ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ನಗರ ಪೊಲೀಸ್ ವಿಭಾಗದಲ್ಲಿ ಆಪತ್ಬಾಂಧವ (ಸೇಫ್ ಕನೆಕ್ಟ್) ಮತ್ತು ಹೊಯ್ಸಳ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಈ ಮೊದಲು ಸಾರ್ವಜನಿಕರು 112ಗೆ ಕರೆ ಮಾಡಿದಾಗ ಹೊಯ್ಸಳ ಗಸ್ತು ವಾಹನ ಸಂಖ್ಯೆ ಹಾಗೂ ಸಿಎಫ್‌ಎಸ್ ಸಂಖ್ಯೆಯ ಸಂದೇಶ ಹೋಗುತ್ತಿತ್ತು ಇದೀಗ ಅದನ್ನು ಅಪ್‌ಗ್ರೇಡ್ ಮಾಡಿದ್ದು, ಕರೆ ಮಾಡಿದ ಸಾರ್ವಜನಿಕರಿಗೆ ಹೊಯ್ಸಳದ ಲೈವ್ ಲೊಕೇಶನ್ ಲಿಂಕ್ ಕಳುಹಿಸಲಾಗುತ್ತದೆ.
ಆದ್ದರಿಂದ ಹೊಯ್ಸಳ ವಾಹನ ಸಂಚರಿಸುವ ಮಾರ್ಗ, ಅದು ಎಷ್ಟು ದೂರದಲ್ಲಿದೆ, ಸ್ಥಳಕ್ಕೆ ಬರಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ತಿಳಿಯಬಹುದಾಗಿದೆ. ಓಲಾ, ಊಬರ್ ಅಥವಾ ಫುಡ್ ಡೆಲಿವರಿ ಆ್ಯಪ್‌ಗಳ ಮಾದರಿಯಲ್ಲಿ ಸಮಯವನ್ನು ಟ್ರ್ಯಾಕಿಂಗ್ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ