ಬೀದರ್ ತಾಲೂಕಿನ ಚಿಕಪೇಟ್ ಗ್ರಾಮದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಶ್ರೀ ದಿ.ಶಾಂತಪ್ಪ ಕಾಂಬಳೆ ಚಿಕಪೇಟ್ ವೇದಿಕೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ 500 ಜೋಡಿಗಳ ಸರಳ ಸಾಮೂಹಿಕ ವಿವಾಹವನ್ನು ಕೈಗೊಳ್ಳಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಧಮ್ಮಾನಂದ ಮಹಾಥೇರೋ ಭಂತೆಜಿ ವೈಶಾಲಿನಗರ ಬುದ್ಧ ವಿಹಾರ ಆಣದೂರ ವಹಿಸಿ,ನವಜೋಡಿಗಳ ಮದುವೆ ಕಾರ್ಯ ಮಾಡಿಕೊಟ್ಟಿದರು,ಈ ಕಾರ್ಯಕ್ರಮವನ್ನು ಪೌರಾಡಳಿತ ಸಚಿವರಾದ ರಹೀಂ ಖಾನ್ ರವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 500 ಜೋಡಿಗಳು ಸರಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ,ತನ್ನ ಹೊಸ ಜೀವನಕ್ಕೆ ದಾಪುಗಾಲು ಇಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ರಹೀಂ ಖಾನ್ ರವರು ಸರಳ ಸಾಮೂಹಿಕ ವಿವಾಹ ಮಾಡಿಕೊಂಡ ಜೋಡಿಗಳಿಗೆ ಶುಭಾಷಯವನ್ನು ತಿಳಿಸಿ,ಮುಂದಿನ ದಿನಗಳಲ್ಲಿ ತಾವುಗಳು ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು,ಕಷ್ಟ,ಸುಖ ಏನೇ ಬರಲಿ ಹೊಂದಿಕೊಂಡು ಜೀವನ ನಡೆಸಿಕೊಂಡು ಹೋಗಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಅವರು ಮಾತನಾಡಿ ನವ ಜೋಡಿಗಳು ಹೇಗೆ ಕೂಡಿ ಬಾಳಬೇಕೆಂದು ಜೀವನವನ್ನು ಎತ್ತರಕ್ಕೆ ಬೆಳೆಯಬೇಕೆಂಬ ಬಗ್ಗೆ ತಿಳಿಸಿದರು ಹಾಗೂ ಕಾರ್ಯಕ್ರಮದಲ್ಲಿ ಇನ್ನೊರ್ವ ಅತಿಥಿಯಾದ ಶ್ರೀಪತರಾವ ದೀನೆಯವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಅವಿನಾಶ ದೀನೆಯವರು ವಹಿಸಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿಯಾದ ಶ್ರೀಮತಿ ಸಿಂಧು ಎಚ್.ಎಸ್.ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯಾದ ಶಿವು ಮಾನಪ್ಪಾ, ಹಿರಿಯ ಮುಖಂಡರಾದ ಶ್ರೀಪತರಾವ ದೀನೆ,ಅಮೃತರಾವ ಚಿಮಕೋಡೆ,ಅನೀಲ ಗಂಜಕರ್ ಸದಸ್ಯರು ನಗರಸಭೆ ಬೀದರ,ವೈಜಿನಾಥ ಕಾಂಬಳೆ,ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಮರಖಲ್,ಖಲೀಲ್ ಮಿಯಾ ಗುತ್ತೆದಾರ ಸದಸ್ಯರು ಗ್ರಾಮ ಪಂಚಾಯತ್ ಮರಖಲ್,ವಿಜಯಕುಮಾರ ಸೊನಾರೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರು ಮತ್ತು ಅತಿಥಿಗಳಾಗಿ ಅನೀಲ ಮೇಲ್ದೊಡ್ಡಿ,ಸಮಾಜ ಕಲ್ಯಾಣ ಇಲಾಖೆ ಔರಾದ,ಸುಭಾಷ ನಾಗೂರೆ ಸಮಾಜ ಕಲ್ಯಾಣ ಇಲಾಖೆ ಬೀದರ, ಸತೀಶ ಸಂಗನ್ ಸಹಾಯಕ ನಿರ್ದೇಶಕರು,ಸಮಾಜ ಕಲ್ಯಾಣ ಇಲಾಖೆ ಭಾಲ್ಕಿ, ದಿಲಿಪ ಯನಗುಂದೆ ವಕೀಲರು ಔರಾದ,ಉಮೇಶ ಜಾಬಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಮರಖಲ್, ಗೋರಖನಾಥ ವಾಘಮಾರೆ ಶುಶ್ರೂಷ ವೈದ್ಯಾಧಿಕಾರಿಗಳು ಸಂತಪೂರ, ಶ್ರೀಕಾಂತ ಕುಂದೆ, ಅಶೋಕ ದೊಪ್ಪೂರೆ, ವಿನೋದ ಪಾಂಚಾಳ, ಶಿವಾಜಿ ಸಾಖರೆ, ರಮೇಶ ಬಾಬು, ವಿಜಯಕುಮಾರ ಕಸ್ತೂರೆ, ದೇವೆಂದ್ರ ಕಾಂಬಳೆ, ರಾಜಕುಮಾರ ಜ್ಯೋತಿ, ಶಿವರಾಜ ಸಾಗರ, ಮಹಬೂಬ, ಸಂತೋಷ, ಪ್ರದೀಪ ಸಾಗರ ಹಾಗೂ ಕಲ್ಯಾಣರಾವ ಗೂನಳ್ಳಿಕರ್, ಓಂಪ್ರಕಾಶ ಕಾಂಬಳೆ, ಆಯೋಜಕರಾದ ಭಗತ್ ಸಿಂಧೆ, ಸಂತೋಷ ಮುದ್ದಾ, ಕಾರ್ಯಕ್ರಮಕದ ನಿರೂಪಣೆಯನ್ನು ಎನ್.ಎಂ. ಸಾಮ್ರಾಟ್ ಮಾಡಿದರು,ವಂದನಾರ್ಪಣೆಯನ್ನು ರಾಹುಲ ಡಾಂಗೆಯವರು ವಹಿಸಿಕೊಂಡರು.
ವರದಿ:ರೋಹನ್ ವಾಘಮಾರೆ