ಶಿವಮೊಗ್ಗ: ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಲ್ಯಾಣ ಸಂಸ್ಥೆ ಹಾಗೂ ಅಂತರಾಷ್ಟೀಯ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆಯ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದು ಈ ಸಂಸ್ಥೆಯ ಉದ್ದೇಶ ಏನೆಂದರೆ ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ , ಶೋಷಣೆ ಹಾಗೂ ಕಾನೂನಾತ್ಮಕ ಸಂವಿಧಾನದ ವಿಚಾರವಾಗಿ ಸಮಾಜದಲ್ಲಿ ನಡೆಯುತ್ತಿರುವಂತಹ ಅಹಿತಕರ ಘಟನೆಗೆ ಸಂಬಂಧಪಟ್ಟಂತೆ ದ್ವನಿ ಎತ್ತುವುದು ಈ ಸಂಸ್ಥೆಯ ಉದ್ದೇಶವಾಗಿದೆ.
ನಿನ್ನೆ ಶಿವಮೊಗ್ಗ ನಗರದ ನೂತನ ಘಟಕ ಹಾಗೂ ಸಮಿತಿಯನ್ನು ರಚಿಸಿ ಈ ಸಮಿತಿಯಿಂದ ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣದ ಘಟಕದ ಉದ್ಘಾಟನೆ ಇಂದು ಶಿವಮೊಗ್ಗದ ಮುಖ್ಯ ಕಚೇರಿಯಲ್ಲಿ ನೆರವೇರಿಸಲಾಯಿತು.
ಉದ್ಘಾಟನಾ ಸಂದರ್ಭದಲ್ಲಿ ರಾಷ್ಟ್ರೀಯ ಸಂಸ್ಥಾಪಕ ನಿರ್ದೇಶಕರಾದಂತಹ ಅಬ್ದುಲ್ ರಜಾಕ್ ಹಾಗೂ ರಾಷ್ಟ್ರೀಯ ನಿರ್ದೇಶಕ ಅಧ್ಯಕ್ಷರು ಸಂತೋಷ್ ಕುಮಾರ್ ಹೊನ್ನೆಗುಂಡಿ ಮತ್ತು ಮುಖ್ಯ ಅತಿಥಿಯಾಗಿ ಅಫ್ತಾಬ್ ಪರ್ವೀಜ್ ಗಳು ಸೇರಿ ಉದ್ಘಾಟಿಸಿ ಮಾನವನ ಹಕ್ಕುಗಳ ಬಗ್ಗೆ ವಿಸ್ತಾರವಾಗಿ ತಿಳಿಸಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ನಗರದ ನೂತನ ಘಟಕದ ಅಧ್ಯಕ್ಷರಾಗಿ ಶ್ರೀಯುತ ಇಮ್ರಾನ್ ಖಾನ್ ಮತ್ತು ಪ್ರದಾನಕಾರ್ಯದರ್ಶಿಯಾಗಿ ಶ್ರೀ ಯುತ ರಾಘವೇಂದ್ರ ರವರನ್ನು ನೇಮಿಸಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಶ್ರೀ ಯುತ ನವೀನ್.ಉಪಾಧ್ಯಕ್ಷರು ನಾಸಿಫ್ ಅಹಮ್ಮದ. ರಾಜ್ಯ ಪ್ರಧಾನಕಾರ್ಯದರ್ಶಿ ಸಾದಿಕ್ , ರಾಜ್ಯ ಕಾರ್ಯಧ್ಯಕ್ಷರು ಮಕೂದುಮ್ ರವರು ಫೈರೋಜ್, ಅಮ್ಜದ್ ಖಾನ್ , ಸಲ್ಮಾನ್, ಆರೀಫ್ ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರಾದಂತಹ ಯುವರಾಜ್ ಶಿವಮೊಗ್ಗ ಜಿಲ್ಲೆಯ ಮಹಿಳಾ ಅಧ್ಯಕ್ಷರಾದಂತಹ ಬೀ ಬಿ ಆಯಿಷಾ ರವರು ಹಾಜರಿದ್ದರು.
ಮುಂದಿನ ದಿನಗಳಲ್ಲಿ ಈ ಸಂಸ್ಥೆ ವತಿಯಿಂದ ಇನ್ನು ಒಳ್ಳೆಯ ಕಾರ್ಯಗಳು ನಡೆಸಲು ಎಲ್ಲರೂ ಕೈ ಜೋಡಿಸೋಣ ಎಂಡು ಎಂದು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕರ್ತರು ಮನವಿ ಮಾಡಿದರು.
ವರದಿ: ಕೊಡಕ್ಕಲ್ ಶಿಪ್ರಸಾದ್,ಶಿವಮೊಗ್ಗ