ಯಾದಗಿರಿ: ಹೊಸಪೇಟೆ ಗ್ರಾಮದಲ್ಲಿ ಪಿ ಎನ್ ಎಸ್ ಎಫ್ ಎ ಮತ್ತು HoSh ಅನುಷ್ಠಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸಂಸ್ಥೆಯ ಸಹಾಯಕ ನಿರ್ದೇಶಕರು ವರ್ಲ್ಡ್ ವಿಷನ್ ಮಾತನಾಡಿದರು ಮಕ್ಕಳು ಬಡತನದಿಂದ ವಿದ್ಯಾಭ್ಯಾಸ ವಂಚಿತರಾಗಲು ಸಾಧ್ಯವಿಲ್ಲ ಮಕ್ಕಳಿಗೆ ಓದುವ ಆಸಕ್ತಿ ಇರಬೇಕು ಸರಕಾರವು ಅನೇಕ ಸೌಲಭ್ಯಗಳು ಒದಗಿಸುತ್ತಿದ್ದು ವರ್ಲ್ಡ್ ವಿಷನ್ ಸಂಸ್ಥೆ ಮಕ್ಕಳ ವಿಕಾಸಕ್ಕೋಸ್ಕರ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಹಾಗೂ ಶ್ರೀ ಹಣಮಂತ್ ಕರಡಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು ಮಕ್ಕಳಿಗೆ 14 ವರ್ಷದವರೆಗೆ ಅವರಿಗೆ ಕೊಡಬೇಕಾದ ಎಲ್ಲಾ ಸೌಲಭ್ಯಗಳು, ಮಕ್ಕಳ ಹಕ್ಕುಗಳು ಪೂರೈಸುವುದರಿಂದ ಸಮಾಜದಲ್ಲಿ ಯಾವುದೇ ಮಗುವು ಶಿಕ್ಷಣದಿಂದ ವಂಚಿತರಾಗದೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಜೀವಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು ಶ್ರೀ ಪ್ರೇಮ್ ಮೂರ್ತಿ ಜಿಲ್ಲಾ ಮಕ್ಕಳ ಯೋಜನಾ ಅಧಿಕಾರಿ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ಒದಗಿಸುವುದು ಹಾಗೂ ಮಕ್ಕಳ ಆರೈಕೆಯಲ್ಲಿ ಪಾಲಕರ ಕರ್ತವ್ಯ ಹಾಗೂ ಶಿಕ್ಷಕರ ಕರ್ತವ್ಯಗಳ ಬಗ್ಗೆ ತಿಳಿಸಿದರು ಶ್ರೀ ರಿಯಾಜ್ ಪಟೇಲ್ ಮಕ್ಕಳ ಕಾರ್ಮಿಕ ಯೋಜನಾ ನಿರ್ದೇಶಕರು ಬಾಲಕಾರ್ಮಿಕ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಲ್ಲಾ ಮಗು ಶಿಕ್ಷಣವನ್ನು ಪಡೆದುಕೊಳ್ಳುವುದು ಬಹಳ ಪ್ರಮುಖವಾಗಿದೆ ಎಂದು ತಿಳಿಸಿದರು ವಿಕಲಚೇತನ ಮಕ್ಕಳಿಗೆ 6 ವೀಲ್ ಚೇರ್ ಹಾಗೂ ಅಂಗನವಾಡಿ ಮಕ್ಕಳಿಗೆ 350ಟಿಫನ್ ಬಾಕ್ಸ್,ಪ್ರೌಢ ಶಾಲಾ ಮಕ್ಕಳಿಗೆ 220ಹೈಜಿನ್ ಕಿಟ್,10 ನೇ ತರಗತಿ ಮಕ್ಕಳಿಗೆ ನೋಟ್ ಬುಕ್ ವಿತರಣೆ,ಜನನ ಪ್ರಮಾಣ ಪತ್ರದ ವಿತರಣೆ ಮಾಡಲಾಯಿತು.ಈ ಒಂದು ಕಾರ್ಯಕ್ರಮದಲ್ಲಿ ಶ್ರೀಮತಿ ಸಿಬಿ ರಾಜೇಶ್ವರಿ ಮುಖ್ಯ ಗುರುಗಳು ಅಧ್ಯಕ್ಷತೆ ಸ್ಥಾನವನ್ನು ವಹಿಸಿದರು. ಶ್ರೀ ಅನಿಲ್ ತೇಜಪ್ಪ ಪ್ರೋಗ್ರಾಮ್ ಆಫೀಸರ್ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆ ,ಶ್ರೀ ರಮೇಶ್ ಗುತ್ತೇದಾರ್ ತಾಲೂಕ ಆರೋಗ್ಯ ಅಧಿಕಾರಿಗಳು, ಶ್ರೀಮತಿ ಅಂಬಲಮ್ಮ ಗ್ರಾಮ ಪಂಚಾಯತಿ ಅಧ್ಯಕ್ಷ ,ಶ್ರೀಮತಿ ಶಕಿನ ಬಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಶ್ರೀಮತಿ ಅಂಜುಮ ಬೇಗಂ ಮೇಲ್ವಿಚಾರಕಿ ,ಶ್ರೀ ನಾಗಪ್ಪ ಡಾನ್ ಬಾಸ್ಕೋ ಸಿಬ್ಬಂದಿ ,ಶ್ರೀ ಶರಣಪ್ಪ ಗ್ರಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು,ಶ್ರೀ ಮಲ್ಲಣ್ಣ ಹುಲಿಕಲ್ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಶ್ರೀ ಬಾಬು ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷರು,ಶಾಲಾ ಶಿಕ್ಷಕರು ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು ಮಕ್ಕಳು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.