ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘ (ರಿ.)ಸಮೂಹ ಹಾಲು ಶಿಥಲೀಕರಣ ಕೇಂದ್ರ ಮುಂಭಾಗ ಹಾಲು ಉತ್ಪಾದಕರು ಹಾಗೂ ಭಾರತ ಕಿಸಾನ್ ಸಂಘ ವತಿಯಿಂದ ದಿಢೀರ್ ಪ್ರತಿಭಟನೆ ಜರುಗಿತು.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿ,
ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅನ್ಯ ವ್ಯಕ್ತಿಗಳ ಖಾತೆಗೆ ಲಕ್ಷಾಂತರ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಅವ್ಯವಹಾರ ನಡೆಸಿದ್ದಾರೆ.ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ ಹೀಗಾಗಿ ವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಅಲ್ಲಿಯ ತನಕ ಅಧ್ಯಕ್ಷ ರಾಜಕಣ್ಣ ಹಾಗೂ ಕಾರ್ಯದರ್ಶಿ ಮದಲೈಮುತ್ತು ಅವರು ಹುದ್ದೆ ಹಿಂದೆ ಸರಿಯಬಾರದು, ಕಡತಗಳನ್ನು ನಾಶ ಮಾಡಬಾರದು, ಪ್ರತಿಭಟನೆಯ ಒತ್ತಾಯವನ್ನು ಸಭಾ ನಡವಳಿಯಲ್ಲಿ ದಾಖಲು ಆಗಲೇಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಶಾಹುಲ್ ಅಹಮ್ಮದ್ ಹಾಗೂ ಉದ್ದನೂರು ಮಹದೇವಸ್ವಾಮಿ, ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ರಾಜಕಣ್ಣ, ಕಾರ್ಯದರ್ಶಿ ಮೊದಲೈಮುತ್ತು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಅನ್ಯಾಯಕ್ಕೆ ತನಿಖೆ ಮಾಡಿಸಲು ಅಗತ್ಯ ಕ್ರಮವಹಿಸಲಾಗುವುದು, ಬೇಡಿಕೆಗಳಂತೆ ನಡೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಭಾರತ್ ಕಿಸನ್ ಸಂಘದ ಮುಖಂಡರಾದ ಡಾನ್ ಬೊಸ್ಕೊ, ಮಲ್ಲಿಕಾರ್ಜುನ, ಮಣಿಗಾರ ಪ್ರಸಾದ್ ಹಾಗೂ ತೋಮಿಯರ್ ಪಾಳ್ಯ ಹಾಲು ಉತ್ಪಾದಕರು ಚಾರ್ಲೆಸ್, ಸಾಗಯರಾಜ್, ಜ್ಞಾನ ಪ್ರಕಾಶ್, ಚಾರ್ಲೆಸ್, ಜಾನ್, ಪತ್ತಿನಾಧನ್, ಮಂಗಳ, ಚಾರ್ಲ್ಸ್ ಸೇರಿದಂತೆ ಮಹಿಳೆಯರು ಒಳಗೊಂಡು ನೂರಾರು ಹಾಲು ಉತ್ಪಾದಕರು ಪಾಲ್ಗೊಂಡಿದ್ದರು.
ವರದಿ ಉಸ್ಮಾನ್ ಖಾನ್