ಪಾವಗಡ:ಕಾಂಗ್ರೇಸ್ ನ ಮಹಿಳಾ ಗ್ರಾಮಾಂತರ ಅಧ್ಯಕ್ಷರಾದ ಉಷಾರಾಣಿ ಮಾತನಾಡಿ, ಪ್ರತಿ ತಿಂಗಳು ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತಚಾಗಿ ಅರೋಗ್ಯ ಮತ್ತು ನೇತ್ರ ಶಿಬಿರಗಳನ್ನು ಹಮ್ಮಿಕೊಂಡು ರೋಗಿಗಳ ಪಾಲಿಗೆ ಹೆಲ್ಪ್ ಸೊಸೈಟಿ ಕಲ್ಪವೃಕ್ಷವಾಗುತ್ತಿದೆ ಎಂದರು.
ಹೆಲ್ಪ್ ಸೊಸೈಟಿ ಮತ್ತು ಬೆಂಗಳೂರಿನ ಶಂಕರ್ ಅಸ್ಪತ್ರೆಯ ಸಹಯೋಗದಲ್ಲಿ ಶುಕ್ರವಾರ ಸರ್ಕಾರಿ ಅಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಭೀಮನಕುಂಟೆ ವಿ.ಆರ್. ಚೌಧರಿ ಮಾತನಾಡಿ,
ಮನುಷ್ಯನ ದೇಹದಲ್ಲಿ ನೇತ್ರಗಳು ಮುಖ್ಯವಾದ ಅಂಗಗಳು, ಒಂದು ವೇಳೆ ನೇತ್ರಗಳನ್ನು ಕಾಪಾಡಿಕೊಳ್ಳದಿದ್ದಲ್ಲಿ ಪ್ರಪಂಚವೇ ಅಂಧಕಾರವಾಗುತ್ತದೆ ಹೆಲ್ಪ್ ಸೊಸೈಟಿ ಕಳೆದ 10 ವರ್ಷಗಳಿಂದ ಅನೇಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್, ಬಹುಮುಖ್ಯವಾಗಿ ಉಚಿತವಾಗಿ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಂಡು ಬಡವರ ಪಾಲಿನ ಆಶಾ ಕಿರಣವಾಗಿದ್ದಾರೆ ಎಂದರೆ ತಪ್ಪಾಗಲಾರದು.ಕಾರಣವೇನೆಂದರೆ ನೇತ್ರ ಚಿಕಿತ್ಸೆಗಾಗಿ ಖಾಸಗಿ ಅಸ್ಪತ್ರೆಗಳಿಗೆ ಹೋದರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ, ತಾಲ್ಲೂಕಿನ ವೆಂಕಟಾಪುರ, ತಿರುಮಣ ಹೀಗ ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಂಡು ಬಡವರಿಗೆ ನೇರವು ನೀಡುತ್ತಿರುವುದು ಶ್ಲಾಘನೀಯ ಎಂದು ಮಾನಂಶಶಿಕಿರಣ್ ರನ್ನು ಕೊಂಡಾಡಿದರು.
ಸರ್ಕಾರಿ ಅಸ್ಪತ್ರೆಯ ಸೂಪರಿಡೆಂಟ್ ಅಂಜಿನಪ್ಪ ಮಾತನಾಡಿ, ಹೆಲ್ಪ್ ಸೊಸೈಟಿ ವತಿಯಿಂದ ಅರೋಗ್ಯದ ಬಗ್ಗೆ ಸಾರ್ವಜನಿಕರಿಗೆ, ಅರಿವೂ ಮೂಡಿಸುವುದಲ್ಲದೆ, ತಜ್ಞರನ್ನು ಕರೆಯಿಸಿ ಅರೋಗ್ಯದ ಬಗ್ಗೆ ಹೆಚ್ಚು ಶಿಬಿರಗಳನ್ನು ಅಯೋಜಿಸುತ್ತಿರುವುದು ಅಭಿನಂದನೀಯ ಎಂದರು.
ನಿವೃತ್ತ ಸಮುಧಾಯ ಅರೋಗ್ಯಾಧಿಕಾರಿ ಸರಸ್ವತಿ ಮೇಡಂ ಮಾತನಾಡಿ, ಹೆಲ್ಪ್ ಸೊಸೈಟಿಯು ಅನೇಕ ಖಾಸಗಿ ಅಸ್ಪತ್ರೆಗಳ ಸಹಯೋಗದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡು, ಲಕ್ಷಾಂತರ ವೆಚ್ಚವಾಗುವ ಶಸ್ತ್ರ ಚಿಕಿತ್ಸೆಗಳನ್ನು ನೂರಾರು ರೋಗಿಗಳಿಗೆ ಉಚಿತವಾಗಿ, ಮಾಡಿಸಿಕೊಡುತ್ತಿದ್ದು, ಶಶಿಕಿರಣ್ ರವರ ಸೇವೆ ಅನನ್ಯವಾದದ್ದು ಎಂದು ಕೊಂಡಾಡಿದರು,
ಶಿಬಿರದಲ್ಲಿ 200 ರೋಗಿಗಳು ತಪಾಸಣೆಗೊಳಗಾಗಿದ್ದು ಅದರಲ್ಲಿ 62 ರೋಗಿಗಳು,ಶಸ್ತ್ರ ಚಿಕತ್ಸೆಗೆ ಆಯ್ಕೆಯಾಗಿದ್ದು ಈ ರೋಗಿಗಳನ್ನು ಬೆಂಗಳೂರಿಗೆ ಕರೆದೊಯ್ದು ಶಸ್ತ್ರ ಚಿಕಿತ್ಸೆ ನಡೆಸಿ ನಂತರ ಪಾವಗಡಕ್ಕೆ ಕರೆತರಲಾಗುವುದು ಎಂದು ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂಶಶಿಕಿರಣ್ ತಿಳಿಸಿದರು.
ಶಂಕರ್ ಕಣ್ಣಿನ ಅಸ್ಪತ್ರೆಯ ಡಾ.ಅಭಿಷೇಕ್,ಡಾ.ಲತಾ, ಅಸ್ಪತ್ರೆಯ ಉಸ್ತುವಾರಿ ಹರೀಶ್, ಸಂದ್ಯಾಮಾನ ಶಶಿಕಿರಣ್, ಲಯನ್‌ನರಸಿಂಹಮೂರ್ತಿ,ರಾಕೇಶ್, ಸಾಯಿಕುಮಾರ್, ರಮೇಶ್, ಅರವಿಂದ್ ಮತ್ತಿತರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.