ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಪ್ರಭಾರಿ ಅಧಿಕಾರಿ ಮಹಾಂತೇಶ ಪುರಾಣಿಕ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮುಂಗಡವಾಗಿ ಲಂಚ ಪಡೆಯುವ ವೇಳೆ ದಾಳಿ ಮಾಡಿದ್ದಾರೆ.
ಯಡ್ರಾಮಿ ತಾಲೂಕು ಪಂಚಾಯತಿ ಅಧಿಕಾರಿ ಮಳ್ಳಿ ಗ್ರಾಮದ ಯುವಕರಾದ ನಬಿಲಾಲ್ ತಂದೆ ದೌವಲಸಾಬ್ ಮತ್ತು ಪ್ರಶಾಂತ ತಂದೆ ಲಾಲು ಚವ್ಹಾಣ ಅವರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಾಲ್ಕು(4) ಲಕ್ಷದ ನಾಲಾ ಕಾಮಗಾರಿಗಾಗಿ 50 ಸಾವಿರ ರೂಪಾಯಿಗೆ ಬೇಡಿಕೆ ಇಡಲಾಗಿತ್ತು.
ಕಾಮಗಾರಿಯ ಮುಂಗಡ ಹಣ 20 ಸಾವಿರ ರೂಪಾಯಿ ನೀಡಬೇಕು ಆಮೇಲೆ 30 ಸಾವಿರ ರೂಪಾಯಿ ಕೊಡಬೇಕು ಎಂದು ಅಧಿಕಾರಿ ಮತ್ತು ಕಾಮಗಾರಿ ಪಡೆದುಕೊಳ್ಳುವ ಯುವಕರ ನಡುವೆ ಮಾತು ಆಗಿತ್ತು.
ಮಂಗಳವಾರ ನಾಲ್ಕು ಘಂಟೆ ವೇಳೆಯಲ್ಲಿ ಮುಂಗಡವಾಗಿ ನೀಡಬೇಕಾದ ಹಣ ಕಾರ್ಯನಿರ್ವಾಹಕ ಮಹಾಂತೇಶ ಪುರಾಣಿಕ 20 ಸಾವಿರ ರೂಪಾಯಿ ಪಡೆಯುತ್ತಿದ್ದಾಗ
ಲೋಕಾಯುಕ್ತ ಅಧಿಕಾರಿಗಳು ವಶಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಸಂಧರ್ಭದಲ್ಲಿ ಮಂಜುನಾಥ ಗಂಗಲ್ ಸರ್ಕಲ್ ಇನ್ಸ್ ಪೆಕ್ಟರ್,ಧ್ರುವತಾರೆ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಇತರೆಬಲೋಕಾಯುಕ್ತ ಸಿಬ್ಬಂದಿ ವರ್ಗದವರು ಇದ್ದರು.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್