ಶಿವಮೊಗ್ಗ: ಪ್ರಜಾಪ್ರಭುತ್ವದ ಯಶಸ್ಸು ವಿರೋಧ ಪಕ್ಷಗಳ ರಚನಾತ್ಮಕ ಪಾತ್ರದ ಮೇಲೆ ಅವಲಂಬಿಸಿರುತ್ತದೆ.
ಸರ್ಕಾರವು ತನ್ನ ನೀತಿಗಳ ಬಗ್ಗೆ ಜಾಗರೂಕರಾಗಿರಲು ಮತ್ತು ಜಾಗೃತವಾಗಿರಲು ವಿರೋಧ ಪಕ್ಷದ ನಡೆ ಬಹಳ ಪ್ರಮುಖ ಪಾತ್ರವಹಿಸುತ್ತದೆ.
ಆಡಳಿತ ಸರ್ಕಾರ ಸರ್ವಾಧಿಕಾರಿಯಾಗುವುದನ್ನು ತಡೆಯಲು ವಿರೋಧಪಕ್ಷಗಳ ಜವಾಬ್ದಾರಿ ಪ್ರಮುಖವಾಗಿರುತ್ತದೆ, ಕಳೆದ ಒಂದು ವರ್ಷದಿಂದ ನಮ್ಮ ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ ಸರ್ಕಾರ ಹೆಗ್ಗಿಲ್ಲದೆ ಭ್ರಷ್ಟಾಚಾರಗಳಲ್ಲಿ ಭಾಗಿಯಾಗಿರುವುದು ಎಲ್ಲರಿಗೂ ತಿಳಿಯುತ್ತಿರುವ ಸಂಗತಿಯೇ ಹೌದು.
ಇತ್ತೀಚಿಗಷ್ಟೇ ಬೆಳಕಿಗೆ ಬಂದ ಮೈಸೂರಿನಲ್ಲಿ ನಡೆದಿರುವ ಮುಡಾ ಬಹುಕೋಟಿ ಹಗರಣದ ವಿರುದ್ಧ ಇಂದು ಭಾಜಪ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ರವರ ನೇತೃತ್ವದಲ್ಲಿ ಭಾಜಪ ಕಾರ್ಯಕರ್ತರೆಲ್ಲಾ ಕೂಡಿ ಪ್ರಜಾಪ್ರಭುತ್ವದ ಆಶಯ ಉಳಿಸಲು ಹಾಗೂ ರಾಜ್ಯ ಸರ್ಕಾರದ ಬೇಜವಾಬ್ದಾರಿ ಆಡಳಿತದ ವಿರುದ್ಧ ಮೈಸೂರು ಚಲೋ ಹಮ್ಮಿಕೊಂಡಿದ್ದರು, ಪ್ರತಿಭಟನೆ ಪ್ರಾರಂಭವಾಗುವುದಕ್ಕೂ ಮುನ್ನವೇ ರಾಜ್ಯ ಸರ್ಕಾರ ತಮ್ಮ ಅದೀನದಲ್ಲಿರುವ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ರಾಜ್ಯದ್ಯಕ್ಷರನ್ನು ಹಾಗೂ ಪ್ರಮುಖ ನಾಯಕರನ್ನು ಬಂಧಿಸಿ ತಮ್ಮ ವಿರುದ್ಧ ಧ್ವನಿ ಎತ್ತಲು ಬಿಡದೆ ಹಿಟ್ಲರ್ ರೀತಿಯ ಧೋರಣೆ ನಡೆಸುತ್ತಿರುವುದು ಬಹಳ ಖಂಡನೀಯ.
ಮ್ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ರವರು ಹಾಗೂ ಕಾಂಗ್ರೆಸ್ಸಿನ ಪ್ರಮುಖ ನಾಯಕರಾಗಿರುವ ರಾಹುಲ್ ಗಾಂಧಿ ರವರು ಕೂಡಲೇ ಮಧ್ಯ ಪ್ರವೇಶಿಸಿ ರಾಜ್ಯ ಸರ್ಕಾರದ ದಬ್ಬಾಳಿಕೆ ಧೋರಣೆಯ ವಿರುದ್ಧ ತಮ್ಮ ಕಾಂಗ್ರೆಸ್ಸಿನ ನಾಯಕರಿಗೆ ಸೂಕ್ತ ಮಾರ್ಗದರ್ಶನ ನೀಡಿ ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕೆಂದು ಹಾಗೂ ಹಿಟ್ಲರ್ ಆಡಳಿತದ ವ್ಯವಸ್ಥೆಯಿಂದ ಹೊರ ತರಬೇಕೆಂದು ಆಗ್ರಹಿಸುತ್ತೇನೆ ಎಂದು ವಿಧಾನ ಪರಿಷತ್ತಿನ ಶಾಸಕ ಶ್ರೀ ಡಿ.ಎಸ್.ಅರುಣ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ