ತುಮಕೂರು ಜಿಲ್ಲೆಯ ಪಾವಗಡ ಪುರಸಭೆಯ ಸಭಾಂಗಣದಲ್ಲಿ ಈ ದಿನ ಜರುಗಿದ ಸದಸ್ಯರ ವಿಶೇಷ ಸಭೆಗೆ ಮಾನ್ಯ ಶಾಸಕರಾದ ಹೆಚ್ ವಿ ವೆಂಕಟೇಶ್ ಭಾಗವಹಿಸಿದರು.
ವಾರ್ಡ್ ಗಳಲ್ಲಿರುವ ಸಮಸ್ಯೆಗಳು ಮತ್ತು ಪುರಸಭೆಯಲ್ಲಿನ ಸಿಬ್ಬಂದಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಶೀಘ್ರದಲ್ಲಿ ಪರಿಹಾರ ಮಾಡಿಕೊಡುತ್ತೇನೆಂದು ಶಾಸಕರು ಭರವಸೆ ನೀಡಿದರು.
ಈ ಸಭೆಯಲ್ಲಿ ಮಧುಗಿರಿ ವಿಭಾಗಾಧಿಕಾರಿ ಗೊಟೂರು ಶಿವಪ್ಪ ,ಪುರಸಭಾ ಸದಸ್ಯರುಗಳಾದ ಸುದೇಶ್ ಬಾಬು ,ರವಿ,ರಾಜೇಶ್ ,ವೆಂಕಟರಮಣಪ್ಪ ,ರಾಮಾಂಜಿನಪ್ಪ ,ವೇಲುರಾಜು, ಮೊಹಮ್ಮದ್ ಇಮ್ರಾನ್, ಸಿ ಎನ್ ರವಿ , ಬಳಸುಬ್ರಹ್ಮಣ್ಯ,ನಾಗಭೂಷಣ್ ರೆಡ್ಡಿ , ಗೊರ್ತಿ ನಾಗರಾಜ್ ,ವಿಜಯ್ ಕುಮಾರ್,ಮತ್ತು ತಾಲ್ಲೂಕು ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹನುಮಂತರಾಯಪ್ಪ ,ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಸುನಿತಾ, ಸೇರಿದಂತೆ ಅನೇಕ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.
