರ್ಥನೆಯನ್ನು ಮಾಡಿದರು.
ಸರ್ಕಾರಿ ಸಂಯುಕ್ತ ಪದವಿ-ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಂಜಿನಪ್ಪ.ಡಿ. ಇವರು ಉಪನ್ಯಾಸವನ್ನು ನೀಡಿದರು. ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆಯ ಉದರದಲ್ಲಿ 1510ರಲ್ಲಿ ಜನಿಸಿದರು. ವಿಜಯನಗರ ಸಾಮ್ರಾಜ್ಯದ ಸಾಂಂತರಾಗಿದ್ದ ಕೆಂಪನಂಜೇಗೌಡರು ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಕೆಂಪೇಗೌಡರು ಬಾಲಕರಾಗಿದ್ದ ಸಮಯದಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ತಂದೆಯವರೊಂದಿಗೆ ಭೇಟಿ ನೀಡಿದ ಸಮಯದಲ್ಲಿ ವೈಭಯುತವಾದ ವಿಜಯನಗರ ಸಾಮ್ರಾಜ್ಯವನ್ನು ಕಂಡು, ರಾಜ್ಯವನ್ನು ನಿರ್ಮಿಸಿದರೆ ಹೀಗೆ ನಿರ್ಮಿಸಬೇಕೆಂದು ಕನಸು ಕಾಣುತ್ತಾರೆ. ಮುಂದೆ ಪಟ್ಟಾಧಿಕಾರವನ್ನು ಹೊಂದಿದ ನಾಡಪ್ರಭು ಕೆಂಪೇಗೌಡರು 1537ರಲ್ಲಿ ಯಲಹಂಕದಿಂದ 15 ಕಿ ಮೀ ದೂರದಲ್ಲಿರುವ ಪ್ರದೇಶದಲ್ಲಿ ಬೆಂಗಳೂರು ನಿರ್ಮಾಣಕ್ಕೆ ಪೂಜೆ ಸಲ್ಲಿಸಿ ಎತ್ತುಗಳಿಗೆ ನೇಗಿಲು ಕಟ್ಟಿ ನಾಲ್ಕು ಕಡೆ ಬಿಡುತ್ತಾರೆ. ಅವು ಪೂರ್ವಕ್ಕೆ ಹೊಸೂರು, ಪಶ್ಚಿಮಕ್ಕೆ-ಸೊಂಡೆಕೊಪ್ಪ, ಉತ್ತರಕ್ಕೆ ಯಲಹಂಕ ಮತ್ತು ದಕ್ಷಿಣಕ್ಕೆ–ಆನೇಕಲ್ಲುವರೆಗೆ ಹೋಗಿ ನಿಂತಿದ್ದರಿಂದ ಈ ನಾಲ್ಕು ದಿಕ್ಕಿನಲ್ಲಿ ಹೆಬ್ಬಾಗಿಲನ್ನು ನಿರ್ಮಿಸಿ ಕೋಟೆಯನ್ನು ಕಟ್ಟುತ್ತಾರೆ. ಇಂದು ಜಗದಗಲ ಪ್ರಖ್ಯಾತಿಯನ್ನು ಹೊಂದಿ ವಿಸ್ತರಿಸಿರುವ ಬೆಂಗಳೂರು ನಿರ್ಮಾಣ ಮಾಡಿದ ನಾಡಪ್ರಭು ಕೆಂಪೇಗೌಡರು ಪ್ರತಿಯೊಂದು ವೃತ್ತಿ, ಜನಾಂಗಕ್ಕೆ ಗೌರವನ್ನು ನೀಡುವುದರ ಜೊತೆಗೆ ಗೃಹ ಕೈಗಾರಿಕೆ, ವ್ಯಾಪಾರಕ್ಕೆ ಪ್ರೋತ್ಸಾಹವನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಬೆಂಗಳೂರು ನಿರ್ಮಾಣದ ಸಮದಯದಲ್ಲಿ ವಿಜಯನಗರ ಸಾಮ್ರಾಜ್ಯದಿಂದ 15 ಹೋಬಳಿಗಳ 33 ಸಾವಿರ ಪರಗಣದ ಸಹಾಯವನ್ನು ಪಡೆಯುವುದರ ಜೊತೆಗೆ ದೇಣಿಗೆಯನ್ನು ಸಂಗ್ರಹಿಸಿ ನಗರವನ್ನು ನಿರ್ಮಿಸಿದರು. ದಟ್ಟಕಾಡಿನಿಂದ ಆವರಿಸಿದ್ದರಿಂದ ಬೆಂದಕಾಡು,ಬೆಣಚುಕಲ್ಲಿನಿಂದ ಇದ್ದುದರಿಂದ ಬೆಂಗಳೂರು ಎಂದು ಕರೆಯಲಾಗಿದೆ. ಹೀಗೆ ವೈಭವದಿಂದ ಮೆರೆದ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದುಕೊಂಡು ಶ್ರೀಕೃಷ್ಣದೇವರಾಯನ ಮಗ ಅಚ್ಚುತರಾಯರಿಂದ ಸನ್ಮಾನಿಸಿಕೊಂಡ ಕೀರ್ತಿ ಕೇಂಪೇಗೌಡರ ಸಾಧನೆಯಾಗಿದೆ ಎಂದು ಉಪನ್ಯಾಸ ನೀಡಿದರು.

ಅಮರೇಶ್ ಜಿ ಕೆ ತಹಶೀಲ್ದಾರರು, ಕೊಟ್ಟೂರು ಇವರು ಕೆಂಪೇಗೌಡರ ಆದರ್ಶಗಳನ್ನು ಮೈಗೂಡಿಕೊಳ್ಳುವುದರ ಜೊತೆಗೆ ಅವರ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸಬೇಕಿದೆ. ಜನಪರ ಕಾಳಜಿಹೊಂದಿದ್ದ ಅವರ ಆಡಳಿತ ಮೆಚ್ಚುವಂತಹದಾಗಿದೆ. ಅವರು ಕೃಷಿಗೆ ಹೆಚ್ಚು ಒತ್ತುಕೊಟ್ಟು ಜನರ ಉಪಯೋಗಕ್ಕಾಗಿ ನಿರ್ಮಿಸಿದ್ದ ಅಳಿವಿನ ಅಂಚಿನಲ್ಲಿರುವ ಕೆರೆ-ಕಟ್ಟೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿಡಾ.ಕೊಟ್ರೇಶ್ ವೈಧ್ಯಾಧಿಕಾರಿಗಳು, ಪಶುಸಂಗೋಪನಾ ಇಲಾಖೆ, ಈರಣ್ಣ ಕಾರ್ಯದರ್ಶಿ ಎಪಿಎಂಸಿ, ಎಸ್ ನಿಂಗಪ್ಪ ಇಸಿಒ ಶಿಕ್ಷಣ ಇಲಾಖೆ, ಕೊಟ್ರೇಶ ಆರ್.ಐ. ಪಟ್ಟಣ ಪಂಚಾಯಿತಿ, ಜಿ ರವೀಂದ್ರ ಬಿಆರ್ಪಿ, ಸಿ ಆರ್ ಪಿ ಗಳಾದ ಕೊಟ್ರೇಶ, ಅಜ್ಜಯ್ಯ, ಷಣ್ಮುಖ, ಗಿರಿಜಮ್ಮ, ಮಂಜುನಾಥ, ದುರುಗಪ್ಪ, ಉಪತಹಶೀಲ್ದಾರ್ ಅನ್ನದಾನೇಶ ಬಿ ಪತ್ತಾರ, ಹಾಲಸ್ವಾಮಿ ಕಂದಾಯ ನಿರೀಕ್ಷಕರು, ಸಿಬ್ಬಂದಿ ಸಿರಾಜ್ ವುದ್ದೀನ್, ದೇವರಾಜ ಅರಸು, ಹರೀಶ್ ಗ್ರಾಆಅ, ಪುಟಾಣಿ ವಿಜಯಕುಮಾರ, ದ್ಯಾವಮ್ಮ ಹಾಗೂ ಇತರರು ಇದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಕೆಂಪೇಗೌಡರ ಕುರಿತು ತಾಲೂಕಿನ ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದ್ದು, ಭಾಷಣ ಸ್ಪರ್ಧೆಯಲ್ಲಿ ಪ್ರಥಮ- ಪ್ರಿಯಾಂಕ ಸ ಬಾಲಕರ ಪ್ರೌಢಶಾಲೆ; ದ್ವಿತೀಯ-ಮೇಘನ ಎಸ್ ಎಂ-ಮಹದೇವ ಶಾಲೆ; ತೃತೀಯ- ಮಮತ- ಸ ಬಾಲಕಿಯರ ಪ್ರೌಢಶಾಲೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ -ವಿಜಯ್ ಕುಮಾರ್- ಮಹದೇವ ಪ್ರೌಢಶಾಲೆ; ದ್ವಿತೀಯ-ಎನ್ ಸಮೀರ್ ಸ ಬಾಲಕರ ಪ್ರೌಢಶಾಲೆ; ತೃತೀಯ- ಎಂ ಪ್ರತೀಕ್ಷಾ ಜ್ಞಾನಸುಧಾ ಪ್ರೌಢಶಾಲೆ ಈ ಮಕ್ಕಳಿಗೆ ತಹಶೀಲ್ದಾರರು ಬಹುಮಾನ ವಿತರಿಸಿ ಗೌರವಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ