ಯಾದಗಿರಿ:ಅಖಿಲ ಭಾರತ ವೀರಶೈವ,ಲಿಂಗಾಯತ ಮಹಾಸಭೆಯ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹಿರಿಯ ಉದ್ಯಮಿ ಚನ್ನಪ್ಪಗೌಡ ಮೋಸಂಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಹಾಸಭೆಯ ಜಿಲ್ಲಾ ಘಟಕದ ಚುನಾವಣೆಯಲ್ಲಿ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿತ್ತು.ಪ್ರತಿಸ್ಪರ್ಧಿಗಳೆಲ್ಲರೂ ನಾಮಪತ್ರ ಹಿಂಪಡೆದಿದ್ದರಿಂದ ಚುನಾವಣಾಧಿಕಾರಿ ಸೇರಿದಂತೆ ಶಾಸಕರು ಹಾಗೂ ಸಮಾಜದ ಗಣ್ಯರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯ ಸದಸ್ಯರು ಚನ್ನಪ್ಪಗೌಡ ಮೋಸಂಬಿ ಅವರು ಯಾದಗಿರಿ ಜಿಲ್ಲೆಯ ಮಹಾಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಅಧಿಕೃತವಾಗಿ ಘೋಷಿಸಿದರು.
ಅಧ್ಯಕ್ಷರ ಜೊತೆಗೆ ಕಾರ್ಯಕಾರಿ ಸಮಿತಿಗೆ ಇಪ್ಪತ್ತು ಜನ ಸದಸ್ಯರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವರದಿ: ಶಿವರಾಜ ಸಾಹುಕಾರ್ ವಡಗೇರಾ