ಪಾವಗಡ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲ್ಲೂಕಿನ ರೈತರ ವಿವಿಧ ಸಮಸ್ಯೆಗಳನ್ನು ಈಡೇರಿಸುವಂತೆ ಪೂಜಾರಪ್ಪ ನೇತೃತ್ವದಲ್ಲಿ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ ಬೆಸ್ಕಾಂ ಇಲಾಖೆಯವರು 25 ಸಾವಿರ ರೋಗಳಿಗೆ ಹಿಂದಿನ ಸರ್ಕಾರ ಕಂಬ, ವೈರು,ಟ್ರಾನ್ಸ್ ಫಾರ್ಮರ್ ಕೊಡುತ್ತಿದ್ದರು ಆದರೆ ಈಗಿನ ಕಾಂಗ್ರೇಸ್ ಸರ್ಕಾರ ಆ ಯೋಜನೆಯನ್ನು ನಿಲ್ಲಿಸಿದ್ದಾರೆ. ಬೆಸ್ಕಾಂ ಕಾಂಟ್ರಾಕ್ಟರ್ 3 ಲಕ್ಷದ ವರೆಗೆ ಹಣವನ್ನು ಕೇಳುತಿದ್ದಾರೆ ಅದಲ್ಲದೆ ತಾಲ್ಲೂಕಿನ ಕಳೆದ ವರ್ಷ ಬಂದ ಮಳೆಗೆ ಕೋಡಿ ಬಿದ್ದು ಸಿ.ಕೆ ಪುರ, ಗುಂಡ್ಲಹಳ್ಳಿ ಗ್ರಾಮದ ಕೆರೆಗಳು ಕೋಡಿ ಬಿದ್ದು ಕೆರೆಗಳು ಮಣ್ಣಿನಿಂದ ಮುಚ್ಚಿಕೊಂಡು ಹೋಗಿದೆ ಈ ಕೆರೆಗಳ ಹೋಳೆತ್ತುವ ಕಾಮಗಾರಿಯನ್ನು ಈ ತಕ್ಷಣದಿಂದ ಮಾಡಬೇಕೆಂದರು.
ತಾಲ್ಲೂಕಿನಲ್ಲಿ ಅನೇಕ ರೈತರು ತಮ್ಮ ಹೊಲಗಳಿಗೆ ಹೋಗಲು ನಕ್ಷೆಯಲ್ಲಿ ದಾರಿ ಇದ್ದರೂ ಸಹ ರೈತರಿಗೆ ಕಿರುಕುಳ ಮತ್ತು ದಾರಿ ಸಮಸ್ಯೆ ಬಗ್ಗೆ ಅನೇಕ ಭಾರಿ ಅರ್ಜಿ ಸಲ್ಲಿಸಿದರು ಕೋರ್ಟನಿಂದ ಆದೇಶವಿದ್ದರೂ ದಾರಿ ಬಿಡಿಲು ಸುತ್ತಮುತ್ತಲಿನ ರೈತರಿಂದ ಹಾಗೂ ಸೋಲಾರ್ ಕಂಪನಿಗಳಿಂದ ತೊಂದರೆ ಹಾಗೂ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾತನಾಡಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಖಾತೆ ಪಹಣಿ ಇದ್ದರೂ ಕೂಡ ಜಮೀನನ್ನು ವಿಂಗಡಿಸಿ 20 ವರ್ಷಗಳಿಂದ ಸಾಗುವಳಿ ಮಾಡುವ ಬಡ ರೈತರಿಗೆ ಮೋಸ ಮಾಡಿ ರೈತರು ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಮರಗಿಡಗಳನ್ನು ಇಡುತ್ತಿದ್ದಾರೆ ಸರ್ಕಾರ ತಕ್ಷಣ ಈ ಆದೇಶವನ್ನು ಹಿಂಪಡೆದು ರೈತರಿಗೆ ವ್ಯವಸಾಯ ಮಾಡಿ ಜೀವನ ಮಾಡುತ್ತಿರುವವರಿಗೆ ಈ ರೀತಿಯ ತೊಂದರೆ ಸರಿಯಲ್ಲವೆಂದರು.
ಈ ವೇಳೆ ಜಿಲ್ಲಾ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ರಾಮಾಂಜಿನೇಯಲು, ಗೋವಿಂದಪ್ಪ, ರಮೇಶ್, ಅರಸೀಕೆರೆ ಮಲ್ಲೇಶ್, ಪೂಜಾರ್ ಚಿತ್ತಯ್ಯ, ಶಿವು ಬ್ಯಾಡನೂರು ಹಾಗೂ ಅನೇಕ ರೈತ ಸಂಘದ ಪದಾಧಿಕಾರಿಗಳಿದ್ದರು.