ತುಮಕೂರು/ಪಾವಗಡ:ಸ್ವಾಮಿ ವಿವೇಕಾನಂದ ಶ್ರೀ ರಾಮಕೃಷ್ಣ ಸೇವಾಶ್ರಮ ಶೈಕ್ಷಣಿಕ ಅಭಿವೃದ್ಧಿಗಾಗಿ ದತ್ತು ತೆಗೆದುಕೊಂಡಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆ.ರಾಂಪುರ ಇಲ್ಲಿ 2024-25ನೇ ಶೈಕ್ಷಣಿಕ ವರ್ಷಕ್ಕೆ ನೊಂದಣಿಯಾಗಿರುವ 53 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಶಾಲಾ ಬ್ಯಾಗು,ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಗೆ 25 ಕುರ್ಚಿಗಳನ್ನು ನೀಡಲಾಯಿತು. ಕಾರ್ಯಕ್ರಮ ಬಹಳ ಸರಳವಾಗಿ, ಚೊಕ್ಕವಾಗಿ ಏರ್ಪಟ್ಟಿತು. ಪರಮ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ಅಧ್ಯಕ್ಷರು, ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಸದರಿ ಶಾಲೆಯ ಜನಪ್ರಿಯ ಮುಖ್ಯೋಪಾಧ್ಯಾಯರು ಹಾಗೂ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತರಾದ ಶ್ರೀ ಚಂದ್ರಶೇಖರ ರೆಡ್ಡಿ ರವರಿಗೆ ಶ್ರೀ ರಾಮಕೃಷ್ಣ ಸೇವಾಶ್ರಮದ ಪರವಾಗಿ ನೂತನ ಟ್ಯಾಬ್ (TAB) ಅನ್ನು ನೀಡಲಾಯಿತು. ಆಧುನಿಕ ವಿಚಾರಧಾರೆಗಳ ಹಿನ್ನೆಲೆಯಲ್ಲಿ ಮಕ್ಕಳಿಗೆ ಪಾಠ ಪ್ರವಚನವನ್ನು ಮಾಡುವಾಗ ಸಹಕಾರಿಯಾಗುವಂತೆ ಪೂಜ್ಯ ಸ್ವಾಮೀಜಿಯವರು ಟ್ಯಾಬ್ ಅನ್ನು ನೀಡಿರುತ್ತಾರೆ. ಇದೇ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ನೂತನ ಯು.ಪಿ.ಎಸ್., ಬ್ಯಾಟರಿಯ ಘಟಕವನ್ನು ನೀಡಲಾಯಿತು. ಗ್ರಾಮಾಂತರ ಭಾಗದಲ್ಲಿ ಕೆ.ರಾಂಪುರ ಸರ್ಕಾರಿ ಕಿರಿಯ ಪ್ರಾ.ಶಾಲೆ ಅತ್ಯಂತ ವಿಶಿಷ್ಟ ರೀತಿಯಲ್ಲಿ ಪಾಠ ಪ್ರವಚನಗಳನ್ನು ಮಾಡುತ್ತಿದೆ. ಇದರ ಫಲವಾಗಿ ಇಡೀ ಗ್ರಾಮದಿಂದ ಯಾವ ಮಕ್ಕಳೂ ಸಹ ಖಾಸಗಿ ಶಾಲೆಗೆ ಹೋಗದೆ ಇರುವುದು ವಿಶಿಷ್ಟ ಎಂದು ಪೂಜ್ಯ ಸ್ವಾಮೀಜಿಯವರು ತಮ್ಮ ಚೆನ್ನುಡಿಯಲ್ಲಿ ತಿಳಿಸಿದರು. ಈ ಕಾರಣದಿಂದಲೇ ಈ ಶಾಲೆಗೆ ಸರ್ವತೋಮುಖ ಬೆಳವಣಿಗೆಗಾಗಿ ಶ್ರೀ ರಾಮಕೃಷ್ಣ ಸೇವಾಶ್ರಮ ಸದಾ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು. ಶಾಲೆಗೆ ಇನ್ನೂ 25 ಕುರ್ಚಿಗಳು ಹಾಗೂ ಅಂಗನವಾಡಿ ಕೇಂದ್ರಕ್ಕೆ ಕುರ್ಚಿಗಳು ಹಾಗೂ ಇತರ ಪರಿಕರಗಳನ್ನು ಕೊಡಲು ಸ್ವಾಮೀಜಿಯವರು ಮನವಿಯನ್ನು ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮದ ಭಕ್ತರಾದ ಶ್ರೀ ಕೆ.ಎಸ್.ರಾಮಮೂರ್ತಿ, ಶ್ರೀ ತಲ್ಲಂ ವೆಂಕಟೇಶ ಬಾಬು, ಶ್ರೀ ಗೋವಿಂದ ರವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕರು ಮತ್ತು ಭಕ್ತರಾದ ಶ್ರೀ ದೇವರಾಜ್ ರವರು ಅಂಗನವಾಡಿ ಶಾಲೆಗೆ ನೂತನ ಕುಕ್ಕರ್ ಹಾಗೂ ಮಿಕ್ಸಿಯನ್ನು ಕೊಡುಗೆಯಾಗಿ ನೀಡಿದರು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ರಾಂಪುರ ನಾಗೇಶ್ ರವರು ಹಾಗೂ ಕೆ.ರಾಂಪುರದ ಶ್ರೀ ಗೋಪಿ ಹಾಗೂ ಹಿರಿಯರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.