ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹಿರಿಯ ಪತ್ರಕರ್ತ ಮಾನುಗೆ ನುಡಿ ನಮನ

“ಕಷ್ಟ, ಸುಖ ಆತ್ಮೀಯರೊಂದಿಗೆ ಹಂಚಿಕೆ ಅಗತ್ಯ- ಅಕ್ಕಿ”

ಶಹಾಪುರಃಹಿರಿಯ ಪತ್ರಕರ್ತ ವೆಂಕಟೇಶ ಮಾನು ಸ್ವಾಭಿಮಾನಿ ಮತ್ತು ವಸ್ತುನಿಷ್ಟ ಬರಹಗಾರರಾಗಿದ್ದರು. ಅವರ ಅಗಲಿಕೆಯಿಂದ ಮಾಧ್ಯಮ, ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ಹಿರಿಯ ಸಾಹಿತಿ, ಸಂಶೋಧಕ ಡಿ.ಎನ್.ಅಕ್ಕಿ ಕಂಬನಿ ಮಿಡಿದರು.
ನಗರದ ದಿ.ವೆಂಕಟೇಶ ಮಾನು ಅವರ ಪಾರ್ಥಿವ ಶರೀರದ ದರ್ಶನ ನಂತರ ಅವರ ಗೆಳೆಯರ ಬಳಗದಿಂದ ನಡೆದ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ನುಡಿ ನಮನಗಳನ್ನು ಸಲ್ಲಿಸಿದರು.
ಓರ್ವ ಪ್ರತಿಭಾವಂತ ಮಾನವೀಯ ಮೌಲ್ಯಗಳನ್ನು ಹೊಂದಿದ ಮಾನು ಅವರನ್ನು ಕಳೆದುಕೊಂಡಿದ್ದೇವೆ. ಅವರೊಬ್ಬ ಸಿದ್ಧಾಂತ, ಮೌಲ್ಯಯುತ ಗುಣಗಳನ್ನು ಬೆಳೆಸಿಕೊಂಡಿದ್ದರು. ಎಲ್ಲೂ ಅವರ ಸಿದ್ಧಾಂತವನ್ನು ಬಿಟ್ಟುಕೊಟ್ಟವರಲ್ಲ. ಆದರೆ ಹಲವು ಅವರ ಬಗ್ಗೆ ರಹಸ್ಯಗಳು ಇಂದಿಗೂ ಅವರೊಡನೆ ಸಾಗಿರುವದು ದುರಂತ. ಅವರ ಅತೀವ ಸ್ವಾಭಿಮಾನದ ಬುದಕೇ ಇಂದು ಇಹಲೋಕ ತ್ಯೇಜಿಸುವ ಸ್ಥಿತಿ ಬಂದಿದೆ ಎಂಬ ಕೊರಗು ಇಂದು ನಮಗೆಲ್ಲರಿಗೂ ಕಾಡುತ್ತಿದೆ.
ಮುಂದಿನವರಿಗೆ ಇದು ಪಾಠವಾಗಲಿ. ಯಾವುದೇ ಸಮಸ್ಯೆ ಇರಲಿ ಆತ್ಮೀಯತೆ ಎಂದು ಇರುವ ಒಂದಿಬ್ಬರು ಗೆಳೆಯರೊಡನೆ ಕಷ್ಟ, ಸುಖ ಸಮಸ್ಯೆ ಹಂಚಿಕೊಳ್ಳಬೇಕು. ಆಗ ಅದಕ್ಕೊಂದು ಮಾರ್ಗ ದೊರೆಯಲಿದೆ. ಆರ್ಥಿಕವಾಗಿ ಎಲ್ಲರೂ ಸದೃಢರಾಗಿರಲು ಸಾಧ್ಯವಿಲ್ಲ. ಆದರೆ ಕೈಲಾದ ಸಹಾಯ ಸಹಕಾರ ನೀಡುವದು ಮನುಷ್ಯನ ಧರ್ಮ ಹಾಗೇ ಪ್ರಸಂಗ ಆಧರಸಿ ಸಹಾಯ ಸಹಕಾರ ಕೇಳಬೇಕಾಗುತ್ತದೆ ಎಂದು ಭಾವುಕರಾದರು.
ಸಂಯುಕ್ತ ಕರ್ನಾಟಕ ಕಲ್ಬುರ್ಗಿ ವೃತ್ತದ ಸಂಪಾದಕರಾದ ಸುಭಾಷ ಬಣಗಾರ ಮಾತನಾಡಿ, ಹಲವು ವರ್ಷಗಳಿಂದ ಮಾನು ಅವರು ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡಿದ್ದಾರೆ. ಅವರೊಬ್ಬ ಉತ್ತಮ ಬರಹಗಾರರು ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಅವರು ಬದುಕನ್ನು ಕಟ್ಟಿಕೊಂಡವರು. ಅವರೊಬ್ಬರ ಅಸಾಧರಣ ಪ್ರತಿಭೆ ಎಂದರು.
ಹಿರಿಯ ಪತ್ರಕರ್ತ ದೇವು ಪತ್ತಾರ ಮಾತನಾಡಿ, ಚಿಕ್ಕಂದಿನಿಂದಲೂ ಒಡನಾಡಿಯಾಗಿದ್ದ, ಮಾನು ಅವರು, ಅಪ್ರತಿಭಾವಂತ ಬರಹಗಾರರಾಗಿದ್ದರು. ಸೈಕಲಾಜಿಕಲ್ ಬಗ್ಗೆ ವಿದ್ಯಾಭ್ಯಾಸ ಮಾಡಿದ್ದ ಅವರು, ಅದರಲ್ಲಿ ಪರಿಣಿತರೂ ಆಗಿದ್ದರು. ಹೊರ ದೇಶಗಳಿಗೆ ಸೈಕಲಾಜಿಕಲ್ ಬಗ್ಗೆ ಮಹಾ ಪ್ರಬಂಧಗಳನ್ನು ಸಹ ಅವರು ಬರೆದಿದ್ದರು. ಯಾರಿಗೂ ಗೊತ್ತಿರದ ಹಲವಾರು ವಿಷಯಗಳನ್ನು ತಿಳಿಸುವ ಮೂಲಕ ನುಡಿ ನಮನ ಸಲ್ಲಿಸಿದರು.
ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ, ಶಿವಣ್ಣ ಇಜೇರಿ ಮತ್ತು ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾನಿಪ ಮಾಜಿ ಜಿಲ್ಲಾಧ್ಯಕ್ಷ ಇಂದೂಧರ ಸಿನ್ನೂರ, ನಾರಾಯಣಾಚಾರ್ಯ ಸಗರ, ಗುರು ಕಾಮಾ, ನರಸಿಂಗ್, ರಾಘವೇಂದ್ರ ಹಾರಣಗೇರಾ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಒಂದು ನಿಮಿಷ ಮೌನಾಚಾರಣೆ ನಡೆಸುವ ಮೂಲಕ ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು. ಕಸಾಪ ಗೌರವ ಕಾರ್ಯದರ್ಶಿ ಸುರೇಶ ನಿರೂಪಿಸಿ ವಂದಿಸಿದರು.

ವರದಿ: ಶಿವರಾಜ ಸಾಹುಕಾರ್ ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ