ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಟಿ ,ಬಿ, ವೃತ್ತದಲ್ಲಿ ಇಂದು ಮೊಹರಂ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಬಾಂಧವರು ವಿವಿಧ ರೀತಿಯ ಹಣ್ಣುಗಳನ್ನು ಸೇರಿಸಿ ಪಾನಕ ಮಾಡಿ
ವಿತರಿಸುವ ಮೂಲಕ ಮೊಹರಂ ಹಬ್ಬವನ್ನುಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.
ಮಕ್ಕಳು ಯುವಕರು ರಸ್ತೆ ಪಕ್ಕದಲ್ಲಿ ಹೋಗುವ ಬರುವ ವಾಹನಗಳಲ್ಲಿ ಸಂಚರಿಸುವರಿಗೆ ಮತ್ತು ಪ್ರಯಾಣಿಕರಿಗೆ ಪಾನಕವನ್ನು ಹಂಚಿದರು.
ಮೊಹರಂ ಹಬ್ಬದ ವಿಶೇಷತೆ ಎಂದರೆ ಯಾರು ಹಸಿವಿನಿಂದ ಇರಬಾರದು ಎನ್ನುವುದು ನಮ್ಮ ಧರ್ಮ ಎಂದು ಅಕ್ರಮ್ ಅಹ್ಮದ್ ಖಾನ್ ಇವರು ಮೊಹರಂ ಹಬ್ಬದ ವಿಶೇಷತೆ ಏನೆಂದರೆ ನಮ್ಮ ಇಮಾಮ್ ಹುಸೇನ್ ಎನ್ನುವ ಮಹಾತ್ಮ ಗುರುಗಳನ್ನು ಶತ್ರುಗಳು ಬಂಧಿಸಿ ಇವರಿಗೆ ಮತ್ತು ಇವರ ಕುಟುಂಬದವರಿಗೆ ಯಾವುದೇ ರೀತಿಯ ಆಹಾರವನ್ನು ಮತ್ತು ನೀರನ್ನು ನೀಡದೆ ಹಿಂಸೆ ನೀಡಿರುತ್ತಾರೆ ಆದ್ದರಿಂದ ನಾವುಗಳು ಅವರ ಸ್ಮರಣಾರ್ಥವಾಗಿಇಂದು ಯಾರೂ ಹಸಿವಿನಿಂದ ಇರಬಾರದೆಂದು ನಾವುಗಳು ಹಣ್ಣಿನ ಪಾನಕವನ್ನು ಮಾಡಿ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲೆಂದು ಹಂಚುತ್ತಿದ್ದೇವೆ ತಮ್ಮ ಮನದಾಳದ ಮಾತನ್ನು ಹೇಳಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.