ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಘಟನೆಗಳ ಒಕ್ಕೂಟ ಹಾಗೂ ಸಮುದಾಯದಿಂದ ಬಸವೇಶ್ವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಅಲಂಕಾರಗೊಂಡ ಬಸವೇಶ್ವರರ ಪುತ್ಥಳಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ಸೋಮಹಳ್ಳಿ ಮಠದ ಶ್ರೀಗಳಾದ ಸಿದ್ದಮಲ್ಲ ಮಹಾಸ್ವಾಮಿಗಳು ಹಾಗೂ ಶಾಸಕ ಹೆಚ್ ಎಂ ಗಣೇಶ್ ಪ್ರಸಾದ್,ಮಾಜಿ ಶಾಸಕ ಸಿ ಎಸ್ ನಿರಂಜನ್ ಕುಮಾರ್ ಮೆರವಣಿಗೆಗೆ ಚಾಲನೆ ನೀಡಿದರು.
ವೀರಕುಣಿತ,ಗೊರವರ ಕುಣಿತ,ಕಂಸಾಳೆ,ಡೊಳ್ಳು ಕುಣಿತ,ಡಿಜೆ,ನಗಾರಿ,ವಾದ್ಯಗೋಷ್ಠಿ,ಜೋಡೆತ್ತುಗಳು, ಎತ್ತಿನಗಾಡಿ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಪಟಾಕಿ ಸಿಡಿಸುತ್ತ ಮೆರವಣಿಗೆ ಪಟ್ಟಣದ ಕೆಎಸ್ ಅರ್ ಟಿಸಿ ಮುಂಭಾಗದ ಮೂಲಕ ಬಸವೇಶ್ವರ ವೃತ್ತ ಹಳೆ ಬಸ್ ನಿಲ್ದಾಣ,ಕೆಅರ್ ಸಿ ರಸ್ತೆ ಮಾರ್ಗವಾಗಿ ಕೋಡಹಳ್ಳಿ ವೃತ್ತದ ಮೂಲಕ ಹಳೆ ಪ್ರವಾಸಿ ಮಂದಿರವಾಗಿ ಸಾಗಿಬಂತು,ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿ ಕುಣಿದು ಕುಪ್ಪಳಿಸಿದರು.
ನಂತರ ಬಸವ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರಿ ಮಂದಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು ಶಾಸಕ ಗಣೇಶ್ ಪ್ರಸಾದ್ ಪ್ರಸಾದ ವ್ಯವಸ್ಥೆ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ನಂಜುಂಡಪ್ರಸಾದ್,ಜಿಲ್ಲಾ ವೀರಶೈವ ಮಹಾಸಭಾ ಅದ್ಯಕ್ಷ ಮೂಡ್ಲುಪುರ ನಂದೀಶ್,ಕಬ್ಬಹಳ್ಳಿ ಮಹೇಶ್, ಕಮರಹಳ್ಳಿ ರವಿ,ಹಂಗಳ ನಟೇಶ್,ಯುವಘಟಕ ಅದ್ಯಕ್ಷ ಬಸವಣ್ಣ ಚೆನ್ನಮಲ್ಲಿಪುರ,ಮನು ಹೊಂಗಳ್ಳಿ, ಶಿವಪುರ ಸುರೇಶ್,ಎಂ.ಪಿ ಸುನೀಲ್,ಸರ್ಕಲ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ,ಯುವ ಮುಖಂಡರುಗಳು ಮತ್ತಿತರರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್