ಬೀದರ: ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡು ಇದಿಗ 50 ವರ್ಷಗಳು ಕಳೆದ ಸಂಭ್ರಮದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕದ ವತಿಯಿಂದ ‘ಕನ್ನಡ ಸಾಂಸ್ಕೃತಿಕ ರತ್ನ ಪ್ರಶಸ್ತಿ’ಗೆ ಹಿರಿಯ ದಲಿತ ಹೋರಾಟಗಾರರಾದ ಶ್ರೀ ಬಕ್ಕಪ್ಪ ದಂಡಿನ ಅವರು ಆಯ್ಕೆಗೊಂಡಿದ್ದಾರೆ.
70 ರ ದಶಕದಿಂದಲೂ ದಲಿತ, ಕಾರ್ಮಿಕ, ಮಹಿಳಾ ಚಳುವಳಿ ಕಟ್ಟುತ್ತಾ ಬಂದಿದ್ದಾರೆ. ಜಿಲ್ಲೆಯ ಸಾಕ್ಷರತಾ ಚಳುವಳಿಗೆ ಇವರ ಕೊಡುಗೆ ಅಪಾರ, ಅಕ್ಷರ ವಂಚಿತರಿಗೆ ಧ್ವನಿಯಾಗಿ ಅಕ್ಷರ ಕಲಿಸಿದ್ದಾರೆ. ಜನಜಾಗೃತಿ ಜಾಥಾಗಳನ್ನು ಹಮ್ಮಿಕೊಂಡು ಬೀದಿ ನಾಟಕಗಳ ಮೂಲಕ ಜನರಿಗೆ ಅರಿವು ಮೂಡಿಸುತ್ತಾ ಬಂದಿದ್ದಾರೆ. ಹೋರಾಟದ ಚಳುವಳಿಗಳಲ್ಲಿ ಸಾಮಾಜಿಕ ನ್ಯಾಯದ ಕ್ರಾಂತಿ ಗೀತೆಗಳು ಹಾಡುತ್ತಾ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಸರಳ ಜೀವನ ಸಮೃದ್ಧ ಮನಸ್ಸು ಎಲ್ಲರನ್ನು ಗೌರವದಿಂದ ಕಾಣುವ ಇವರು ತನ್ನ ಕಷ್ಟವನ್ನು ತಾನೇ ಅನುಭವಿಸಿ ಇನ್ನೊಬ್ಬರಿಗೆ ಬೆನ್ನೆಲುಬಾಗಿ ನಿಂತವರು. ಇವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ‘ಕನ್ನಡ ಸಾಂಸ್ಕೃತಿಕ ರತ್ನ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಸುಬ್ಬಣ್ಣ ಕರಕನಳ್ಳಿ ಅವರು ತಿಳಿಸಿದ್ದಾರೆ.