ಯಾದಗಿರಿ:ಶಾಲೆಗಳಲ್ಲಿ ಶೌಚಾಲಯ ಶುಚಿತ್ವ ಸೇರಿದಂತೆ ಶಾಲೆಯಲ್ಲಿನ ವಾತಾವರಣದ ಸುತ್ತ ನೈರ್ಮಲ್ಯ ಕಾಪಾಡಿ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ.ಅವರು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ ವತಿಯಿಂದ ಸಿಎಸ್ಆರ್ ಅನುದಾನದಡಿ ಜಿಲ್ಲೆಯ 55 ಪ್ರೌಢಶಾಲೆಗಳಿಗೆ ಸ್ವಚ್ಚ ಮಾಡುವ ಜಟ್ಟಿಂಗ್ ಮಷಿನ್ ನೀಡುತ್ತಿದ್ದು,ಸಾಂಕೇತಿಕವಾಗಿ ಶಿಕ್ಷಕರಿಗೆ ವಿತರಣೆ ಮಾಡಿ ಅವರು ಮಾತನಾಡುತ್ತಾ
ಇತ್ತೀಚಿಗೆ ಡೆಂಗ್ಯೂ ಭೀತಿ ಎದುರಾಗಿದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಗರಿಮಾ ಪನ್ವಾರ, ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆಯ ಜನರಲ್ ಮ್ಯಾನೇಜರ್ ಕೃಷ್ಣಮೂರ್ತಿ, ಸೀನಿಯರ್ ಮ್ಯಾನೇಜರ್ ಯೋಗೀಶಕುಮಾರ, ಸರಕಾರಿ ಪದವಿ ಪೂರ್ವ ಪ್ರೌಢಶಾಲಾ ಶಿಕ್ಷಕರಾದ ಹನುಮಯ್ಯ ಕಲಾಲ್, ರಾಮಸಮುದ್ರ ಪ್ರೌಡಶಾಲೆಯ ಮುಖ್ಯ ಗುರುಗಳಾದ ಬಿ ರಾಜಶೇಖರಗೌಡ, ಕನ್ಯಾಪ್ರೌಢ ಶಾಲೆಯ ಮುಖ್ಯಗುರು ವೀರಪ್ಪ ಕನ್ನಳ್ಳಿ, ಗುರುಮಿಠಕಲ್ ಉರ್ದು ಮಹಿಳಾ ಪ್ರೌಢಶಾಲೆಯ ಹಣಮಂತರಾವ್ ಗೋಂಗಲೆ , ಸಿಬ್ಬಂದಿ ವಿಶಾಲ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ:ಶಿವರಾಜ ಸಾಹುಕಾರ್ ವಡಗೇರಾ