ತುಮಕೂರು ಜಿಲ್ಲೆಯ ಪಾವಗಡ
ತಾಲ್ಲೂಕಿನ ಕಾರನಾಗನಹಟ್ಟಿಯಲ್ಲಿ ನಡೆಯುತ್ತಿರುವ
ತುಂಗಾ ಭದ್ರಾ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಪರಿಶೀಲಿಸಿ ನಂತರ ಅವರು ಸುದ್ದಿಗಾರರೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಪಾವಗಡ ತಾಲ್ಲೂಕಿನ ಜನರ ಹಲವು ವರ್ಷಗಳ ಕನಸಾಗಿದ್ದ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯು ಶೀಘ್ರದಲ್ಲಿ ಕಾರ್ಯರಂಭವಾಗುವುದು ಎಂದರು.
ತುಂಗಭದ್ರಾ ಕುಡಿಯುವ ನೀರಿನ ಯೋಜನೆ 2132 ಕೋಟಿ ವೆಚ್ಚದಿಂದ ನಿರ್ಮಾಣವಾಗುವ ಯೋಜನೆ ಎಂದು ಚಳ್ಳಕೆರೆಯಿಂದ ಪಾವಗಡ ತಾಲ್ಲೂಕಿಗೆ ಕುಡಿಯುವ ನೀರನ್ನು ಇನ್ನು ಎರಡೂವರೆ ತಿಂಗಳ ಒಳಗೆ ಪ್ರಾರಂಭಿಸಲಾಗುವುದು ಎಂದರು.
2500 ಕಿಲೋಮೀಟರು ವ್ಯಾಪ್ತಿಯ ಯೋಜನೆ ಇದಾಗಿದ್ದು, ಚಳ್ಳಕೆರೆ ಶಾಸಕ ರಘುಮೂರ್ತಿ, ಪಾವಗಡ ಶಾಸಕ ಎಚ್ ಬಿ ವೆಂಕಟೇಶ್ ಕ್ರಿಯಾಶೀಲರಾಗಿ ಯೋಜನೆ ಕಾರ್ಯಗತಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.
ಮಳೆಗಾಲವಾಗಿದ್ದರಿಂದ ಡ್ಯಾಮ್ ನಲ್ಲಿ ನೀರಿರುವಾಗಲೇ ಕಾಮಗಾರಿ ಸಂಪೂರ್ಣಗೊಳಿಸಿ ಎರಡು ಬಾರಿ ಟ್ರಯಲ್ ರನ್ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಮೊದಲ ಬಾರಿಗೆ ಏ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ವಾಟರ್ ಮ್ಯಾನೇಜ್ಮೆಂಟ್ ಎಂಬ ಯೋಜನೆಯ ತಂದ ಏಕೈಕ ಸರ್ಕಾರ ಕಾಂಗ್ರೆಸ್ ಎಂದರು.