ಬೆಂಗಳೂರು:”ಮನುಷ್ಯ ಸ್ವಭಾವ ಹಾಗೂ ದೇಹ ಭಾಷೆ”ಕುರಿತು ಖ್ಯಾತ ಸಾಹಿತಿ, ಅಂಕಣಕಾರ ಶ್ರೀ ಧೀರೇಂದ್ರ ನಾಗರಹಳ್ಳಿ ಮಾತನಾಡಿ ಮನುಷ್ಯ ಸ್ವಭಾವಗಳಾದ ಆಲಸ್ಯ, ಸಿಟ್ಟು, ಸಹನೆ ಮುಂತಾದವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಜನರನ್ನು ಮಂತ್ರ ಮುಕ್ತರನ್ನಾಗಿ ಮಾಡಿದರು. ಇದೇ ಸಂಧರ್ಭದಲ್ಲಿ ಶ್ರೀ ಧೀರೇಂದ್ರ ನಾಗರಹಳ್ಳಿ ಅವರನ್ನು ಶಿವಮೊಗ್ಗದ ಭಾರತೀಯ ಅಂಗವಿಕಲರ ಸಬಲೀಕರಣ ಸಂಘದ ಅಧ್ಯಕ್ಷ, ಹಾಗೂ ಕರುನಾಡ ಕಂದ ಪತ್ರಿಕೆಯ ಲೇಖಕ,ವರದಿಗಾರರಾದ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಫಲ-ತಾಂಬೂಲ ನೀಡಿ ಸತ್ಕರಿಸಿದರು.
ಸ್ವ-ಧ್ಯಾನ ಕುರಿತು ಪ್ರವಚನ- ಪ್ರಾತ್ಯಕ್ಷಿಕೆ ನೆರವೇರಿಸಿದ ನಿವೃತ್ತ ಇಂಜಿನಿಯರ್, ತಪಸ್ವಿ, ಮೌನಿ ಬಿ.ಶ್ರೀನಿವಾಸನ್ ಅವರು ಎಲ್ಲರನ್ನೂ ಧ್ಯಾನ ಲೋಕಕ್ಕೆ ಕೊಂಡೊಯ್ದು ಎಲ್ಲರನ್ನೂ ಪ್ರಸನ್ನಗೊಳಿಸಿದರು.
ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ ಶ್ರೀಮತಿ ಸಂಧ್ಯಾ ಶ್ರೀನಿವಾಸನ್ ಹಾಗೂ ಕುಮಾರಿ ಮನೋಜ್ಞಾ ಘನ ಲಿಂಗ ಅವರು ನಡೆಸಿಕೊಟ್ಟ ಭರತನಾಟ್ಯ ಕಾರ್ಯಕ್ರಮ ಎಲ್ಲರ ಮನತಣಿಸಿತು. ತಾಯಿ-ಮಗಳ ಅಪರೂಪದ ಜೋಡಿ ತುಂಬಾ ಸುಂದರ ಭರತನಾಟ್ಯ ಪ್ರದರ್ಶನ ಮಾಡಿದರು.
ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಡಾ.ಅಂಬುಜಾಕ್ಷಿ ಬೀರೇಶ ಅವರು ಪ್ರಾರ್ಥನೆ ಮಾಡಿ, ಎಲ್ಲರನ್ನೂ ಸ್ವಾಗತಿಸಿದರು. ಲೆಕ್ಕಾಧಿಕಾರಿ ಭಾಗ್ಯ ಏ. ಅವರು ಪ್ರಸ್ತಾವನೆ ಮಾಡಿದರೆ,ಶ್ರೀದೇವಿ ಸಾಲಿಮಠ ಹಾಗೂ ಎಸ್ ಜೆ ಕೃಷ್ಣಮೂರ್ತಿ ಅವರು ಉಪನ್ಯಾಸಕರ ಹಾಗೂ ಪ್ರವಚನಕಾರರ ಪರಿಚಯ ಮಾಡಿಕೊಟ್ಟರು. ಶ್ರೀಮತಿ ಪೂರ್ಣಿಮಾ ಗೋಪಾಲ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರುಗಳಾದ ಹೆಚ್.ಎಲ್ ಮುಕುಂದ, ಉಲಿಗೆ ಸ್ವಾಮಿ, ಚಂದ್ರಶೇಖರ್ ಆಚಾರಿ, ಗಿರೀಶ,ನಿರ್ಮಲಾ, ಬಿ ಸತ್ಯನಾರಾಯಣ, ಹಾಗೂ ಸಾಹಿತಿಗಳಾದ ಶಿವಪ್ರಸಾದ್ ಕೊಡಕ್ಕಲ್, ಪ್ರಭಾಕರ್ ಗಂಗೊಳ್ಳಿ, ಸೊನ್ನದ್, ವಿಶಾಲಾಕ್ಷಿ ಹೆಗಡೆ, ಗೀತಾ ಸಭಾಹಿತ,ಮಹಾಲಕ್ಷ್ಮಿ ಭಟ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದ ಆಯೋಜಕ ಶ್ರೀ ವಿಶ್ವೇಶ್ವರ ಗಾಯತ್ರಿ ವಂದಿಸಿದರು.