ಚಿತ್ತಾಪುರ:ಬೇಕಾಬಿಟ್ಟಿಯಾಗಿ ದ್ವಿಚಕ್ರ ವಾಹನ ಸವಾರರಿಗೆ, ಸರಿಯಾದ ದಾಖಲೆ ಇಲ್ಲದ ಸವಾರರಿಗೆ ಹಾಗೂ ಸರಿಯಾದ ನಂಬರ್ ಪ್ಲೇಟ್ ಅಳವಡಿಸದೆ ಇದ್ದ ವಾಹನ ಸವಾರರಿಗೆ ಚಿತ್ತಾಪುರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಪಟ್ಟಣದ ಲಾಡ್ಡಿಂಗ್ ಕ್ರಾಸ್,ಬಸ್ ನಿಲ್ದಾಣ, ಜನತಾ ಬಜಾರ್, ಅಂಬೇಡ್ಕರ್ ವೃತ್ತ,ನಾಗಾವಿ ವೃತ್ತ ಮತ್ತು ಬಸ್ ಡಿಪೋ ಹತ್ತಿರ ದಲ್ಲಿ ಶಹಾಬಾದದ್ ಉಪ ವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ ಮತ್ತು ಸಿಪಿಐ ಚಂದ್ರಶೇಖರ ತಿಗಡಿ ಅವರ ಮಾರ್ಗದರ್ಶನದಲ್ಲಿ ಚಿತ್ತಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಶೈಲ ಅಂಬಾಟಿ ಅವರು ಪಟ್ಟಣದಲ್ಲಿ ಅತಿವೇಗದ ವಾಹನ ಸವಾರರು, ಸೂಕ್ತ ದಾಖಲೆ ಇಲ್ಲದೆ ಸವಾರಿ ಮಾಡುವ ದ್ವಿಚಕ್ರ ವಾಹನ ಸವಾರರಿಗೆ, ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ, ನಂಬರ್ ಪ್ಲೇಟ್ ನಲ್ಲಿ ದೋಷ ಇರುವ ವಾಹನ ಸವಾರರಿಗೆ ಹಾಗೂ ಹೆಚ್ಚು ಧ್ವನಿ ಮಾಲಿನ್ಯ ಮಾಡಿ ರಸ್ತೆ ನಿಯಮ ಉಲ್ಲಘನೆ ಮಾಡುತ್ತಿರುವ ವಾಹನ ಸವಾರರನ್ನು ಕಾರ್ಯಾಚರಣೆ ನಡೆಸಿ ಒಟ್ಟು 44 ಬೈಕುಗಳನ್ನು ಜಪ್ತಿ ಮಾಡಿ ದಂಡ ವಿಧಿಸುವ ಮೂಲಕ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ ಅಲ್ಲದೇ ಸಿಪಿಐ ಚಂದ್ರಶೇಖರ ತಿಗಡಿ ಪಿಎಸ್‌ಐ ಶ್ರೀಶೈಲ ಅಂಬಾಟಿ ಮತ್ತು ಸಿಬ್ಬಂದಿಗಳು ವಾಹನ ಸವಾರರಿಗೆ ರಸ್ತೆ ಸುರಕ್ಷತಾ ಸಪ್ತಾಹದ ಬಗ್ಗೆ ಅರಿವು ಮೂಡಿಸಿದರು ಈ ಕುರಿತು ಪ್ರತಿಕ್ರಿಯೆ ನೀಡಿದ ಪಿಎಸ್‌ಐ ಶ್ರೀಶೈಲ ಅಂಬಾಟಿ ರಸ್ತೆ ನಿಯಮ ಉಲ್ಲಂಘಿಸಿದ್ದಾರೆ ವಾಹನ ಚಲಾಯಿಸುವವರಿಗೆ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಬೈಕ್ ಸವಾರರು ಸೂಕ್ತ ದಾಖಲೆ ಇಟ್ಟುಕೊಂಡು ಮತ್ತು ಕಡ್ಡಾಯವಾಗಿ ಹೆಲೈಟ್ ಧರಿಸಿ ವಾಹನ ಚಲಾಯಿಸಬೇಕು ಅಲ್ಲದೆ ವಯಸ್ಕರಲ್ಲದ ಬಾಲಕರಿಗೆ ವಾಹನ ಚಲಾಯಿಸಲು ನೀಡಿದ ಪಾಲಕರಿಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವರದಿ ಮೊಹಮ್ಮದ್ ಅಲಿ,ಚಿತ್ತಾಪುರ