ಯಾದಗಿರಿ/ವಡಗೇರಾ:ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ತಹಶೀಲ್ದಾರ ಕಾರ್ಯಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ನಾಡಪ್ರಭು ಕೆಂಪೆಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ನಾಡಿಗೆ ಕೆಂಪೇಗೌಡರು ಕೊಟ್ಟಿರುವ ಕೊಡುಗೆ ಮತ್ತು ಸಂದೇಶವನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳುವುದರ ಜೊತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಂಡು ಉತ್ತಮ ಸಮಾಜ,ನಿರ್ಮಾಣ ಮಾಡುವ ಕಡೆಗೆ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕು ಅವರು ಕೇವಲ ಒಂದು ಜಾತಿ ಸಮುದಾಯಕ್ಕೆ ಸೀಮಿತವಾದ ನಾಯಕರಾಗಿರಲಿಲ್ಲ,ಸರ್ವಜನಾಂಗದ ಏಳಿಗೆಗಾಗಿ ದುಡಿದವರಾಗಿದ್ದಾರೆ,ದೂರದೃಷ್ಟಿಯ ನಾಯಕರಾಗಿ, ತ್ಯಾಗಮೂರ್ತಿಯಾಗಿ ಹಲವಾರು ಜನಹಿತ ಕಾರ್ಯಕ್ರಮಗಳ ಜೊತೆಗೆ ಬೆಂಗಳೂರು ನಗರದಲ್ಲಿ ಗಂಗಾಧರೇಶ್ವರ ದೇವಾಲಯ,ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಕೆಂಪಾಬುದಿ ಕೆರೆ ನಿರ್ಮಾಣ ಮಾಡಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಮಾನ್ಯ ತಹಸಿಲ್ದಾರರಾದ ಶ್ರೀ ಶ್ರೀನಿವಾಸ ಚಾಪೆಲ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಂಗವಾರ್ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಮಕ್ಕಳಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರ ಕಣ್ಮನ ಸೆಳೆಯಿತು.
ನಾಡಪ್ರಭು ಕೆಂಪೇಗೌಡರ ಜೀವನ-ಸಾಧನೆ, ಕೊಡುಗೆಗಳ ಕುರಿತು ಚರ್ಚಾ,ಪ್ರಬಂಧ,
ಭಾಷಣ ಸ್ಪರ್ಧೆ,ನೃತ್ಯ,ರಂಗೋಲಿ ಇನ್ನಿತರ ಕಾರ್ಯಕ್ರಮ 3-4 ಗಂಟೆಗಳವರಗೆ ನಡೆದ ಕಾರ್ಯಕ್ರಮ ಎಲ್ಲರ ಕೇಂದ್ರ ಬಿಂದುವಾಗಿ ಹೊರಹೊಮ್ಮಿತು.
ವಿಧ್ಯಾರ್ಥಿಗಳು,ಶಿಕ್ಷಕರು,ಪೋಷಕರು, ಸಾರ್ವಜನಿಕರು,ಅಧಿಕಾರಿಗಳು,ಕಾರ್ಯಕ್ರಮದಲ್ಲಿ ಭಾಗವಹಿಸಿದರವರನ್ನು ಪ್ರೊತ್ಸಾಹಿಸಿದರು.
ವಡಗೇರಾ ತಹಶೀಲ್ದಾರರ ಕಚೇರಿಯ ಆವರಣದಲ್ಲಿ ಪ್ರಪ್ರಥಮವಾಗಿ ನಡೆದ ಕ್ರಾರ್ಯಕ್ರಮ ಸಣ್ಣ ಪುಟ್ಟ ದೋಷಗಳ ಹೊರತಾಗಿಯೂ ವಿಜೃಂಭಣೆಯಿಂದ ನೆರವೇರಿತು.
ಭಾಷಣ ಸ್ಪರ್ಧೆಯಲ್ಲಿ
ಪ್ರಥಮ ಬಹುಮಾನ ನಾಗರಾಜ ಸರ್ವೋದಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ
ದ್ವಿತೀಯ ಬಹುಮಾನ ಕುಮಾರಿ ಸಾವಿತ್ರಿ ಮುರಾರ್ಜಿ ದೇಸಾಯಿ ಶಾಲೆ ವಡಗೇರಾ ವಿದ್ಯಾರ್ಥಿನಿ
ಹಾಗೂ ತೃತೀಯ ಬಹುಮಾನ ಕುಮಾರಿ ಸಿಂಧು ಸರಕಾರಿ ಪ್ರೌಢ ಶಾಲೆ ವಡಗೇರಾ
ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಉಳಿದಂತೆ ಭಾಗವಹಿಸಿದ ಎಲ್ಲಾ ವಿಧ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.
ವರದಿ:ಶಿವರಾಜ ಸಾಹುಕಾರ್,ವಡಗೇರಾ