ಬೆಂಗಳೂರು:ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ KPTCL ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ದಿನಾಂಕ 13.07.2024ರ ಬೆಳಿಗ್ಗೆ 10 ಘಂಟೆಯಿ0ದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಖ್ಯಾತ ಸಾಹಿತಿ, ಅಂಕಣಕಾರ, ವಾಗ್ಮಿ
ಶ್ರೀ ಧೀರೇ0ದ್ರ ನಾಗರಹಳ್ಳಿ ಅವರಿಂದ “ಮನುಷ್ಯ ಸ್ವಭಾವ ಮತ್ತು ದೇಹ ಭಾಷೆ” ಬಗ್ಗೆ ಪ್ರಾತ್ಯಕ್ಷಿಕೆಯ ಜೊತೆ ಉಪನ್ಯಾಸ ಹಾಗೂ KPTCL ನಿವೃತ್ತ ಇಂಜಿನಿಯರ್, ತಪಸ್ವಿ ಶ್ರೀ ಬಿ ಶ್ರೀನಿವಾಸನ್ ಅವರಿಂದ ಸ್ವ-ಧ್ಯಾನ ಸ್ವಾನುಭೂತಿ ವಿವರಣೆಯೊಂದಿಗೆ ಪ್ರಾತ್ಯಕ್ಷಿಕೆ ಇರುತ್ತದೆ.
ನಂತರ ಶ್ರೀಮತಿ ಸಂಧ್ಯಾ ಶ್ರೀನಿವಾಸನ್ ಹಾಗೂ ಕು.ಮನೋಜ್ಞಾ ಘನಲಿ0ಗ ಅವರಿಂದ ಭಕ್ತಿ ವೈಭವ ಕುರಿತ ಭರತನಾಟ್ಯ ಕಾರ್ಯಕ್ರಮವಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇದರ ಲೆಕ್ಕಾಧಿಕಾರಿಗಳ ಸಂಘದ ಪ್ರಕಟಣೆ ತಿಳಿಸಿದೆ.
ವರದಿ:ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ