ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಂಬೇಡ್ಕರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನೂತನವಾಗಿ ಸಂಸದರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ಹನೂರು ಕ್ಷೇತ್ರಕ್ಕೆ ಆಗಮಿಸುತ್ತಿರುವ ಸುನಿಲ್ ಬೋಸ್ ಅವರಿಗೆ ಸನ್ಮಾನ ಸಮಾರಂಭದಲ್ಲಿ ಮಾಜಿ ಶಾಸಕ ನರೇಂದ್ರ ಮಾತನಾಡಿ ಚಾಮರಾಜನಗರದ ನೂತನ ಸಂಸದರಾದ ಸುನಿಲ್ ಬೋಸ್ ಅವರಿಗೆ ಕ್ಷೇತ್ರದ ಜನರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ತಂದು ಕೊಟ್ಟಿರುವ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು ನಂತರ ಮಾತನಾಡಿದ ಅವರು ಕ್ಷೇತ್ರದ ಅಭಿವದ್ಧಿಗೆ ನಾನು ಈ ಬಾರಿ ಸೋತರೂ ಸಹ ಎದೆ ಗುಂದದೆ ಸಂಸದರ ಒಟ್ಟಿಗೆ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತೇನೆ ಎಂದರು.
ನಂತರ ನೂತನ ಸಂಸದರಾದ ಸುನಿಲ್ ಬೋಸ್ ಮಾತನಾಡಿ ಈಗ ತಾನೇ ನಾನು ಗೆದ್ದು ಶಾಲೆ ಗೆ ನೂತನವಾಗಿ ದಾಖಲಾತಿ ಪಡೆಯುವ ಹಾಗೆ ಇದ್ದೇನೆ ಮುಂದಿನ ದಿನದಲ್ಲಿ ನಾನು ಕ್ಷೇತ್ರದ ಅಭಿವೃದ್ಧಿ ಹಾಗೂ ಕಾರ್ಯಗಳಿಗೆ ಒತ್ತು ಕೊಟ್ಟು ಮನಸು ಪೂರ್ತಿಯಾಗಿ ನನ್ನ ಕರ್ತವ್ಯ ಮಾಡುತ್ತೇನೆ ಕ್ಷೇತ್ರದ ಅಭಿವೃದ್ಧಗಾಗಿ ಹಗಲಿರುಳು ದುಡಿಯುತ್ತೇನೆ ಎಂದರು,ಹಾಗೆಯೇ ಹನೂರು ಕ್ಷೇತ್ರದ ಮಹದೇಶ್ವರ ಬೆಟ್ಟ, ರಾಮಾಪುರ, ಬಂಡಳ್ಳಿ,ಲೊಕ್ಕನಹಳ್ಳಿ,ಹಾಗೂ ಇನ್ನಿತರ ಗ್ರಾಮಗಳ ರಸ್ತೆ ಗಳ ಅಭಿವೃದ್ಧಿಪಡಿಸಲು ಈಗಾಗಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ ಅವರು ಸಹ ಅನುದಾನ ಬಿಡುಗಡೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ ನಮ್ಮ ಶ್ರಮದಿಂದ ಅನುದಾನ ಬಿಡುಗಡೆಯಾಗುತ್ತಿದೆ ಇದರಲ್ಲಿ ಹಾಲಿ ಶಾಸಕ ಕೊಡುಗೆ ಏನು ಇಲ್ಲ ಪಕ್ಷದ ಕಾರ್ಯಕರ್ತರಿಗೆ ಇದರ ಮನವವರಿಕೆ ಮಾಡಿಕೊಡಬೇಕು ಎಂದರು.
ನಂತರ ವಿವಿಧ ಗ್ರಾಮದ ಜನಾಂಗದ ಮುಖಂಡರುಗಳು ಹಾಗೂ ಕಾರ್ಯಕರ್ತರು ನೂತನವಾಗಿ ಆಯ್ಕೆಯಾಗಿರುವ ಸಂಸದರಿಗೆ ಸನ್ಮಾನ ಮಾಡಿ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾಡ ಅಧ್ಯಕ್ಷ ಮರಿಸ್ವಾಮಿ,ಚಮುಲ್ ನಿರ್ದೇಶಕರದ ನಂಜುಂಡ ಸ್ವಾಮಿ, ಶಾಹುಲ್ ಅಹಮ್ಮದ್ ,ಮಾಜಿ ತಾಲೂಕು ಪಂಚಾಯತಿ ಸದಸ್ಯ ಜವಾದ್ ಅಹಮ್ಮದ್, ಸಿದ್ದರಾಜು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದವರ್ಮ,ಮಾರ್ಟಳ್ಳಿಮಣಿ, ರಾಮಲಿಂಗು, ಕೆಪಿಸಿಸಿ ಸದಸ್ಯ ಬಸವರಾಜು ಗ್ರಾಮ ಪಂಚಾಯಿತಿ ಅಧ್ಯಕ್ಷ ಇಗ್ನೇಶ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇನ್ನಿತರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.