ಕಲಬುರಗಿ:ಹಡಪದ ಅಪ್ಪಣ್ಣ ಸಮಾಜದ ಕಾಯಕ ಯೋಗಿ, ಸಮಾಜದ ನಿಸ್ವಾರ್ಥಿಯ ಸೇವಕ ಮತ್ತು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಸೇವೆಯಲ್ಲಿಯೇ ಈ ಬಡ ಕ್ಷೌರಿಕ ಅನೇಕ ಸಮಾಜಕ್ಕೆ ಮಾದರಿ.ಇಲ್ಲಿಯವರೆಗೆ ಒಟ್ಟು 13 ಕಡೆಯಲ್ಲಿ ಉಚಿತ ಕ್ಷೌರ ಸೇವೆ ಒಟ್ಟು 1350 ಕ್ಕೊ ಅನಾಥರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿದನ್ನು ಗುರುತಿಸಿ ಹಾಗೂ ಸಮಾಜದ ಸಂಘಟನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಇವರ ಅನೇಕ ಕಾರ್ಯವನ್ನು ಗುರುತಿಸಿ ಬೆಂಗಳೂರು ನಗರದ ಜೀ ಟಿವಿ ಕನ್ನಡ ವಾಹಿನಿಯ ವತಿಯಿಂದ ಶ್ರೀ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೆ ರಾಜ್ಯ ಮಟ್ಟದ ಕರ್ನಾಟಕ ಬಿಸ್ನೆಸ್ ಸಾಮ್ರಾಟ್ ಅವಾಡ್೯ ಪ್ರಶಸ್ತಿಗೆ ಸಮಾಜದ ಸಂಘಟನಾ ಕ್ಷೇತ್ರದಲ್ಲಿ “ಕರ್ನಾಟಕ ಬಿಸ್ನೆಸ್ ಸಾಮ್ರಾಟ್ ಪ್ರಶಸ್ತಿ,’ ಸಾಧನಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಇದೇ ಜುಲೈ 12 ರಂದು ಜೀ ಟಿವಿ ಕನ್ನಡ ವಾಹಿನಿ ಬೆಂಗಳೂರು ಅವರ ವತಿಯಿಂದ ಜರುಗುತ್ತಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬಿಸ್ನೆಸ್ ಸಾಮ್ರಾಟ್ ‘ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
