ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದ ಪ್ರತಿಯೊಂದು ವಾರ್ಡ್ಗಳಲ್ಲಿ
ಚರಂಡಿಗಳಲ್ಲಿನ ಗಲೀಜಿನಿಂದಾಗಿ ಸೊಳ್ಳೆಗಳು
ವಿಪರೀತವಾಗಿದ್ದು,ಇವುಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೊಳ್ಳೆಗಳ ನಿಯಂತ್ರಣಕ್ಕೆ ಐದಾರು ಬಾರಿ ಫಾಗಿಂಗ್ ಮಾಡಬೇಕು ಆದರೆ ಒಂದು ಸಲ ಮಾತ್ರ ಫಾಗಿಂಗ್ ಮಾಡಿ ಸುಸ್ತಾಗಿ ಕುಳಿತ ಗ್ರಾಮ ಪಂಚಾಯಿತಿ ಸಿಬ್ಬಂದಿ, ಪಿಡಿಓ ಇದರಿಂದಾಗಿ ಇಂದು
ಗ್ರಾಮಸ್ಥರು ಕನಕಗಿರಿ ಹಾಗೂ ಕೊಪ್ಪಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸ್ವಚ್ಛತೆ ಮಾಡುವ ಉದ್ದೇಶಕ್ಕೆ ಸಾಕಷ್ಟು ಅನುದಾನ ಬಂದರೂ ಸಹ ಸಮಯಕ್ಕೆ ಸರಿಯಾಗಿ ಬಳಸಿಕೊಳ್ಳದೆ ಈ ರೀತಿ ಸಾರ್ವಜನಿಕರು ಆಸ್ಪತ್ರೆಯಲ್ಲಿ ಕಾಲ ಕಳೆಯುವಂತಾಗಿದೆ. ಕಳೆದ ಎರಡು ತಿಂಗಳು ಹಿಂದೆ ಗ್ರಾಮದ ತೆಗ್ಗಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಗ್ರಾಮ ಪಂಚಾಯಿತಿ
ನಿರ್ವಹಿಸಿದ್ದರೆ ಇಂದು ಡೆಂಗ್ಯೂ ಇಷ್ಟು ಹರಡುತ್ತಿರಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.ಇನ್ನಾದರೂ ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿಗಳು,ಸಿಬ್ಬಂದಿ ಈ ಬಗ್ಗೆ ಗಮನ ಹರಿಸುತ್ತಾರಾ ಎಂದು ಕಾದು ನೋಡಬೇಕಿದೆ.
ವರದಿ ಹನುಮಂತಪ್ಪ ನಾಯಕ