ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ದಿನಾಂಕ 16-7-2024ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಮಹಾಂತಗೌಡ ನಂದಿಹಳ್ಳಿ ಅವರ ನೇತೃತ್ವದಲ್ಲಿ ಮಲ್ಲಬಾದ್ ಏತ ನೀರಾವರಿ ಸಂಪೂರ್ಣ ಜಾರಿಗಾಗಿ ರೈತರ ಸಭೆ ಕರೆಯಲಾದ ಪ್ರಯುಕ್ತ ರೈತರ ಸುರಕ್ಷತೆಯ ಮತ್ತು ಭದ್ರತೆಯ ದೃಷ್ಟಿಯಿಂದ ಜೇವರ್ಗಿ ಪೊಲೀಸ್ ಠಾಣಾ ಆರಕ್ಷಕ ಅಧಿಕಾರಿಗಳಾದ ರಾಜಸಾಬ್ ನದಾಫ್ ಹಾಗೂ ಯಡ್ರಾಮಿ ಪೊಲೀಸ್ ಠಾಣೆಯ ಆರಕ್ಷಕ ಅಧಿಕಾರಿಗಳು ಹಾಗೂ ಠಾಣೆಯ ಆರಕ್ಷಕರು ಜಂಟಿಯಾಗಿ ಸ್ಥಳ ಪರಿಶೀಲನೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಹಾಂತಗೌಡ ನಂದಿಹಳ್ಳಿ ಅವರು ಹಾಗೂ ಸಮಾಜಸೇವಕರಾದ ಅಲ್ಲಾ ಪಟೇಲ್ ಶಿವಪುರ ಹಾಗೂ ವರದಿಗಾರರಾದ ಜಟ್ಟಪ್ಪ ಎಸ್ ಪೂಜಾರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
