ಕಲಬುರಗಿ:ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾದ ಹಡಪದ ಅಪ್ಪಣ್ಣ ಸಮಾಜದ ಅಭಿವೃದ್ಧಿ ನಿಗಮ ಕೂಡಲೇ ರಾಜ್ಯ ಸರ್ಕಾರವು ನಿಗಮದ ಅಧ್ಯಕ್ಷರನ್ನು ನೇಮಿಸಿಕೊಂಡು 100 ಕೋಟಿ ಅನುದಾನ ಮೀಸಲಿಡುವ ಮೂಲಕ ತುರ್ತಾಗಿ ನಿಗಮದ ಕಾರ್ಯಾರಂಭವನ್ನು ಕೈಗೊಂಡು ಬಡ ಹಡಪದ ಅಪ್ಪಣ್ಣ ಸಮಾಜದ ಬಾಂಧವರನ್ನು ಅನುಕೂಲ ಒದಗಿಸಬೇಕು ಎಂದು ಸಮಾಜದ ಕಲಬುರ್ಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಗರದಲ್ಲಿ ಮಂಗಳವಾರ ದಿನದಂದು ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದ ಹಡಪದ ಅಪ್ಪಣ್ಣ ಸಮಾಜಕ್ಕೆ ಸರ್ಕಾರ ಕೇವಲ ನಿಗಮ ಸ್ಥಾಪಿಸಿ ಕಣ್ಣೊರಿಸುವ ಕೆಲಸ ಮಾಡದೇ ನಿಗಮಕ್ಕೆ ಶ್ರೀಘವೇ ಅಧ್ಯಕ್ಷರ ಮತ್ತು ಸದಸ್ಯರನ್ನು ನೇಮಕ ಮಾಡಿ, ಕನಿಷ್ಠ 100 ಕೋಟಿ ರೂಪಾಯಿ ಅನುದಾನ ಒದಗಿಸಿ ಸಮಾಜದ ಬಾಂಧವರ ಉದ್ಯೋಗಿಗಳಿಗೆ ಅನುಕೂಲ, ಶೈಕ್ಷಣಿಕ ಉದ್ದೇಶಕ್ಕೆ ಬಳಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಹಡಪದ ಅಪ್ಪಣ್ಣ (ಕ್ಷೌರಿಕ) ಸಮುದಾಯ ಜನ ಸಂಖ್ಯೆ ಹೆಚ್ಚಿದ್ದರು ಸಹ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಸೌಲಭ್ಯಗಳ ದೊರೆಯದೇ ಹಿಂದುಳಿಯಲು ಕಾರಣವಾಗಿದೆ. ಕೂಡಲೇ ವಿಧಾನಮಂಡಲ ಅಧೀವೇಶನದಲ್ಲಿ ಅಧ್ಯಕ್ಷರ ನೇಮಕ ಹಾಗೂ ಅನುದಾನ ಬಿಡುಗಡೆ ಕುರಿತು ಪ್ರಸ್ತಾಪಿಸಿ ಅನುಮೋದನೆ ನೀಡುವಂತಾಗಲು ರಾಜ್ಯದ ಶಾಸಕರು ಸಚಿವರುಗಳು ಸಮಾಜಕ್ಕೆ ಬೆಂಬಲಿಸಿ ಅನುಕೂಲ ಮಾಡಿಕೊಡಬೇಕು ಮತ್ತು ನಮ್ಮ ಸಣ್ಣ ಸಣ್ಣ ಸಮಾಜದ ಪರವಾಗಿ ಈ ಮುಂಗಾರು ಅಧಿವೇಶನದಲ್ಲಿ ಈ ಸಮಾಜದ ಸ್ಥಿತಿ ಗತಿ ಬಗ್ಗೆ ಧ್ವನಿಯಾಗಿ ಮಾತನಾಡಿ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ- ಬಸವರಾಜ ಸಿ ಹಡಪದ ಹಳ್ಳಿ ಶಹಾಬಾದ,ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು-ಬಸವರಾಜ ಹಡಪದ ಸುಗೂರ ಎನ್,ಜಿಲ್ಲಾಧ್ಯಕ್ಷ ಈರಣ್ಣ ಸಿ ಹಡಪದ ಸಣ್ಣೂರ,ಜಿಲ್ಲಾ ಕಾರ್ಯಾಧ್ಯಕ್ಷರು-ಭಗವಂತ ಹಡಪದ ಶಿಕ್ಷಕರು ಕಿರಣಗಿ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ್ ನೀಲೂರ,ಉಪಾಧ್ಯಕ್ಷರು ರುದ್ರಮಣಿ ಅಪ್ಪಣ ಬಟಗೇರಾ,ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಹಾಗೂ ಸಹ ಸಂಘಟನಾ ಕಾರ್ಯೊದರ್ಶಿ ಸಂತೋಷ ಬಗದುರಿ, ಜಿಲ್ಲೆಯ ಸಹ ಕಾರ್ಯದರ್ಶಿ ನಿಂಗಣ್ಣ ಯಾತನೂರ,ಜಿಲ್ಲಾ ಖಜಾಂಚಿ ಶಿವಾನಂದ ಬಬಲಾದಿ, ಮತ್ತು ಕಲಬುರ್ಗಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ
ಕಲಬುರ್ಗಿ ತಾಲೂಕಾಧ್ಯಕ್ಷ ಚಂದ್ರಶೇಖರ ತೋನಸನಹಳ್ಳಿ,
ಜೇವರ್ಗಿ ತಾಲೂಕಾಧ್ಯಕ್ಷ- ತಿಪ್ಪಣ್ಣ ಹಡಪದ ನರಿಬೋಳ
ಚಿತ್ತಾಪುರ ತಾಲೂಕಾಧ್ಯಕ್ಷ ಭೀಮರಾವ್ ಸರ,
ಮತ್ತು ಅಫಜಲಪುರ ತಾಲೂಕಾಧ್ಯಕ್ಷ ಮಹಾತೇಶ ಹವಳಗಾ,
ಆಳಂದ ತಾಲೂಕಾಧ್ಯಕ್ಷ- ಶಂಕರ್ ಹಡಪದ,
ಕಾಳಗಿ ತಾಲೂಕಾಧ್ಯಕ್ಷ – ಶ್ರೀಮಂತ ಮಳಗಿ,
ಸೇಡಂ ತಾಲೂಕಾಧ್ಯಕ್ಷ- ನಂದಕುಮಾರ ನಿಡಗುಂದಿ, ಕಮಲಾಪೂರ ತಾಲೂಕಾಧ್ಯಕ್ಷ ಉದಯಕುಮಾರ್ ಹಡಪದ,
ಯಡ್ರಾಮಿ ತಾಲೂಕಾಧ್ಯಕ್ಷ ಪರಶುರಾಮ ಹಡಪದ, ಶಹಾಬಾದ ತಾಲೂಕಾಧ್ಯಕ್ಷ-ಶಿವರಾಜ್ ಹಡಪದ, ಚಿಂಚೋಳಿ ತಾಲೂಕಾಧ್ಯಕ್ಷ-ಸಂತೋಷ ಹಡಪದ ಮೊದಲಾದವರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.