ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ:
5 ತಿಂಗಳಿನಿಂದ ರೈತನ ಮಿತ್ರ ಬೆಳೆ ‘ಕೆಂಪು ಮೆಣಸಿನಕಾಯಿ’ ಬೆಲೆ ಇಲ್ಲದೆ ರೈತರ ಮನೆಗಳಲ್ಲಿ ಹಾಗೂ ಹವಾನಿಯಂತ್ರಣ ಉಗ್ರಾಣದಲ್ಲಿ ಸಂಗ್ರಹಿಸಿ ಇಟ್ಟ ಮೆಣಸಿನಕಾಯಿ ಬೆಳೆಯು ಇಟ್ಟಲ್ಲಿಯೇ ಕಪ್ಪಾಗುತ್ತಿದ್ದು ಮೆಣಸಿನಕಾಯಿ ತನ್ನ ಗುಣಮಟ್ಟವನ್ನು ಕಳೆದುಕೊಂಡು ಹಾಳಾಗುತ್ತಿದೆ ಬೆಳೆ ಬರುವ ಮೊದಲು ಕ್ವಿಂಟಾಲಿಗೆ 60 ಸಾವಿರ ಇದ್ದ ಬೆಲೆ,ಬೆಲೆ ಕುಸಿತದಿಂದ 6 ರಿಂದ 8 ಸಾವಿರಕ್ಕೆ ಬಂದು ನಿಂತಿದೆ ಹೀಗಾಗಿ ರೈತರು ಬೆಳೆಯನ್ನು ಮಾರದೇ ಮನೆಯಲ್ಲಿ ಸಂಗ್ರಹ ಮಾಡಿ ಇಟ್ಟಿದ್ದಾರೆ ಆದರೆ ಸಂಗ್ರಹಿಸಿ ಇಟ್ಟಿರುವ ಕೆಂಪು ಮೆಣಸಿನಕಾಯಿ ಬೆಳೆಯು ಕಪ್ಪಾಗುತ್ತಿರುವುದು ಕಂಡು ಬರುತ್ತಿದೆ ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಒಕ್ಕಲಿಗ ಒಕ್ಕದಿದ್ದರೆ,ಬಿಕ್ಕುವುದು ಜಗವೆಲ್ಲಾ ಎಂಬ ಮಾತು ಇಡೀ ರೈತ ಸಮುದಾಯದ ಪ್ರಾಮುಖ್ಯತೆಯನ್ನು ಸಾರುತ್ತದೆ.ಅಂದರೆ ಕೆಂಪು ಮೆಣಸಿನಕಾಯಿ ಬೆಳೆಯನ್ನು ಬೆಳೆದ ರೈತನ ಸ್ಥಿತಿ ಮಾತ್ರ ಶೋಚನಿಯವಾಗಿದೆ.ಅವರ ಪರಿಸ್ಥಿತಿ ಮೆಣಸಿನಕಾಯಿ ಬೆಳೆಯನ್ನು ಒಕ್ಕಿದರೂ ಒಕ್ಕದಂತಾಗಿದೆ.ಬೆಲೆ ಬರಬಹುದು ಎಂದು ಜಾತಕ ಪಕ್ಷಿಯಂತೆ ಕಾದು ಕುಳಿತ ರೈತರ ಮನೆಯಲ್ಲಿ ಮೆಣಸಿನಕಾಯಿ ಬೆಳೆಯು ಇಟ್ಟಲ್ಲಿ ಬೂಶ್ಟ್ ಬಂದು ಹಾಳಾಗುತ್ತಿದ್ದು,ಬೆಳೆಯನ್ನು ಇಟ್ಟುಕೊಳ್ಳಲಾರದೆ ತಿಪ್ಪೆಗೆ ಚಲ್ಲುವಂತಹ ಪರಿಸ್ಥಿತಿ ಬಂದಿದೆ.ಪ್ರತಿ ಮನೆಯಲ್ಲಿಯೂ ರೈತರು ಮೆಣಸಿನಕಾಯಿ ಸಂಗ್ರಹ ಮಾಡಿರುವುದು ಸಾಮಾನ್ಯ ದೃಶ್ಯವಾಗಿದೆ.ಕೆಲವು ರೈತರು ಖರ್ಚು ಮಾಡಿ ಸಂಗ್ರಹಗಾರದಲ್ಲಿ ಇಟ್ಟು ಬೆಲೆ ಇಲ್ಲದೆ ಕೈ ಚೆಲ್ಲಿ ಕುಳಿತಿದ್ದಾರೆ ಸರ್ಕಾರ ಇದಕ್ಕೆ ಸೂಕ್ತ ಬೆಲೆಯನ್ನು ಕಲ್ಪಿಸಬೇಕೆಂದು ರೈತರಾದ ಮಲ್ಲಣ್ಣ ದಾದ್ಮಿ,ಪ್ರವೀಣ ಹಳ್ಳಿಕೇರಿ,ಧರ್ಮಣ್ಣ ಮಾಡಳ್ಳಿ, ಪ್ರವೀಣ ಹಕ್ಕಾಪಕ್ಕಿ,ಶಂಕ್ರಪ್ಪ ಶಗಣಿ,ಧರ್ಮಣ್ಣ ಬೂಸನಗೌಡ್ರ,ಹನಮಂತಪ್ಪ ಪಟ್ಟೇದ,ಮಲ್ಲಣ್ಣ ಪಾಟೀಲ,ಮುತ್ತಪ್ಪ ಹಳ್ಳಿಕೇರಿ ಮುಂತಾದ ರೈತರು ಆಗ್ರಹಿಸಿದ್ದಾರೆ.
BOX
ಮನೆಯಲ್ಲಿ ಸಂಗ್ರಹಿಸಿ ಇಟ್ಟ ನಿಟ್ಟನ್ನು ಬೆಲೆ ಕುಸಿತದಿಂದ ಹೆಚ್ಚು ಖರ್ಚು ಮಾಡಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 60 ಸಾವಿರ ರೂಪಾಯಿ ಇದ್ದ ಬೆಲೆಯು ಸಧ್ಯ 6 ಸಾವಿರಕ್ಕೆ ಇಳಿದಿದೆ.ಇದರಿಂದ ರೈತರು ಚಿಂತೆಗೆ ಈಡಾಗಿದ್ದಾರೆ ಎನ್ನುತ್ತಾರೆ ರೈತರಾದ ಎನ್ ಎಸ್.ಹೊಸಮನಿ,ಗೊಂವಿದಪ್ಪ ಸಾವಣ್ಣವರ.
ವರದಿ:ನಿಂಗರಾಜ ತಾಳಿ