ಚಾಮರಾಜನಗರ ಮತ್ತು ಗುಂಡ್ಲುಪೇಟೆ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ಗಬ್ಬೆದ್ದು ನಾರುತ್ತಿದೆ.
ಈ ರಸ್ತೆ ಚಾಮರಾಜನಗರ ಜಿಲ್ಲೆ ಕೇಂದ್ರ ರಸ್ತೆಯಾಗಿದೆ ಇದು ತಾಲೂಕಿನ ವಿವಿಧ ಗ್ರಾಮಗಳ ಜನತೆ ದಿನನಿತ್ಯ ತಿರುಗಾಡುವ ರಸ್ತೆ ಇದರ ಪಕ್ಕದಲ್ಲೇ ಜೆಡಿಎಸ್ ಕಚೇರಿ ಹಾಗೂ ಶಾಲೆ ಕಾಲೇಜಗಳಿದ್ದು ದಿನ ನಿತ್ಯ ವಿದ್ಯಾರ್ಥಿಗಳು,ಸಾರ್ವಜನಿಕರು ಓಡಾಡುತ್ತಿರುತ್ತಾರೆ. ಇದರ ಪಕ್ಕದಲ್ಲೇ ಯುಜಿಡಿ ಓಪನ್ ಆಗಿದ್ದು ಪಾಯಿಂಟ್ ಗುರುತಿಸಲು ಆಗದೆ ಜೆಸಿಬಿಯಲ್ಲಿ ಏಳೆಂಟು ಮೀಟರ್ ನಷ್ಟು ಮುಖ್ಯ ರಸ್ತೆಯನ್ನು ಅಗೆದು ಅಧ್ವಾನ ಮಾಡಿ ಹೋಗಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ.
ಮನೆಗಳ ಮಲಿನ ನೀರು ಪ್ರಮುಖ ರಸ್ತೆಗಳ ಬದಿಯಲ್ಲಿ ನಿಂತಿದೆ.ಇದರಿಂದ ಅಂಗಡಿ ವ್ಯಾಪಾರಿಗಳು ವ್ಯಾಪಾರ ಮಾಡುವುದಕ್ಕೂ ತೊಡಕಾಗಿದೆ. ಸಂಜೆಯಾದರೆ ಸೊಳ್ಳೆ ಕಾಟ ಕೂಡಾ ಗ್ರಾಹಕರು ಅಂಗಡಿಗಳಿಗೆ ಹೋಗಲು ಚರಂಡಿ ದಾಟಿಕೊಂಡೇ ಹೋಗಬೇಕಾದ ಸ್ಥಿತಿ ಇದೆ.ಇಲ್ಲಿ ನಿಂತ ನೀರೆಲ್ಲಾ ಕೊಳೆತು ನಾರುತ್ತಿದೆ ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡಬೇಕು ಅಂಗಡಿ ಮುಂಗಟ್ಟುಗಳು ಇವೆ ಹಾಗಾಗಿ ಯುಜಿಡಿ ನೀರು ಸರಾಗವಾಗಿ ಹರಿಯದ ಕಾರಣ ನಿಂತಲ್ಲೇ ನಿಂತಿದೆ. ಇದರಿಂದ ಕೊಳೆತ ವಾಸನೆ ರಸ್ತೆಯಲ್ಲಿ ರಾಚುತ್ತಿದೆ ತಾಲೂಕು ಕೇಂದ್ರವಾದರೂ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ ಚರಂಡಿಯಲ್ಲಿ ಹೂಳು ತುಂಬಿಕೊಂಡಿದೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ವಿಷಯಕ್ಕೆ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಬಂದು ನೋಡುತ್ತಾರೆ ಮತ್ತು ಪುರಸಭೆ ಮುಖ್ಯಾಧಿಕಾರಿ ಗಮನಕ್ಕೂ ತಂದರೂ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಶ್ರೀಘವಾಗಿ ಈ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕು ಇಲ್ಲದಿದ್ದರೆ ಈ ಸಮಸ್ಯೆ ಸರಿಯಾಗವರೆಗೂ ಸಂಪೂರ್ಣವಾಗಿ ರಸ್ತೆಯನ್ನೇ ಬಂದ್ ಮಾಡಲಾಗುವುದು ಎಂದು ಜೆಡಿಎಸ್ ಪಕ್ಷದ ಮುಖಂಡ ಕುರುಬೂರು ಮಂಜುನಾಥ್ ತಿಳಿಸಿದ್ದಾರೆ.
ವರದಿ ಗುಂಡ್ಲುಪೇಟೆ ಕುಮಾರ್