ನಿಮ್ಮ ಯೋಜನೆಗಳು ಬರೀ ಭಾಷಣ-ಘೋಷಣೆಗಳಿಗೆ ಸೀಮಿತವಾದವೇ?
ಅಥವಾ ನಿಮಗೆ ಇನ್ನೂ ಸ್ವಲ್ಪವಾದರೂ ಸಾರ್ವಜನಿಕರ ಬಗ್ಗೆ ಕಾಳಜಿ ಇದೆಯೇ?
ಮಾಂಸಾಹಾರಿ ಹೋಟೆಲ್ ಗಳವರ ತ್ಯಾಜ್ಯ ವಿಲೇವಾರಿಗೆ ಏನೂ ನೀತಿ ನಿಯಮಗಳೇ ಇಲ್ಲವೇ..!?
ರಾಮದುರ್ಗ ಪುರಸಭೆಯ ಮುಖ್ಯಾಧಿಕಾರಿಗಳೇ ಮತ್ತು ರಾಮದುರ್ಗ ತಾಲೂಕ ಆರೋಗ್ಯ ಅಧಿಕಾರಿಗಳೇ ಇದನ್ನು ಗಮನಿಸಿ..!
ಗಂಭೀರವಾಗಿ ತೆಗೆದುಕೊಳ್ಳಿ..!!
ಸ್ವಚ್ಛತೆ-ಆರೋಗ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ.!!!
ಬೆಳಗಾವಿ ಜಿಲ್ಲೆಯ ರಾಮದುರ್ಗದ ಹಳೇ ಸೇತುವೆಯ ಹತ್ತಿರದ ರಸ್ತೆಯ ಪಕ್ಕದಲ್ಲಿ ಜನರು ತಿರುಗಾಡುವ ದಟ್ಟನೆಯ ರಸ್ತೆಯ ಪಕ್ಕದಲ್ಲಿ ಹೊಸ ಸೇತುವೆಯ ಅಕ್ಕಪಕ್ಕದ ಜಾಗೆಯಲ್ಲಿ…ಯಾದವಾಡ ಪೆಟ್ರೋಲ್ ಬಂಕ್ ದಿಂದ ಹಿಡಿದು ಹೊಸ ಸೇತುವೆಯ ವರೆಗೂ ಕೋಳಿ-ಕುರಿ ಮತ್ತಿತರ ಮಾಂಸದ ಅಡುಗೆಯ ತ್ಯಾಜ್ಯದ ಮೂಟೆ ಮೂಟೆ ಹೇಗೆಂದರೆ ಹಾಗೆ ಅಸ್ತವ್ಯಸ್ತವಾಗಿ ಬಿದ್ದಿರುವುದನ್ನು ಚೆಲ್ಲಾಡಿರುವುದನ್ನು ದಾರಿಹೋಕ ಸಾರ್ವಜನಿಕರು ನೋಡಿ ಮನಗಂಡು ಅದರ ಅದ್ಭುತ ದುರ್ವಾಸನೆಯನ್ನು ಉಸಿರಾಡಿ ಮೂಗು ಮುಚ್ಚಿಕೊಂಡದ್ದು..ಹಿಡಿಶಾಪ ಹಾಕಿದ್ದು ಈಗ ಹಳೆಯ ವಿಷಯ..!
BOX
“ಈ ಚಿಕನ್ ಮಟನ್ ಖಾನಾವಳಿಯವರಿಗೆ ಸ್ವಲ್ಪ ಏನಾರ ಹೇಳತೀರೇನ್ರೀ”ಈ ಹಳೇ ಫೂಲ್ ಅಂತೇಕ್ ರಸ್ತೆಯ ಬಾಜು ಕೋಳಿ ಕುರಿ ಮಾಂಸದ ತ್ಯಾಜ್ಯ ಒಗದಾರ..ಹೊಲಸ್ ನಾರಾಕತ್ತೈತಿರಿ..ಜನ್ರು ಹೆಂಗ್ ಅಡ್ಡಾಡೋದ್ ರೀ..!!?”ಎನ್ನುತ್ತಾರೆ ಸ್ಥಳೀಯರು. ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ತಂದು ಬೂದಿ (ಯಾದವಾಡ) ರವರ ತೋಟದ ಪಕ್ಕದ ರಸ್ತೆಯ ಪಕ್ಕ ಅಂದರೆ ಸುರೇಬಾನಕ್ಕೆ ಹೋಗುವ ರಸ್ತೆಯ ವೆಂಕಟೇಶ್ವರ ದೇವಸ್ಥಾನ ದಾಟಿ ಮುಂದೆ ಹೋಗಿ ಬ್ರಿಡ್ಜ್ ದಾಟಿದ ಕೂಡಲೇ ಎಡಕ್ಕೆ ಕಾಣುತ್ತದೆ ಆ ಘನಘೋರ ಬ್ರಹ್ಮಾಂಡ ಹೊಲಸು ಹಾಗೂ ಭಾರೀ ಅದ್ಭುತ ದುರ್ನಾತ..!!ಆದಷ್ಟು ಬೇಗನೆ ಹೋಗಿ ನೋಡಿ..ರಾಮದುರ್ಗ ತಾಲ್ಲೂಕಿನ ಆರೋಗ್ಯ ಅಧಿಕಾರಿಗಳೇ ಮತ್ತು ರಾಮದುರ್ಗ ಪುರಸಭೆಯ ಮುಖ್ಯಾಧಿಕಾರಿ ಗುಡದಾರಿರವರೇ…
ರಾಮದುರ್ಗದ ಶಾಸಕರೂ ಈ ಬಗ್ಗೆ ಬಹಳ ಗಂಭೀರವಾಗಿ ಪರಿಗಣಿಸಬೇಕು.!
ಜನರ ಆರೋಗ್ಯ ಹಾಗೂ ರಾಮದುರ್ಗದ ಸ್ವಚ್ಛತೆ ಮುಖ್ಯ ಇದರಿಂದ ನಮ್ಮ ಇರುವಿಕೆಯ ಶಿಸ್ತು ಗೋಚರ ಆಗುವುದು ಮತ್ತು ನಮ್ಮ ನಾಗರಿಕ ಬದುಕಿನ ಮೇಲಸ್ತರ-ಕೆಳಸ್ತರದ ಅರಿವು ಆಗುವುದು.
ಜನರು ಬೆಳಿಗ್ಗೆ-ಸಾಯಂಕಾಲ ರಾಮದುರ್ಗದ ಹೊಸ ಬ್ರಿಜ್ ಮತ್ತು ಹಳೆಯ ಬ್ರಿಜ್ ಕಡೆಗೇ ವಾಕಿಂಗ್ ಬರುತ್ತಾರೆ ಮುಳ್ಳೂರ ಘಾಟ್ ರಸ್ತೆಯ ಕಡೆಗೆಲ್ಲಾ ಹೋಗ್ತಾರೆ ಆದರೆ ಈ ಎರಡೂ ಬ್ರಿಡ್ಜ್ ಗಳ ಅಕ್ಕಪಕ್ಕದ ರಸ್ತೆಯ ಅಕ್ಕಪಕ್ಕ ಇಂಥ ಬ್ರಹ್ಮಾಂಡ ಹೊಲಸು ದುರ್ಗಮ ವಾತಾವರಣ ಇದ್ದಲ್ಲಿ ಜನರಿಗೆ ಎಂಥ ಅನುಭವ ಆಗ್ತದೆ ಅನ್ನೋದನ್ನ ಕೊಂಚ ಕಲ್ಪನೆ ಮಾಡಿಕೊಳ್ಳಿ..!! ಮಾರಾಯರೇ..ರಾಮದುರ್ಗ ಆರೋಗ್ಯ ಅಧಿಕಾರಿಗಳೇ..ಮತ್ತು ರಾಮದುರ್ಗ ಪುರಸಭೆಯ ಮುಖ್ಯ ಅಧಿಕಾರಿಗಳೇ..!!
“ರಾಮದುರ್ಗದ ಶಾಸಕರು ಸರ್ಕಾರದ ಮುಖ್ಯ ಸಚೇತಕರಾದ ಸನ್ಮಾನ್ಯ ಶ್ರೀ ಅಶೋಕ.ಮ.ಪಟ್ಟಣ ಅಣ್ಣಾರವರೇ..”ಈ ಬಗ್ಗೆ ಕೊಂಚ ಲಕ್ಷ್ಯ ಕೊಡಿ..ಎಂದು ನಾವು ಈಗ ಸಾರ್ವಜನಿಕ ಹಿತದೃಷ್ಟಿಯ ಪರವಾಗಿ ಹೀಗೆ ಅನ್ನಲೇಬೇಕಾಗಿದೆ. ದಯವಿಟ್ಟು “ರಾಮದುರ್ಗ ಸ್ವಚ್ಛ ಮತ್ತು ಹಸಿರು ಪರಿಸರದಿಂದ ಕೂಡಿರಲಿ..” ಇದರಿಂದ ನಮ್ಮ ಜೀವನದ ಪದ್ದತಿಯ ಗುಣಮಟ್ಟ ಗೊತ್ತಾಗುವುದು.ಹೌದಲ್ಲರೀ ಮತ್ತ..!!??
ವರದಿ-ಕರಿಯಪ್ಪ.ಮಾ.ಮಾದರ