ಬಾಗಲಕೋಟೆ/ಅಮೀನಗಡ:ಹುನಗುಂದ ತಾಲೂಕಿನಲ್ಲಿ ಏಕಕಾಲದಲ್ಲಿ ಒಂದು ನೂರು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಅಳವಡಿಸಿದ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಕಾರ್ಯ ಶ್ಲಾಘನೀಯವಾದುದು ಎಂದು ಕಾಂಗ್ರೆಸ್ ಮುಖಂಡ ವಿಜಯ ಮಹಾಂತೇಶ ಗದ್ದನಕೇರಿ ಹೇಳಿದರು.
ಅವರು ಹುನಗುಂದ ತಾಲೂಕಿನ ಸೂಳೇಬಾವಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಆವರಣದಲ್ಲಿ ಜರುಗಿದ ನೂರು ಶಾಲೆಗಳ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸರಕಾರಿ ಶಾಲೆಗಳ ಬಡ ಮಕ್ಕಳ ಉನ್ನತ ಶಿಕ್ಷಣದ ಕನಸು,ಗುಣಮಟ್ಟದ ಶಿಕ್ಷಣದ ಅರಿವು, ದಾಖಲಾತಿ ಹೆಚ್ಚಳ,ಸರಕಾರಿ ಸರಕಾರಿ ಶಾಲೆಗಳ ಮೇಲಿನ ಶಾಸಕರ ವಿಶೇಷ ಕಾಳಜಿಯ ಫಲವೇ ಸ್ಮಾರ್ಟ್ ಕ್ಲಾಸ್ ಗಳು. ಶಾಸಕರ ಈ ಕಾರ್ಯ ಇತರರಿಗೆ ಮಾದರಿಯಾದದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸರಕಾರ ಗುಣಮಟ್ಟದ ಶಿಕ್ಷಕರನ್ನು ಬಹು ಬಗೆಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಿ ನೇಮಕ ಮಾಡಿದರೂ ಬಹುತೇಕ ಪಾಲಕರು ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಾರೆ.ಇದಕ್ಕೆ ಕಾರಣ ಮೂಲಭೂತ ಸೌಲಭ್ಯಗಳ ಕೊರತೆ. ಇದನ್ನು ಮನಗಂಡು ಶಾಲೆ ಮತ್ತು ಶಾಲಾ ವ್ಯವಸ್ಥೆಯನ್ನು ಸ್ಮಾರ್ಟ್ ಆಗಿಸುವ ಸಾಹಸಕ್ಕೆ ಕೈ ಹಾಕಿದ್ದೇನೆ.ಎಲ್ಲಾ ಶಿಕ್ಷಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಿ ಸರ್ಕಾರಿ ಶಾಲೆಗಳತ್ತ ಪಾಲಕರನ್ನು ಆಕರ್ಷಿಸುವಂತಾಗಬೇಕು ಎಂದರು.ಇದೇ ಸಂದರ್ಭದಲ್ಲಿ ಸರಕಾರಿ ಶಾಲೆಗಳ ಸಬಲೀಕರಣದಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಅಳವಡಿಸುವ ಮೂಲಕ ಶೈಕ್ಷಣಿಕ ಕಾಳಜಿ ಮೆರೆದ ಶಾಸಕರನ್ನು ಶಾಲಾ ಶಿಕ್ಷಣ ಇಲಾಖೆಯ ಸೂಳೇಬಾವಿ,ನಾಗೂರು,ಹುನಗುಂದ, ಗಂಗೂರು,ಬಿಂಜವಾಡಿಗಿ,ಹಿರೇಮಾಗಿ,ಚಿತ್ತರಗಿ ಮೊದಲಾದ ಕ್ಲಸ್ಟರ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನ ಮಠ ಇಳಕಲ್ಲದ ಗುರುಮಹಾಂತ ಶ್ರೀಗಳು ಸಾನಿಧ್ಯ ವಹಿಸಿದ್ದರು ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ,ಗ್ರಾಮ ಪಂಚಾಯತಿ ಅಧ್ಯಕ್ಷ ಪಿಡ್ಡಪ್ಪ ಕುರಿ,ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೆದಾರ,ನಿರ್ಮಿತಿ ಕೇಂದ್ರದ ಶಂಕರಲಿಂಗ ಗೋಗಿ, ಭರತ್,ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ವಿನೋದಕುಮಾರ್ ಭೋವಿ,ಇಸಿಒ ಎಂ ಎಚ್ ಗೌಡರ, ಮುಖಂಡರಾದ ಗಂಗಾಧರ ದೊಡಮನಿ, ದುರ್ಗಪ್ಪ ಹೊಸಮನಿ, ರೆಹಮಾನಸಾಬ್ ದೊಡಮನಿ, ಮಹಾಂತಪ್ಪ ಭದ್ರಣ್ಣವರ, ವಿರೂಪಾಕ್ಷ ಧೂಪದ, ದೇವರಾಜ ಕಮತಗಿ, ಹುಲಗಪ್ಪ ಕುರಿ, ಗಿರಿಯಪ್ಪ ಆಲೂರ, ಸಂಗಪ್ಪ ಚಲವಾದಿ, ಮಹಾಂತೇಶ ಹುಲ್ಯಾಳ, ಸಿದ್ದು ಶೀಲವಂತರ, ಡಿ.ಎಂ. ಬಾಗವಾನ್, ಸಂಗಮೇಶ ಹೊದ್ಲೂರ, ಅಶೋಕ ಬಳ್ಳಾ, ಶ್ರೇಯಾಂಶ ಕೋಲಾರ, ಗೀತಾ ತಾರಿವಾಳ, ಹೇಮಾ ಜಮಖಂಡಿ ಮುಂತಾದವರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.