ಪಾವಗಡ:ರಾಜ್ಯಸರಕಾರ ಮತ್ತು ಕೇಂದ್ರಸರ್ಕಾರಗಳು ಗ್ರಾಮಗಳ ಅಭಿವದ್ಧಿಗೆ ಹಲವಾರು ಯೋಜನೆಗಳ ಮೂಲಕ ಕೋಟಿಗಟ್ಟಲೇ ಅನುದಾನ ಮಂಜೂರು ಮಾಡಿದರೂ ಹಳ್ಳಿಗಳು ಅಭಿವದ್ಧಿಯಾಗುತ್ತಿಲ್ಲ ಎಂಬುದಕ್ಕೆ ಪಾವಗಡ ತಾಲೂಕಿನ ಸಿ.ಕೆ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಸಾಗರದಹಟ್ಟಿ ಗ್ರಾಮವೇ ಸಾಕ್ಷಿಯಾಗಿದೆ.
ಈ ಗ್ರಾಮದ ಸುಮಾ ಎಂಬುವವರು ಮಾತನಾಡುತ್ತಾ ನಮ್ಮ ಗ್ರಾಮದಲ್ಲಿ ಸರಿಯಾದ ಸಿ ಸಿ ರಸ್ತೆಗಳಿಲ್ಲಾ ಹಾಗೂ ಸರಿಯಾದ ಚರಂಡಿಗಳೇ ಇಲ್ಲ ಕೆಲವು ಕಡೆ ಮಾತ್ರ ಚರಂಡಿ ಇದ್ದರೂ ಸ್ವಚ್ಛತೆ ಇಲ್ಲಾ
ನೀರಿನ ವ್ಯವಸ್ಥೆಯಂತೂ ಹದೆಗೆಟ್ಟು ಹೋಗಿದೆ ಬೋರ್ವೆಲ್ ಇಂದ ಬರುವಂತಹ ನೀರನ ಪೈಪ್ ಲೈನ್ ಗಳು ಒಡೆದು ಹೋಗಿವೆ ಆದಕಾರಣ ಕೊಳಚ್ಚೆ ನೀರನ್ನು ಕುಡಿಯುವ ಸಂದರ್ಭ ಬಂದ್ ಒದಗಿದೆ ಈ ಗ್ರಾಮಕ್ಕೆ,
ಹಾಗೆ ನೀರು ರಸ್ತೆಯ ಮೇಲೆ ಹರಿದು ಪರಿಸರ ಮಲೀನಗೊಳ್ಳುತ್ತಿದೆ ಇದರಿಂದ ಸೊಳ್ಳೆಗಳ ಕಾಟದಿಂದ ಜನರಿಗೆ ಜ್ವರ,ಮಲೇರಿಯಾ, ಟೈಫಾಯಿಡ್ ಮುಂತಾದ ಕಾಯಿಲೆಗಳಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಕನಿಷ್ಠ ಸೌಕರ್ಯಗಳ ನಡುವೆಯೇ ನಿವಾಸಿಗರು ಬದುಕುವಂತಾಗಿದೆ.
ಸಿ ಕೆ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮದಲ್ಲಿ ಸುಮಾರು ನೂರು ಮನೆಗಳಿದ್ದು ರಸ್ತೆ ಸಂಪೂರ್ಣ ಹದಗೆಟ್ಟು ತಗ್ಗು ಗುಂಡಿಗಳಿಂದ ಆವೃತ್ತವಾಗಿದೆ. ಗ್ರಾಮದ ಜನರು ಮತ್ತು ಚಿಕ್ಕ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಹಾಗೂ ಶಾಲೆಗೆ ಹೋಗಲು ಪರದಾಡುತ್ತಿದ್ದಾರೆ. ಸೂಕ್ತ ರಸ್ತೆ ಚರಂಡಿಗಳು ಇಲ್ಲದೆ ಮಳೆನೀರು ಮತ್ತು ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ.
ಗ್ರಾಮದ ಬಹುತೇಕ ರಸ್ತೆಗಳು ಮಣ್ಣಿನಿಂದ ಕೂಡಿವೆ. ಸ್ವಲ್ಪವೇ ಮಳೆ ಬಿದ್ದರೂ ರಸ್ತೆಗಳೆಲ್ಲ ಕೆಸರು ಗದ್ದೆಯಂತೆ ಬದಲಾಗುತ್ತವೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮೂಲ ಸೌಕರ್ಯಗಳಿಂದ ನಮ್ಮ ಗ್ರಾಮ ವಂಚಿತವಾಗಿದೆ ಜನಪ್ರತಿನಿಧಿಗಳು ಚುನಾವಣೆ ಬಂದಾಗಮಾತ್ರ ನಮ್ಮ ಗ್ರಾಮಕ್ಕೆ ಬೇಟಿ ಕೊಡುತ್ತಾರೆ ವಿನಹ ಅಭಿವೃದ್ಧಿಗೆ ಯಾರೂ ಬರುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮದ ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.
ಸೌಕರ್ಯಗಳಿಂದ ವಂಚಿತವಾದ ಚೆನ್ನಸಾಗರದಹಟ್ಟಿ ಗ್ರಾಮಕ್ಕೆ ಮುಖ್ಯವಾಗಿ ಕುಡಿಯುವ ನೀರಿನ ಘಟಕ ಮತ್ತು ಸಿ ಸಿ ರಸ್ತೆ ಮಾಡಿಕೊಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಮುಂದಾಗಬೇಕೆಂದು ಸಾಮಾನ್ಯ ಜನರ ಆಗ್ರಹವಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ k ಚಿತ್ತಯ್ಯ,Y ಚಿತ್ತಪ್ಪ, ಕಟುಗೂರ್ ಚಿತ್ತಪ್ಪ, ಬಡಪ್ಪ, ಮಧು, ಸುಮಾ, ನೇತ್ರಮ್ಮ, ಯಶೋದಮ್ಮ,ಕಮಲಮ್ಮ ರತ್ನಮ್ಮ. ಶಿವಮ್ಮ, ಗೀತಾ ಇನ್ನೂ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.