ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಾಗೂ2023/24 ನೆಯ ಸಾಲಿನಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ ವತಿಯಿಂದ ಹಾಗೂ ಬಿಳವಾರ ಗ್ರಾಮದ ಶ್ರೀ ದೊಡ್ಡಪ್ಪಗೌಡ ಎಸ್ ಪಾಟೀಲ್ ನರಿಬೋಳ ಅಭಿಮಾನಿ ಬಳಗದ ವತಿಯಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
1)ಸಂಗೀತ ಬಸವರಾಜ್ 11000
2) ಭಾಗಮ್ಮ ಪರ್ವತ ರೆಡ್ಡಿ 5000
3) ನಂದಿನಿ ಸದಾನಂದ 2500
4) ಭಾಗ್ಯಶ್ರೀ ಜಟ್ಟಪ್ಪ 2500 ರೂಪಾಯಿಗಳನ್ನು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೊಡ್ಡಪ್ಪಗೌಡ ಅಭಿಮಾನಿ ಬಳಗದ ಮುಖ್ಯಸ್ಥರಾದ ಹಣಮಂತ ಬಿ ದಂಡಗುಲ್ಕರ ಉಪಸ್ಥಿತರಿದ್ದರು ಅದೇ ರೀತಿಯಾಗಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹೊನ್ನಪ್ಪ ಸಾಹು ಕೊಡಮನಹಳ್ಳಿ ಅವರು ಭಾಗವಹಿಸಿದ್ದರು.ಅಯ್ಯನಗೌಡ ಪೊಲೀಸ್ ಪಾಟೀಲ್ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗೊಲ್ಲಾಳಪ್ಪ ಮ್ಯಾಗೇರಿ ಮಾಜಿ ತಾಲೂಕ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು ಅದೇ ರೀತಿಯಾಗಿ ಬಿಳವಾರ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಶ್ರೀದೇವಿ ಹನುಮಂತ ದಂಡಗುಲ್ಕರ್ ವಿದ್ಯಾರ್ಥಿಗಳಿಗೆ ಚೆಕಗಳನ್ನೂ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಯತ್ ಸರ್ವ ಸದಸ್ಯರು ಭಾಗವಹಿಸಿದ್ದರು ಮಾಜಿ ಗ್ರಾಮ ಪಂಚಾಯತ್ ಸದಸ್ಯರು ನಬಿ ಪಟೇಲ್ ಶಗೀರ್ ಹಾಗೂ ಶಿವಪುತ್ರ ಗೋಗಿ ಪರಶುರಾಮ್ ದಂಡಗುಲ್ಕರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
