ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಆಳೂರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ 3f ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೇಘಾ ಡ್ರೈವ್ ತಾಳೆ ಬೆಳೆ ಸಸಿ ನೆಡುವ ಕಾರ್ಯಕ್ರಮ ಜರುಗಿತು.ಆಳೂರ ಗ್ರಾಮದ ಶ್ರೀಸಿದ್ದರಾಮ ಕಾಂತಪ್ಪ
ಮಾವಿನಹಳ್ಳಿ ಇವರ ತೋಟದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ನಾಯಕ ಹಾಗೂ ತೋಟಗಾರಿಕೆ ಇಲಾಖೆಯ AHO ಶ್ರೀ ರವೀಂದ್ರ ಬಾಲಗಾಂವ ಸಸಿ ನೆಟ್ಟು ಕಾರ್ಯಕ್ರಮ ಉದ್ದೇಶಿಸಿ ತಾಳೆ ಬೆಳೆ ಬೆಳೆದು ಆರ್ಥಿಕವಾಗಿ ರೈತರು ಮುಂದೆ ಬರಬೇಕೆಂದು ತಿಳಿಸಿದರು ಹಾಗೂ ಇಲಾಖೆಯಿಂದ ಬರುವ ಸಹಾಯಧನಗಳ ಬಗ್ಗೆ ವಿವರವಾಗಿ ತಿಳಿಸಿ ಕೊಟ್ಟರು ಹಾಗೂ 3f ಆಯಿಲ್ ಪಾಮ್ ಏರಿಯಾ ಮ್ಯಾನೇಜರ್ ಶಾಂತಪ್ಪ ರಡ್ಡಿ ತಾಳೆ ಬೆಳೆಯ ತಾಂತ್ರಿಕ ಮಾಹಿತಿ ಹೇಳಿದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ ಹೂಗಾರ,ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ನರಸವ್ವ ಚಾಬುಕಸವಾರ ಹಾಗೂ ಸದಸ್ಯರುಗಳಾದ ಮೀನಾಕ್ಷಿ ಮಾವಿನಹಳ್ಳಿ, ಯಲ್ಲಾಲಿಂಗ ಸಲದಳ್ಳಿ,ಸುರೇಶ್ ಚಾಬುಕಸವಾರ, ಪ್ರಗತಿಪರ ರೈತರಾದಂತ ಮಹಾದೇವ ಮಾವಿನಹಳ್ಳಿ, ಪುಂಡಲಿಕ್ ಮೇಲಿನ ಕೇರಿ, ಹನುಮಂತ ನಾವಿ, ರೇವಣಸಿದ್ದ ಹೊನಕಟ್ಟಿ,ಪ್ರಕಾಶ ಮಾವಿನಹಳ್ಳಿ,ಅಪ್ಪು ಮಾವಿನಹಳ್ಳಿ,ಶಿವಾನಂದ ನಂದರಗಿ ಹಾಗೂ ಇನ್ನುಳಿದ ರೈತರು ಗ್ರಾಮಸ್ಥರು ಭಾಗಿಯಾಗಿದ್ದರು. ಕಾರ್ಯಕ್ರಮದ ಸ್ವಾಗತ ಭಾಷಣ ಆನಂದ ಅಗರಖೇಡ ನೆರವೇರಿಸಿ ಕೊಟ್ಟರು.
ವರದಿ:ಲೋಹಿತಕುಮಾರ ರೂಗಿ