ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕು ಪಂಚಾಯತಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಇಂದು ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಹಾಗೂ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರವನ್ನು ಒಳಗೊಂಡಂತೆ ಜಂಟಿಯಾಗಿ ಕೆ.ಡಿ.ಪಿ. ಸಭೆ ನಡೆಸಲಾಯಿತು.ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್.ಎನ್. ಟಿ. ಅವರು ಮಾತನಾಡಿ, ಡೆಂಗ್ಯೂ ಜ್ವರ ತೀವ್ರತೆಯ ತಪ್ಪಿಸಲು,ಕೊಟ್ಟೂರು ತಾಲೂಕಿನ ಮತ್ತು ಕೂಡ್ಲಿಗಿ ಕ್ಷೇತ್ರದ ಉಜ್ಜಿನಿ, ನಿಂಬಳಗೆರೆ,ತೂಲಹಳ್ಳಿ, ಕಾಳಾಪುರ, ನಾಗರಕಟ್ಟೆ, ಗ್ರಾ. ಪಂ. ಕಡೆಯಿಂದ ಡೆಂಗ್ಯೂ ಜ್ವರವನ್ನು ತಪ್ಪಿಸಲು ಮುನ್ನೆಚ್ಚರಿಕೆಯಿಂದ ಗ್ರಾಮ-ಪಟ್ಟಣ ಪಂಚಾಯತಿ ಹಾಗೂ ಖಾಸಗಿ ಸಂಘ ಸಂಸ್ಥೆಗಳ ಸಹಕಾರ ಜೊತೆಗೆ ಸ್ವಚ್ಚತೆಗೆ ಗಮನ ಕೊಡಬೇಕು.ಅನೇಕ ದಿನಗಳಿಂದ ಕಬ್ಬಿಣದ ಕಂಬದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅನ್ನು ಕೂಡಲೇ ದುರಸ್ತಿ ಮಾಡಬೇಕು ಎಂದೂ ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಶಾಸಕರು ಸೂಚಿಸಿದರು.ರೈತರ ಬಗ್ಗೆ ಅಪಾರ ಕಾಳಜಿವಹಿಸುವ ಶಾಸಕರೆಂದರೆ ಕೆ ನೇಮಿರಾಜ್ ನಾಯಕ್ ರವರು ಟ್ರಾನ್ಸ್ ಫಾರ್ಮರ್ ಸುಟ್ಟರೆ ಮತ್ತು ರೈತರ ವಿದ್ಯುತ್ ಸಮಸ್ಯೆಗೆ ಕೂಡಲೇ ಸರಿಪಡಿಸಿಕೊಡಿ ಯಾವುದೇ ರೀತಿ ಹಣ ಪಡೆಯದಂತೆ ಪ್ರಕಾಶ್ ಪತ್ತನೂರು ಎಡಬ್ಲ್ಯೂ ಇವರಿಗೆ ತಿಳಿಸಿದರು ಮತ್ತು ಪಿ ಡಬ್ಲ್ಯೂ ಎಸ್ ಟಿ ಎಸ್ ಸಿ ಹಣ ಪೋಲಾಗಬಾರದು.ಎಸ್ ಟಿ ಹಾಸ್ಟೆಲ್ ಒಂದುವರೆ ಎರಡು ವರ್ಷ ಆಗಿದೆ ಇದು ಏಕೆ ಪೂರ್ಣಗೊಂಡಿಲ್ಲ ಗುತ್ತಿಗೆದಾರರ ಮೇಲೆ ಮಾಡುವಂತೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ತಿಳಿಸಲಾಯಿತು ಹಾಗೂ ವೈದ್ಯಾಧಿಕಾರಿಗಳಿಗೆ ವಿಶೇಷವಾಗಿ ಜನರ ಆರೋಗ್ಯ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಪಿಡಿಒ ಗಳಿಗೆ ಡೆಂಗ್ಯೂ ಜ್ವರದ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ತಿಳಿಸುತ್ತಾ ಕ್ಷೇತ್ರ ಕುರಿತು ಕಾಳಜಿ ವಹಿಸಲು ತಿಳಿಸಿದರು.ಸುಂಕದಕಲ್ಲು ಗ್ರಾಮದ ವಾಂತಿ ಭೇದಿ ಪ್ರಕರಣ, ಸ್ವಚ್ಚತೆಯ ಬಗ್ಗೆ ಕೂಡ್ಲಿಗಿ ಶಾಸಕರು ಯಾಕೆ ನಿರ್ಲಕ್ಷ್ಯ ವಹಿಸಿದ್ದೀರಿ? ಎಂದೂ ಪತ್ರಕರ್ತರು ಪ್ರಶ್ನೆ ಕೇಳಿದರು. ಶಾಸಕರು ಮಾತನಾಡಿ, ಸುಂಕದಕಲ್ಲು ಹಗರಿಬೊಮ್ಮನಹಳ್ಳಿ ಕ್ಷೇತ್ರ-ಕೂಡ್ಲಿಗಿ ಕ್ಷೇತ್ರದ ಮಧ್ಯೆ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡಿದೆ. ಸುಂಕದಕಲ್ಲು ಗ್ರಾಮವನ್ನು ವಿಶೇಷವಾಗಿ ಪರಿಗಣಿಸಿ ಇಡೀ ಊರನ್ನು ಸುತ್ತಿ ಮೂಲ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿರುವೆ. ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಎರಡು ಕೋಟಿ ಅನುದಾನ ತಂದಿರುವೆ. ಮುಂದಿನ ದಿನಗಳಲ್ಲಿ ಅದನ್ನು ಅಭಿವೃದ್ಧಿ ಪಡಿಸುವೆ ಎಂದೂ ತಿಳಿಸಿದರು. ಶಾಸಕರು, ಪತ್ರಕರ್ತರ ಕಾಳಜಿಗೆ ಧನ್ಯವಾದಗಳು ತಿಳಿಸಿದರು. ಸಭೆಯಲ್ಲಿ ಶಾಸಕರು, ಸ್ವಚ್ಚತೆ, ಆರೋಗ್ಯ, ಮೂಲಭೂತ ಸೌಕರ್ಯಗಳು ಮತ್ತು ಇಡೀ ರಾಜ್ಯದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಜೆ. ಜೆ. ಎಂ. ಕಾಮಗಾರಿಯು ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ ಕುಂಠಿತಗೊಂಡಿರುವ ಸಮಸ್ಯೆಯನ್ನು ಬಗೆಹರಿಸಿರುವೆ ಎಂದರು.ರೈತರ ಭೂಮಿಯನ್ನು ವಿವಿಧ ಕಂಪನಿಗಳು ಕೊಳ್ಳೆಹೊಡೆಯುತ್ತಿರುವುದನ್ನು ತಪ್ಪಿಸಲು ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು ಎಂದೂ ಧ್ವನಿಗೂಡಿಸಿದರು.ಎರಡು ಕ್ಷೇತ್ರದ ವಿವಿಧ ಇಲಾಖೆಯ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯವರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.
ವರದಿ:ವೈ.ಮಹೇಶ್ ಕುಮಾರ್,ಕೊಟ್ಟೂರು