ಯಾದಗಿರಿ: ಜಮೀನಿನ ದಾರಿ ವಿಚಾರಕ್ಕಾಗಿ ಗ್ರಾಮದ ಪ್ರಭಾವಿ ಕುಟುಂಬಸ್ಥರು ಬಡ ರೈತನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ನಡೆದಿದೆ.
ಶರಣಪ್ಪ ಮಾಸ್ಟರ್, ಈಶಪ್ಪ ಈರಪ್ಪಣೋರ್ ಸೇರಿ 12 ರ ಜನರ ತಂಡದಿಂದ ಬಡ ರೈತ ಕುಟುಂಬದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಜೋಳದಡಗಿ ಗ್ರಾಮದ ಬಡ ರೈತ ಮಲ್ಲಪ್ಪ ಗಂಗಣ್ಣೋರ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ.
ಕೊಡಲಿ, ಬಡಿಗೆ, ಹಾಗೂ ದೊಣ್ಣೆಗಳಿಂದ ಹೊಡೆದಿರುವ ಪರಿಣಾಮ ರೈತರ ಹಲ್ಲುಗಳು ಮುರುದಿವೆ. ಗ್ರಾಮಸ್ಥರು ಜಗಳ ಬಿಡಿಸಲು ಮುಂದಾಗ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಗಾಯಾಳು ಮಲ್ಲಪ್ಪನನ್ನ ಗ್ರಾಮಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ ಮುದ್ನಾಳ್ ಭೇಟಿ ನೀಡಿ, ಗಾಯಾಳು ಆರೋಗ್ಯ ವಿಚಾರಿಸಿ, ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಇದೇ ವೇಳೆ ಮಾತನಾಡಿದ ಉಮೇಶ್ ಮುದ್ನಾಳ್ ಹಲ್ಲೆ, ದರೋಡೆ, ಕೊಲೆ ಪ್ರಕರಣಕ್ಕೆ ಜಿಲ್ಲಾ ಪೋಲಿಸ್ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ವಡಗೇರಾ ಪೊಲೀಸ್ ಠಾಣೆಯ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸದೇ ಆರೋಪುಗಳು ಹೇಳಿದಂತೆ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೋಳದಡಗಿ ಗ್ರಾಮದಲ್ಲಿ ವಿವಿಧ ಸಮುದಾಯಗಳ ಮೇಲೆ ಇದೇ ರೀತಿ ದೌರ್ಜನ್ಯ, ದಬ್ಬಾಳಿಕೆ, ಹಲ್ಲೆ ಮಾಡುತ್ತಾ ಬಂದಿರುವ ಚಾಳಿ ಇದೆ. ಒಬ್ಬ ಹೆಡ್ ಮಾಸ್ಟರ್ ನಾಗಿ ಗ್ರಾಮದ ಎಲ್ಲರಿಗೂ ತಿಳಿಹೇಳಬೇಕಿದ್ದ ಶಿಕ್ಷಕ ಮುಂದೆ ನಿಂತು ಹಲ್ಲೆಗೆ ಪ್ರೇರಣೆ ನೀಡಿದ್ದಾನೆ. ಇವರಿಗೆ ಯಾವುದೇ ಕಾನೂನಿನ ಭಯವಿಲ್ಲ. ಗಾಯಾಳು ನೀಡಿದ ದೂರಿನಂತೆ ತಾವು ಸಹ ಅದೇ ಸೆಕ್ಷನ್ ನಲ್ಲಿ ಗಾಯಾಳು ಮಲ್ಲಪ್ಪ ಸೇರಿ 12 ಜನರ ಮೇಲೆ ಪ್ರಕರಣ ದಾಖಲಿಸಿ ಗ್ರಾಮದಿಂದ ಪರಾರಿಯಾಗಿದ್ದಾರೆ. ಆರೋಪಿಗಳು ನೀಡಿರುವ ಪ್ರಕ ಕೂಡಲೇ ಕೈ ಬೀಡಬೇಕು. ಇಲ್ಲದಿದ್ದರೆ ಪೊಲೀಸ್ ಇಲಾಖೆ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ರಫೀಕ್ ಪಟೇಲ್, ಆಂಜನೇಯ, ಬಾಬಾ ಖಾನ್, ಜೋಳದಡಗಿ ಗ್ರಾಮದ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಶಿವರಾಜ ಸಾಹುಕಾರ್ ವಡಗೇರಾ