ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೆಳಗಾವಿ ರೈಲು ನಿಲ್ದಾಣಕ್ಕೆ ವೀರ ಸಿಂಧೂರ ಲಕ್ಷ್ಮಣ ಹೆಸರು ನಾಮಕರಣ ಮಾಡುವಂತೆ ಮನವಿ ಮಾಡಿದ ಮಹೇಶ ಶಿಗೀಹಳ್ಳಿ

ಬೆಳಗಾವಿ ರೈಲು ನಿಲ್ದಾಣಕ್ಕೆ ಸ್ವತಂತ್ರ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನ ಹೆಸರು ನಾಮಕರಣ ಮಾಡುವಂತೆ ಸಂಸದರು,ಕರ್ನಾಟಕ ರಾಜ್ಯದ ರೈಲ್ವೆ ಸಚಿವರಾದ ವಿ ಸೋಮಣ್ಣರವರಿಗೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ.)ರಾಜ್ಯಾಧ್ಯಕ್ಷರಾದ ಮಹೇಶ ಎಸ್ ಶಿಗೀಹಳ್ಳಿ ರವರು ಮನವಿ ಮಾಡಿ ಮತ್ತು ವೀರ ಸಿಂಧೂರ ಲಕ್ಷ್ಮಣನ ಬಗ್ಗೆ ವಿವರಣೆ ಮಾಡಿದರು.ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಕ್ಕೆ ಸಿಂಧೂರ ಲಕ್ಷ್ಮಣನ ಕೊಡುಗೆ ಅಪಾರವಾದದ್ದು.ಬ್ರಿಟಿಷರು ಆಗಿನ ಕಾಲದಲ್ಲಿ ಬಡಜನರಿಂದ ಹೆಚ್ಚಿನ ಕಂದಾಯ ವಸೂಲಿ ಮಾಡಿ ತಮ್ಮ ಖಜಾನೆಯಲ್ಲಿ ಬಚ್ಚಿಡುತಿದ್ದ ಸಂಪತ್ತನ್ನು ವೀರ ಸಿಂಧೂರ ಲಕ್ಷ್ಮಣ ಖಜಾನೆಯನ್ನು ಲೂಟಿ ಮಾಡಿ ಬಡಜನರಿಗೆ ಹಂಚುತ್ತಿದ್ದರು.ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಬಡಜನರಿಗೆ ಸಿಂಧೂರ ಲಕ್ಷ್ಮಣ ದೇವರಾಗಿದ್ದರು ಹಾಗೂ ಬ್ರಿಟಿಷರ ವಿರುದ್ಧ ಹೋರಾಟವನ್ನು ನಡೆಸಿ ನಮ್ಮ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದರು ಈ ಮಹಾಶೂರನ ಇತಿಹಾಸ ಬಹುದೊಡ್ಡದು ಆದರೆ ಇಂತಹ ಒಬ್ಬ ಸ್ವತಂತ್ರ ಹೋರಾಟಗಾರರನ್ನು ಸರ್ಕಾರ ಗುರುತಿಸಲು ವಿಫಲವಾಗಿದೆ.ಸ್ವತಂತ್ರ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನ ಹೆಸರಲ್ಲಿ ಯಾವುದೇ ಮುಖ್ಯ ಸ್ಥಳಗಳಿಗೆ ರೈಲು ನಿಲ್ದಾಣಗಳಿಗೆ ರೈಲುಗಳಿಗೆ ಹಾಗೂ ವಿಮಾನ ನಿಲ್ದಾಣಗಳಿಗೆ ಮೇಲುಸೇತುವೆಗಳಿಗೆ ಹೆಸರಿಲ್ಲ ವೀರ ಸಿಂಧೂರ ಲಕ್ಷ್ಮಣನನ್ನು ಕಡೆಗಣಿಸಿದ್ದು ಖಂಡನೀಯ.ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ಸಿಂಧೂರ ಲಕ್ಷ್ಮಣನಿಗೆ ಸರಕಾರ ಗೌರವ ನೀಡಬೇಕು.ಬೆಳಗಾವಿ ರೈಲು ನಿಲ್ದಾಣಕ್ಕೆ ವೀರ ಸಿಂಧೂರ ಲಕ್ಷ್ಮಣ ಎಂದು ಹೆಸರು ನಾಮಕರಣ ಮಾಡಿ ಬೆಳಗಾವಿ ರೈಲು ನಿಲ್ದಾಣ ಆವರಣದ ಮುಂಭಾಗದಲ್ಲಿ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಈಗಾಗಲೇ 3 ವರ್ಷಗಳಿಂದ ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಇದ್ದ ಸಚಿವರುಗಳಿಗೆ ಬೆಳಗಾವಿಯಲ್ಲಿರುವ ಸಿಂಧೂರ ಲಕ್ಷ್ಮಣ ಅಭಿಮಾನಿ ಬಳಗದಿಂದ ಹಾಗೂ ವಿವಿಧ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಮನವಿ ಮಾಡಿದ್ದಾರೆ.ಈ ಎಲ್ಲಾ ಮನವಿ ಪತ್ರಗಳನ್ನು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ ರವರಿಗೆ ಮತ್ತು ಪ್ರಧಾನಿ ಮಂತ್ರಿ ಮೋದಿ ರವರಿಗೆ ಕರ್ನಾಟಕ ರಾಜ್ಯದ ಬಿಜೆಪಿ ಸರಕಾರದ ಮುಖ್ಯಮಂತ್ರಿ ರವರಿಗೆ ಮನವಿ ಮಾಡಲಾಗಿದೆ ಎಂದು ಈಗಿನ ಪ್ರಸ್ತುತ 2024ರ ಸಂಸದರು ಕರ್ನಾಟಕ ರಾಜ್ಯದ ರೈಲ್ವೆ ಸಚಿವರಾದ ವಿ ಸೋಮಣ್ಣ ರವರಿಗೆ ವಿವರಣೆ ನೀಡಿ ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಬದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ.) ಸಂಘಟನೆಯ
ರಾಜ್ಯಾಧ್ಯಕ್ಷರು ಮಹೇಶ ಎಸ್ ಶಿಗೀಹಳ್ಳಿ,ಬೆಳಗಾವಿ ತಾಲೂಕು ಉಪಾಧ್ಯಕ್ಷರು ಶಕ್ತಿಕುಮಾರ ಪಿ ಎಸ್,
ಬೆಳಗಾವಿ ನಗರ ಉಪಾಧ್ಯಕ್ಷರು ಸಚಿನ ಕೊಲ್ಕರ,
ವಿಜಯಪುರ ಜಿಲ್ಲೆಯ ಮುಖಂಡರು ಮಂಜುನಾಥ್ ಪೂಜಾರ ಹಾಗೂ ಇನ್ನುಳಿದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಕರಿಯಪ್ಪ ಮಾ ಮಾದರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ