ಅರಳಗುಂಡಗಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ ಹಂಗಾಮಿ ಅಧ್ಯಕ್ಷೆ ಶ್ರೀಮತಿ ಸಪ್ನಾ ನಿಂಗರಾಜ ಕಡೆ ಅವರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಬಂಧಿಸಲು ಆಗ್ರಹ.
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮ ಪಂಚಾಯತನ ಚುನಾವಣೆಯು ದಿನಾಂಕ 27 ರಂದು ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಇದರ ಮುಂಚಿತವಾಗಿ 20 ರಂದು ಹಂಗಾಮಿ ಅಧ್ಯಕ್ಷರಾದ ಶ್ರೀಮತಿ ಸಪ್ನಾ ಗಂಡ ನಿಂಗರಾಜ ಕಡಿ ಅವರ ಮನೆಗೆ ಬಂದು ಜಾತಿ ನಿಂದನೆ ಮಾಡಿದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಈ ಮೂಲಕ ಯಡ್ರಾಮಿ ಪೋಲಿಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ.ಕೂಡಲೇ ಸದರಿ ಆರೋಪಿಗಳನ್ನು ಬಂಧಿಸುವ ಮೂಲಕ ಚುನಾವಣೆಗೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳಬೇಕು ಮತ್ತು ಕುಟುಂಬಕ್ಕೆ ಪೋಲಿಸ್ ಇಲಾಖೆಯೂ ಸೂಕ್ತ ಬಂದೋಬಸ್ತ ನೀಡಬೇಕು ಎಂದು ಜೇವರ್ಗಿ ದಲಿತ ಸಂಘಟನೆಗಳ ದಲಿತ ಸಮನ್ವಯ ಸಮಿತಿ ಪಧಾದಿಕಾರಿಗಳು ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.
ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯು ಇದೇ 27 ರಂದು ನಡೆಯಲ್ಲಿದ್ದು,ಈ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಮತ್ತು ಹಂಗಾಮಿ ಅಧ್ಯಕ್ಷರಾದ ಶ್ರೀಮತಿ ಸಪ್ನಾ ಗಂ.ನಿಂಗರಾಜ ಕಡಿ ಅವರ ಮನೆಗೆ ಬಂದು ಕುಟುಂಬದ ಎಲ್ಲಾ ಸದಸ್ಯರನ್ನು ಅವಾಚ್ಯ ಶಬ್ಬಗಳಿಂದ ನಿಂದನೆ ಮಾಡಿದ್ದು,ಸದರಿ ಆರೋಪಿಗಳ ವಿರುದ್ಧ ಯಡ್ರಾಮಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
ಅರಳಗುಂಡಗಿ ಗ್ರಾಮದ ಮುಖಂಡರಾದ ಶರಣಗೌಡ ಹಿರೇಗೌಡ ಸೇರಿದಂತೆ 5 ಜನರ ಮೇಲೆ ಕ್ರೈಂ ನಂ. 0080/2024 ಪ್ರಕರಣ ದಾಖಲಾಗಿರುತ್ತಾರೆ.ಸದರಿ ಎಲ್ಲಾ ಆರೋಪಿಗಳನ್ನು ಬಂಧಿಸುವ ಮೂಲಕ ಅರಳಗುಂಡಗಿ ಗ್ರಾಮ ಪಂಚಾಯತನ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು,ಚುನವಾಣೆಯೂ ಶಾಂತಿ ಸುವ್ಯವಸ್ಥೆಯಾಗಿ ನಡೆಯುವಂತೆ ನೋಡಿಕೊಳ್ಳಬೇಕು ಮತ್ತು ಆರೋಪಿಗಳನ್ನು ಕೂಡಲೇ ಬಂಧಿಸಲು ಯಡ್ರಾಮಿ ಪೋಲಿಸ ಠಾಣೆಯ ಅಧಿಕಾರಿ ಪಿಎಸ್ಐ ಅವರಿಗೆ ಸೂಕ್ತವಾದ ಆದೇಶ ನೀಡುವ ಮೂಲಕ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಹರಿ ಕರಕಿಹಳ್ಳಿ,ಸಿದ್ದರಾಮ ಕಟ್ಟಿ, ಸಿದ್ದು ಕೆರೂರು,ಭೀಮರಾಯ ನಗನೂರ,ಶ್ರೀಶೈಲ ಜಾಲವಾದ, ಜಗನ್ನಾಥ ಸೂರ್ಯವಂಶಿ,ಮಂಜುನಾಥ ನಾಲವಾರಕರ್, ಅಬ್ದುಲ ಹನಿ,ಶಿವಶರಣ ಆಂದೋಲಾ, ರೇವಣಸಿದ್ದ ಬಿರಾಳ ಸೇರಿದಂತೆ ಅರಳಗುಂಡಗಿ ಗ್ರಾಮದ ಮುಖಂಡರು ಇದ್ದರು.