ತುಮಕೂರು ಜಿಲ್ಲಾ ಪಂಚಾಯಿತಿ,ತಾಲೂಕು ಪಂಚಾಯಿತಿ,ಜಿಲ್ಲಾ ಮಲೇರಿಯಾ ಅಧಿಕಾರಿಗಳು, ತಾಲೂಕ ಆರೋಗ್ಯ ಅಧಿಕಾರಿಗಳು,ಪ್ರಾಥಮಿಕ ಆರೋಗ್ಯ ಕೇಂದ್ರ ಮದಲೂರ್,ಶಿರಾ ತಾಲೂಕು ತುಮಕೂರು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಲೇರಿಯ ವಿರೋಧಿ ಮಾಸಚರಣೆಯನ್ನು ಎಂ.ದಾಸರಹಳ್ಳಿ ಶಾಲೆಯಲ್ಲಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮದಲೂರು ಆರೋಗ್ಯ ಕೇಂದ್ರ ನೀರಿಕ್ಷಣಾಧಿಕಾರಿಗಳು ವೆಂಕಟೇಶ್ ಶಾಲಾ ಮಕ್ಕಳಿಗೆ ಮಲೇರಿಯಾದ ರೋಗದ ಬಗ್ಗೆ ವಿಚಾರವನ್ನು ತಿಳಿಸಿದರು ಈ ಸಂದರ್ಭದಲ್ಲಿ ಎಂ ದಾಸರಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ರತ್ನಮ್ಮ ಹಾಗೂ ಅತಿಥಿ ಶಿಕ್ಷಕರಾದ ಕೊಟ್ಟ ಕರಿಯಣ್ಣ ಸಣ್ಣಪ್ಪ ಆಶಾ ಕಾರ್ಯಕರ್ತೆಯಾದ ರೇಣುಕಮ್ಮ ಹಾಗೂ ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ ಕೊಟ್ಟ ಕರಿಯಣ್ಣ