ಕಲಬುರಗಿ:ಜೆಸ್ಕಾಂ ಉಪವಿಭಾಗದ ವ್ಯಾಪ್ತಿಯ ಚಿತ್ತಾಪುರದಲ್ಲಿ ಬರುವ ಅಧಿಕೃತ ನೀರಾವರಿ ಪಂಪ್ ಸೆಟ್ ಗ್ರಾಹಕರು ಅರ್ ಅರ್ ಸಂಖ್ಯೆಗೆ ಕಡ್ಡಾಯವಾಗಿ ಆಧಾರ ಲಿಂಕ್ ಮಾಡಿಸಬೇಕು ಎಂದು ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಸೈಯದ್ ಅನವರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಆಧಾರ್ ಲಿಂಕ್ ಮಾಡದಿದ್ದಲ್ಲಿ ಸರ್ಕಾರವು ಸಬ್ಸಿಡಿಯನ್ನು ಬಿಡುಗಡೆ ಮಾಡುವುದಿಲ್ಲ ಎಂದು ಆದೇಶ ಹೊರಡಿಸಲಾಗಿದೆ ಆದ್ದರಿಂದ
ಪಂಪ್ ಸೆಟ್ ಗ್ರಾಹಕರು ತಮ್ಮ ಆಧಾರ ಲಿಂಕ ಮಾಡಿಸಲು ಸಂಬಂಧಪಟ್ಟ ಲೈನ್ ಮ್ಯಾನ್, ಶಾಖಾಧಿಕಾರಿ ಅಥವಾ ಉಪವಿಭಾಗ ಕಚೇರಿಗೆ ಭೇಟಿ ನೀಡಬೇಕೆಂದು ತಿಳಿಸಿದ್ದಾರೆ.
ವರದಿ ಮೊಹಮ್ಮದ್ ಅಲ್ಲಿ ಚಿತ್ತಾಪುರ