ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಶಾಸಕರೇ ಬನ್ನಿ ಬಸ್‍ ಸಮಸ್ಯೆ ಬಗೆಹರಿಸಿ…

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳ ನಿತ್ಯ ಗೋಳಾಟ..!!

ರಾಮದುರ್ಗದಿಂದ ಹಾಗೂ ಈ ಕಡೆಯ ಗ್ರಾಮಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದೇ ಬಸ್ ಏರಿ ಶಾಲೆಗೆ ಹೋಗಬೇಕಾದದ್ದು ಅನಿವಾರ್ಯತೆ..!!
ಕಳೆದ ಶೈಕ್ಷಣಿಕ ವರ್ಷಕ್ಕಿಂತಲೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಮಾರ್ಗವಾಗಿ ಆ ಶಾಲೆಗೆ ಹೋಗುವ ಎಲ್ಲಾ ತರಗತಿಯ ವಿದ್ಯಾರ್ಥಿಗಳು ಸೇರಿ ಸಂಖ್ಯೆಯೂ ಬಲು ದೊಡ್ಡದಾಗಿದೆ.

ಮಕ್ಕಳೆಂದರೆ ದೇವರು..!! ಅವರು ಮುಗ್ಧರು,, ಕಲಿಯುವ ಹಂತದ..ವಿದ್ಯಾರ್ಥಿಗಳು ಭಾವೀ ಭಾರತ ಭವಿಷ್ಯದ ನಾಯಕ-ನಾಯಕಿಯರು..!!
ಅವರಿಗೆ ಸೂಕ್ತ ರೀತಿಯಲ್ಲಿ ಮೂಲಭೂತ ಸೌಲಭ್ಯ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದು ನಮ್ಮ ವ್ಯವಸ್ಥೆಯ ಆದ್ಯ ಕರ್ತವ್ಯ.ಸರ್ಕಾರದ ವತಿಯಿಂದ ನಡೆಸುವ ಆಯ್ಕೆ ಪರೀಕ್ಷೆಯಿಂದಲೇ ಆಯ್ಕೆಗೊಳಿಸಿದ ರಾಮದುರ್ಗ ತಾಲೂಕಿನ ಅರ್ಹ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಈ “ಆದರ್ಶ ವಿದ್ಯಾಲಯ” ಮುಖ್ಯವಾಗಿ ತಲೆಯೆತ್ತಬೇಕಾದದ್ದು ರಾಮದುರ್ಗ ನಗರದಲ್ಲಿ ಎನ್ನುವುದು ಮೊದಲ ಆದ್ಯತೆ.!
ಆದರೆ ರಾಮದುರ್ಗಲ್ಲಿ ಅಥವಾ ನಗರದ ಸುತ್ತ ಮುತ್ತ ಶೈಕ್ಷಣಿಕ ಅಭಿವೃದ್ಧಿ ಕಾರ್ಯ ಆಗಿದ್ದ ಸರ್ಕಾರಿ ಶಾಲೆ ನಿರ್ಮಿಸಲು ನಿವೇಶನದ ಕೊರತೆ ಆದಾಗ ಕನಿಷ್ಠ ಪಕ್ಷ ತಾಲೂಕಿನ ಎಲ್ಲಾ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಮೂಲಕ ಪ್ರಯಾಣಕ್ಕೆ ಎಲ್ಲಾ ರೀತಿಯಿಂದ ಅನುಕೂಲಕರ ಪ್ರದೇಶದಲ್ಲಿಯಾದರೂ ಈ ಆದರ್ಶ ವಿದ್ಯಾಲಯ ನಿರ್ಮಾಣ ಆಗಬೇಕಿತ್ತು.
ಈ ಬಗ್ಗೆ ಈ ಆದರ್ಶ ಶಾಲೆ ನಿರ್ಮಾಣ ಮಾಡುವಂತಹ ಸಂದರ್ಭದಲ್ಲಿ ರಾಮದುರ್ಗದ ಶಾಸಕರಾಗಿ ಆಯ್ಕೆಯಾದ ವ್ಯಕ್ತಿಯದೇ ಮೊದಲ ಪ್ರಯತ್ನ ಆಗಿರಬೇಕು.
ಆದರೆ ಆಗಿನ ಶಾಸಕ ಏನು ಅಂತ ಈ ಸರ್ಕಾರಿ ಆದರ್ಶ ಶಾಲೆಗೆ ಕಟಕೋಳದಲ್ಲಿ ರಸ್ತೆಯೇ ಇಲ್ಲದ.. ಅನಾನುಕೂಲದ ಆಗರದ..ಮುಂದಿನ ದಿನಗಳಲ್ಲಿ ಅನೇಕಾನೇಕ ಸಮಸ್ಯೆ ಉದ್ಭವಿಸಬಹುದಾದ ಸ್ಥಳದಲ್ಲಿ ಶಾಲೆ ನಿರ್ಮಾಣ ಮಾಡುವ ಕಾರ್ಯಕ್ಕೆ ಅಸ್ತು ಅಂತ ಹೇಳಿದರು?
ಇದು ನಮ್ಮ ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೇ ಆ ಶಾಸಕ ಮಾಡಿದ ಅಗ್ರಗಣ್ಯ ಅನ್ಯಾಯ ಎಂದರೆ ಎಳ್ಳಷ್ಟೂ ತಪ್ಪಲ್ಲ.!!

ಬನ್ನಿ..ನೋಡಿ..ಕಟಕೋಳದಲ್ಲಿರುವ ನಮ್ಮ ಮಕ್ಕಳು ಓದುವ ಆದರ್ಶ ವಿದ್ಯಾಲಯ..!!

ಶಿಕ್ಷಕರು ಎಲ್ಲಾ ಓಕೆ..!! ಕಲಿಸುವವರ..ಕಲಿಯುವವರಲ್ಲಿ ಏನೂ ಕಸರು ಇಲ್ಲ.ಶಾಲೆಯ ಕಟ್ಟಡ ಬಹಳ ಒಳ್ಳೆಯದು..ವಿಶಾಲ ಇದೆ. ಶಿಕ್ಷಕರೂ ಕ್ರಿಯಾತ್ಮಕತೆಯಿಂದ ಕೂಡಿದ್ದಾರೆ. ಆಟದ ಮೈದಾನ ಕೂಡಾ ಬಹಳ ವಿಶಾಲ ಅದೆ.ಆದರೆ ತಾಲೂಕಿನ ಸಮಸ್ತ ಗ್ರಾಮಗಳ ಜನರಿಗೆ ಈ ಉತ್ತಮ ಶಾಲೆಯ ಶಿಕ್ಷಣ ದೊರೆಯಬೇಕಾದರೆ ಅಲ್ಲಿಗೆ ದಿನಾಲೂ ಸಮಯಕ್ಕೆ ಸರಿಯಾಗಿ ಹೋಗಿ ಬರಲು ಸಾಕಷ್ಟು ಬಸ್ಸಿನ ಸೌಲಭ್ಯ ಬೇಕು.ಆ ಶಾಲೆ ಇದ್ದ ಊರಿಗೆ ಹೋಗಲು ಮತ್ತು ಮುಖ್ಯ ರಸ್ತೆಯಿಂದ ವಿದ್ಯಾರ್ಥಿಗಳು ಶಾಲೆಗೆ ನಡೆದು ಹೋಗುವ ಹಾದಿ ಕಾಲಳತೆಯ ನಡಿಗೆಯ ಕ್ರಮಿಸುವಿಕೆಗೆ ಸಮಯಕ್ಕೆ ವಿದ್ಯಾರ್ಥಿಗಳ ಸಾಮರ್ಥ್ಯದ ಮಟ್ಟಕ್ಕೆ ಅನುಕೂಲ ಆಗಿರಬೇಕು.ಈ ಎಲ್ಲಾ ಅಂಶಗಳ ಸಮಸ್ಯೆಗಳು ಈ ಶಾಲೆಯ ಶಿಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೆ ದೊರೆಯಲು ಆಗದಂತೆ ಮಾಡಿವೆ.ರಾಮದುರ್ಗದಿಂದ ಒಂದು ಬಸ್ಸು ಬೆಳಿಗ್ಗೆ 9-00 ಗಂಟೆಗೆ ಕಟಕೋಳದ ಈ ಶಾಲೆಯ ಹತ್ತಿರದ ರಸ್ತೆಯ ಮೂಲಕ ಮುಂದಿನ ಊರಿಗೆ ಹೋಗುವಂತಹುದಿದೆ.ಅದರ ಬೋರ್ಡ್ ನಲ್ಲಿ ವಾಯಾ ಮಾರ್ಗ “ಆದರ್ಶ ವಿದ್ಯಾಲಯ” ಅಂತ ಬರೆದಿದ್ದಾರೆ.ಈ ಬಸ್ಸು ಶನಿವಾರ ದಿವಸ ಬೆಳಿಗ್ಗೆ ಬೇಗನೆ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಲ್ಲ.ಕಾರಣ ವಿದ್ಯಾರ್ಥಿಗಳು ಆ ಮಾರ್ಗ ಅಂದರೆ ಕೇವಲ ಕಟಕೋಳಕ್ಕೆ ಹೋಗುವ ಬಸ್ ಸಿಕ್ಕರೆ ಸಾಕು ಎನ್ನುವ ತವಕದಲ್ಲಿ ಇರುತ್ತಾರೆ ಆಯಿತು ಬಸ್ ಸಿಕ್ಕಿತು ಅಂದ್ಕೊಳ್ಳಿ..ಅದು ಕಟಕೋಳದ ಬಸ್ ನಿಲ್ದಾಣಕ್ಕೆ ಹೋದಾಗ ವಿದ್ಯಾರ್ಥಿಗಳು ಬಸ್ಸಿನಿಂದ ಇಳಿದುಕೊಂಡು ಅಲ್ಲಿಂದ ಕನಿಷ್ಠವೆಂದರೂ ಎರಡು-ಎರಡೂವರೆ ಕಿಲೋ ಮೀಟರ್ ದಾರಿಯನ್ನು ನಡೆದುಕೊಂಡೇ ಶಾಲೆಗೆ ಹೋಗಬೇಕು..ಸಮಯಕ್ಕೆ ಸರಿಯಾಗಿ..!!ಮಳೆ,ಬಿಸಿಲಿನ ತೊಂದರೆಗಳನ್ನೂ ಎಲ್ಲಾ ಮಕ್ಕಳು ಎದುರಿಸಬೇಕು..!! ಅಬ್ಬಾ ಅದೇನ್ ಕರ್ಮರೀ ನಮ್ಮ ಮಕ್ಕಳದು..!!ಎಂದು ಉದ್ಗಾರದ ಉಸಿರು ಹಾಕುತ್ತಾ.. ಪರಿತಪಿಸುತ್ತಾ ಮಾತನಾಡುವ ಪಾಲಕರ ಸಂಖ್ಯೆ ಬಹು ದೊಡ್ಡದಿದೆ.
ಈ ಸಮಸ್ಯೆಯ ಕಾರಣ ಈ ಶಾಲೆಗೆ ಪರೀಕ್ಷೆಯಲ್ಲಿ ಪಾಸಾಗಿ ಸೆಲೆಕ್ಟ್ ಆಗಿ ಲಿಸ್ಟ್ ನಲ್ಲಿ ಕುಂತ ವಿದ್ಯಾರ್ಥಿಗಳೆಲ್ಲರೂ ಈ ಶಾಲೆಗೆ ಸೇರದೇ ಬೇರೆ ಬೇರೆ ಶಾಲೆಗೆ ಪ್ರವೇಶ ಪಡೆಯುತ್ತಾರೆ.ಅತ್ಯಂತ ಅನಿವಾರ್ಯತೆ ಇದ್ದ ಮಕ್ಕಳು ಬಹಳಷ್ಟು ಪರಿತಪಿಸುತ್ತಾ ಈ ಶಾಲೆಗೆ ಕಲಿಯಲು ಹೋಗುತ್ತಾರೆ. ಪ್ರತಿ ವರ್ಷ ಹೆಚ್ಚಿನ ಶ್ರಮದಿಂದ ಅಭ್ಯಾಸ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಆದ ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರ ನಮ್ಮ ಪ್ರಜಾಪ್ರಭುತ್ವದ ನಾಗರಿಕ ಬದುಕಿನ ವ್ಯವಸ್ಥೆಯ ಶೈಕ್ಷಣಿಕ ಸೌಲಭ್ಯ ನಮ್ಮ ಮಕ್ಕಳಿಗೆ ಈ ರೀತಿಯದು ಇದೆ..ಇದು ನಮ್ಮ ಕರ್ಮ..!!

ರಾಮದುರ್ಗದಿಂದ…ಗೊಡಚಿಯ ಮಾರ್ಗವಾಗಿ ಸಾಗುವ ಬಸ್ಸು ತುರನೂರ,ಕಂಕಣವಾಡಿ, ಸಂಗಮೇಶ್ವರ ನಗರ,ಸುನ್ನಾಳ,ಪೀರನಗುಡಿ,ನಡುವೆ ತೋಟದ ಮನೆಗಳ ಮಕ್ಕಳು,ನರಸಾಪುರ,ಗೊಡಚಿ ಹೀಗೆ ಎಲ್ಲಾ ಊರುಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಇದ್ದಾರೆ.ರಾಮದುರ್ಗದ ಮುಖ್ಯ ಬಸ್ ನಿಲ್ದಾಣದಲ್ಲಿಯೇ ಈ ರೀತಿಯ ಹರಸಾಹಸದ ಮೂಲಕ ಬಸ್ ಹತ್ತುವ ದೃಶ್ಯ ನೋಡಿರಿ.!! ಇನ್ನು ಮುಂದಿನ ಊರುಗಳಲ್ಲಿ ಈ ಬಸ್ ಹತ್ತಿ ಈ ನಮ್ಮ ಆದರ್ಶ ಶಾಲೆಗೆ ಹೋಗುವ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು,ಹೇಗೆ ಹೋಗಬೇಕು.!
ಸ್ವಲ್ಪ ಕಲ್ಪನೆ ಮಾಡಿಕೊಳ್ಳಿ..ನೋಡೋಣ.!!

ರಾಮದುರ್ಗ ಬಸ್ ಡೀಪೊ ಮ್ಯಾನೇಜರ್ ಸರ್ ಶ್ರೀ ಎಚ್.ಆರ್.ಪಾಟೀಲರು ನಮ್ಮ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡುತ್ತೇವೆ ಅಂತಾ ಹೇಳುತ್ತಿದ್ದಾರೆ.ಈಗಾಗಲೇ ಅವರ ಉತ್ತಮ ಪ್ರಯತ್ನದಿಂದಲೇ ಮಾತ್ರ ಉತ್ತಮ ಗತಿಯಲ್ಲಿ ಈ ಶಾಲೆಗೆ ಹೋಗಲು ಬಸ್ಸಿನ ಅನುಕೂಲ ಆಗಿದೆ ಆದರೆ.. ಈಗ ಇನ್ನೊಂದು ಬಸ್ಸಿನ ಪ್ರಮಾಣದಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಹೆಚ್ಚಿನ ಪ್ರಮಾಣದಲ್ಲಿ ಈ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಗೇ ಹೋಗುವಂತಾಗಿದೆ.ಆದ್ದರಿಂದ ನಮ್ಮ ರಾಮದುರ್ಗದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು ಹಾಗೂ ಸಂಬಂಧಪಟ್ಟ ಮೇಲಾಧಿಕಾರಿಗಳು ಸಧ್ಯಕ್ಕೆ ಇನ್ನೊಂದು ಬಸ್ಸಿನ ವ್ಯವಸ್ಥೆಯನ್ನು ಈ ಶಾಲೆಗೆ ಹೋಗುವ ಮಕ್ಕಳಿಗಾಗಿ ಮಾಡಲಿ ಎನ್ನುವುದು ಪಾಲಕರ ಒತ್ತಾಸೆಯ ಬಹುಮುಖ್ಯ ಬೇಡಿಕೆಯಾಗಿದೆ.

ಈಗಿನ ರಾಮದುರ್ಗದ ಶಾಸಕರು,ಸರ್ಕಾರದ ಮುಖ್ಯ ಸಚೇತಕರಾದ ಸನ್ಮಾನ್ಯ ಶ್ರೀ ಅಶೋಕ ಮ.ಪಟ್ಟಣ ರವರು ಈ ಎಲ್ಲಾ ವಿಷಯಗಳನ್ನು ಗಮನಿಸಿ..ತಮ್ಮ ಗಣನೆಗೆ ತೆಗೆದುಕೊಂಡು ಕೊಂಚ ಕ್ರಮ,ಶ್ರಮವಹಿಸಿ ಕಾರ್ಯ ಮಾಡಿ ಈ ಕಟಕೋಳದಲ್ಲಿರುವ ರಾಮದುರ್ಗ ತಾಲೂಕಿನ “ಆದರ್ಶ ಶಾಲೆಯ ಸಮಸ್ಯೆಗಳೆಲ್ಲವನ್ನೂ ಸರಳೀಕರಣಗೊಳಿಸಿ ಎಲ್ಲಾ ಕಡೆಯಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಶಾಲೆಗೆ ಹೋಗಿ ಬರುವಂತಾಗಲಿ ಇಡೀ ತಾಲೂಕಿನ ಮಕ್ಕಳಿಗೆ ಸ್ಕೂಲ್ ಬ್ಯಾಗ್ಸ್,ನೋಟಬುಕ್ಸ್ ಕೊಡುವ ಕಾರ್ಯ ಮಾಡುವ ನಮ್ಮ ಶಾಸಕರು ಮೊದಲು ಈ ಕಟಕೋಳದಲ್ಲಿರುವ ಆದರ್ಶ ವಿದ್ಯಾಲಯದ ಸುತ್ತ ಇರುವ ಎಲ್ಲಾ ಸಮಸ್ಯೆಗಳೆಂಬ ಗ್ರಹಣಗಳನ್ನು ಬಿಡಿಸಲು ಈಗಿಂದೀಗಲೇ..ಕಾರ್ಯೋನ್ಮುಖರಾಗಲು ನಮ್ಮಂತವರು ಕೈ ಜೋಡಿಸಿ ಕೇಳಿಕೊಳ್ಳುತ್ತೇವೆ.ಒಮ್ಮೆ ಈ ಶಾಲೆಯ ಕಡೆಗೆ ಬಂದು ಸಮಸ್ಯೆ ವೀಕ್ಷಿಸಲು ಎಲ್ಲಾ ಸಜ್ಜನ ಬಂಧುಗಳಾದ ಆದರ್ಶ ವಿದ್ಯಾಲಯದ ಪಾಲಕರ ಪರವಾಗಿ ನಮ್ಮ ಮೌಲ್ಯಸಂಪದ ಸಂಸ್ಥೆಯ ಈ ಬೇಡಿಕೆಯು ಸನ್ಮಾನ್ಯರಾದ ಹಾಲಿ ಶಾಸಕರಲ್ಲಿ ಇದೆ.ಗೊಡಚಿಯ ಮೂಲಕ ಕಟಕೋಳಕ್ಕೆ ಎಂಟ್ರಿ ಆದಾಗ ಎಂಥ ವಾಹನವೇ ಆಗಲಿ..ಬಲಕ್ಕೆ ತಿರುಗಿಕೊಂಡು ಈ ಶಾಲೆಗೆ ಹೋಗಬೇಕಾದರೆ.. ಮೊದಲು ಅಲ್ಲಿನ ಆ ತಿರುವಿನ ಇರುವಿಕೆಯ ಪದ್ದತಿಯನ್ನು ನೋಡಬೇಕು.ಸರಳವಾಗಿ ಕ್ರಾಸ್ ಮಾಡುವ ಮೂಲಕ ಸಾಗಿ ಹೋಗಲು ಭಯಂಕರ ದುಸ್ತರದ ಸ್ಥಿತಿಯನ್ನು ಅಲ್ಲಿ ಕಾಣಬಹುದು. ಮಕ್ಕಳನ್ನು ತುಂಬಿಕೊಂಡು ಯಾವುದೇ ತರಹದ ವಾಹನವೂ ಆ ಶಾಲೆಗೆ ತೆರಳಲು ಸುರಕ್ಷಿತ ರಸ್ತೆ ಇದಲ್ಲ ಎನ್ನುವುದು ಎಂತವರಿಗೂ ತಿಳಿಯುತ್ತದೆ..!! ಆದರೆ ಈ ಜಾಗೆಯಲ್ಲಿ ಶಾಲೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿರುವ (ಆ ಸಂದರ್ಭದಲ್ಲಿ) ಆ ಅಧಿಕಾರಸ್ಥರಿಗೆ ಇದು ಏಕೆ ತಿಳಿಯಲಿಲ್ಲವೋ..ನಾ ಕಾಣೆ..ಶ್ರೀ ಸೊಗಲ ಸೋಮೇಶ್ವರಾ..!!

ಒಮ್ಮೆ ಈ ಬಗ್ಗೆ ರಾಮದುರ್ಗ ಬಸ್ ಡೀಪೋ ಮ್ಯಾನೇಜರ ಸರ್ ಶ್ರೀ ಎಚ್.ಆರ್.ಪಾಟೀಲರವರನ್ನು ಭೆಟ್ಟಿಯಾಗಿ ವಿಷಯ ಪ್ರಸ್ತಾಪಿಸಿದ ಸಂದರ್ಭದಲ್ಲಿ ಅವರು ಈ ರಸ್ತೆ ಇನ್ಸುರ್ಡ್ ರಸ್ತೆಯಾದರೆ ನಾವು ಶಾಲೆಯ ತನಕ ಬಸ್ ಬಿಡಲು ಸಿಬ್ಬಂದಿಗಳಿಗೆ ಹೇಳಿ ಅನುಕೂಲ ಮಾಡಿಕೊಡುತ್ತೇವೆ.ಆದರೆ ಸಂಬಂಧಪಟ್ಟ ಅಭಯಂತರರು ಈ ರಸ್ತೆಯನ್ನು ವೀಕ್ಷಿಸಿ ಸೆಕ್ಯುರ್ ರಸ್ತೆ ಅಂತಾ ಪ್ರಮಾಣಪತ್ರ ನಮಗೆ ತಲುಪಿಸಿದರೆ ನಾವು ಶಾಲೆಯ ತನಕ ಬಸ್ ಬಿಡಿಸುತ್ತೇವೆ ಎಂದಿದ್ದಾರೆ. ಕಾರಣ ಈ ಬಗ್ಗೆ ಸನ್ಮಾನ್ಯ ಶಾಸಕರೇ ಕಾರ್ಯ ಮಾಡಲು ನಮ್ಮ ಬೇಡಿಕೆ.

ಈಗಾಗಲೇ ಹಲವಾರು ಜನ ಪಾಲಕರು ಈ ಬಗ್ಗೆ ಶಾಸಕರ,ಶಾಸಕರ ಆಪ್ತ ವಲಯದವರ ಗಮನಕ್ಕೆ ವಿಷಯ ತಂದಿದ್ದಾರೆ ಆದರ್ಶ ಪಾಲಕರ ಈ ನಮ್ಮ ಮನವಿಯನ್ನು ಶಾಸಕರು ಆಲಿಸಿ ಮುಂದೆ ನಿಂತು ಮಾಡಿದಂತೇ..ಮನಸ್ಸಿನ ಮೇಲೆ ತೆಗೆದುಕೊಂಡು ಈ ಶಾಲೆಯ ವಿದ್ಯಾರ್ಥಿಗಳಿಗಾಗಿ ಈ ಕಾರ್ಯ ಮಾಡಿಕೊಡಬೇಕೆಂದು ಸ್ಥಳೀಯ ಪಾಲಕರು ಮತ್ತೊಮ್ಮೆ ಈ ಮೂಲಕ ಕೇಳಿಕೊಳ್ಳುತ್ತಿದ್ದಾರೆ.ಇನ್ನಾದರೂ ಸ್ಥಳೀಯ ಶಾಸಕರು,ಅಧಿಕಾರಿಗಳು ಈ ಕುರಿತು ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದು ನೋಡೋಣ…

ವರದಿ-ಕರಿಯಪ್ಪ.ಮಾ.ಮಾದರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ