ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ತಾಲೂಕ ಪಂಚಾಯತ ಅವರಣದಲ್ಲಿ ಜರುಗಿದ ತ್ರೈಮಾಸಿಕ ಸಭೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು , ಉತ್ತಮ ಗುಣಮಟ್ಟದ ರಸ್ತೆ,ಕಸವನ್ನು ಸ್ವಚ್ಛಗೊಳಿಸುವದು, ಡೇಂಗೋ ಜ್ವರ,ವೈದ್ಯರ ಸಮಸ್ಯೆ, ರೈತರಿಗೆ ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ ದೊರೆಯುವ ಟ್ಯಾಕ್ಟರ ಇನ್ನಿತರ ಸಾಮಾಗ್ರಿಗಳನ್ನು ಸರಿಯಾಗಿ ರೈತರು ಸದುಪಯೋಗ ಪಡಿಸಿಕೊಳ್ಳಬೇಕು,ಬೀದಿ ದೀಪ ಸೇರಿದಂತೆ ಲ್ ಮೂಲ ಭುತ ಸಮಸ್ಯೆಗಳನ್ನು ಅರಿತುಕೊಂಡು ಜನತೆಗೆ ಉತ್ತಮ ಆಡಳಿತ ಕಲ್ಪಿಸಿ ಕೊಡುವಂತೆ ಸಮಸ್ಯೆಗಳು ಇರುವ ಆ ಇಲಾಖೆಯ ಅಧಿಕಾರಿಗಳಿಗೆ ನಿಗಾವಹಿಸುವಂತೆ ಎಚ್ಚರಿಕೆ ನೀಡಿ. ಸಭೆಯ ಅಧ್ಯಕ್ಷತೆ ವಹಿಸಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಮಾತನಾಡಿದರು. ಈ ವೇಳೆ ಯಲಬುರ್ಗಾ ಹಾಗೂ ಕುಕನೂರ ತಾಲ್ಲೂಕಿನ ತಾಲ್ಲೂಕು ಪಂಚಾಯತಿಯ ನೂತನ ನಾಮನಿರ್ದೇಶನ ಸದಸ್ಯರಿಗೆ ಸನ್ಮಾನಿಸಲಾಯಿತು. ಯಲಬುರ್ಗಾ ಹಾಗು ಕುಕನೂರ ತಾಲೂಕಿನ ತಹಶಿಲ್ದಾರರು,ಸಿ.ಇ.ಓ, ಸಿಪಿಐ,ಕೃಷಿ,ಅರಣ್ಯ, ಸಿಡಿಪಿಓ,ಬಿಇಓ,ಡಿಪೋ ಮ್ಯಾನೇಜರ,ಗ್ರಾಮಪಂಚಾಯತ ಪಿಡಿಓ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.