ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಭಟಪನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬದವರ ಮನೆ ಕೇವಲ ಎರಡು ಮಾತ್ರ ಇವೆ ಆದರೆ ಇಲ್ಲಿ ಸರ್ವ ಧರ್ಮದವರು ಸೇರಿಕೊಂಡು ಜಾತಿಯಿಂದ ದೂರವಿದ್ದು ಪ್ರೀತಿಯಿಂದ ಹತ್ತಿರವಿದ್ದು,ಹಿಂದೂ ಮುಸ್ಲಿಂರ ಭಾವೈಕ್ಯತೆಯ ಕೊಂಡಿಯಾಗಿ ಮೊಹರಂ ಹಬ್ಬವನ್ನು ಆಚರಿಸಿದರು.ಈ ಮೊಹರಂ ಹಬ್ಬದಲ್ಲಿ ಯುವಕರು ಉಲ್ಲಾಸದಿಂದ ಕೀಲು ಕುದುರೆ ಕುಣಿತವನ್ನು ನೊಡುವುದೆ ಒಂದು ಸೊಬಗು,ಇದು ಹಬ್ಬಕ್ಕೆ ಮೆರುಗು ತರುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ನೀಡುತ್ತದೆ ಇವರ ಕುಣಿತವನ್ನು ನೊಡಲು ಜನ ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ ಕೀಲು ಕುದುರೆ ಕಲಾವಿದರಾದ ಮಾರುತಿ ದೇವರಳ್ಳಿ,ಫಕೀರಪ್ಪ ಪೋತುಂಡಿ,ವೀರೇಶ ಗುಡಿಹಿಂದಲ್,ನಾಗಪ್ಪ ತಳವಾರ ಇವರು ಉಲ್ಲಸಭರಿತವಾಗಿ ಕುಣಿದು ಹಬ್ಬಕ್ಕೆ ಮೆರುಗು ತಂದರು.ಹಿರಿಯರಾದ ಖಾಜಾಸಾಬ ನೂರಭಾಷ, ಪರಸಪ್ಪ ಹೊಸಮನಿ, ಶರಣಪ್ಪ ಹಾದಿಮನಿ, ಮರ್ತುಜಾಸಾಬ, ಮಹೇಶ ದೊಡ್ಡಮನಿ, ಗವಿಸಿದ್ದಪ್ಪ ಭಾವಿಕಟ್ಟಿ, ಹಂಚ್ಯಾಳಪ್ಪ ಕಲ್ಲಗೋಡಿ,ಯಲ್ಲಪ್ಪ ದೇವರಳ್ಳಿ, ಚೆನ್ನಪ್ಪ ತಳವಾರ, ಮುಜೆಸಾಬ,ಹನುಮಪ್ಪ ಹುಲಿಗೇಜ್ಜಿ, ಹನುಮಪ್ಪ ಭಾವಿಕಟ್ಟಿ,ಸಂಜಯ ಕುಡಗುಂಟಿ,ಪ್ರಭು ಕರಮುಡಿ,ಕೆಂಚಪ್ಪ ಹರಿಜನ,ಎಸ್.ಕೆ.ದಾನಕೈ ಸೇರಿದಂತೆ ಸುತ್ತಮುತ್ತಲಿನ ಭಕ್ತಿರು ಭಕ್ತಿಯಿಂದ ಉತ್ತತ್ತಿ,ಬೆಲ್ಲ,ಸಕ್ಕರೆ,ಹೂ ಮಾಲೆ ಅರ್ಪಿಸಿ ಬಳಿಕ ದಿಡ್ ನಮಸ್ಕಾರ ಸಲ್ಲಿಸಿ ಆರೋಗ್ಯ, ಸಂಪತ್ತು, ಮಳೆ ಬೆಳೆ ಚೆನ್ನಾಗಿ ಲಭಿಸಲಿ ಎಂದು ಅಲೈ ದೇವರಲ್ಲಿ ಪ್ರಾರ್ಥಿಸಿಕೊಂಡರು. ಶಾಂತಿ,ಸಹನೆ, ಸಂಭ್ರಮ ಸಡಗರದಿಂದ ಮೊಹರಂ ಹಬ್ಬವನ್ನು ಅತ್ಯಂತ ಭಕ್ತಿಭಾವದಿಂದ ಒಟ್ಟು ಐದು ದಿನಗಳ ಕಾಲ ದೇವರುಗಳನ್ನು ಭಟನಹಳ್ಳಿ ಗ್ರಾಮದಲ್ಲಿ ಅಲೈ ದೇವರನ್ನು ಡೋಲಿಯನ್ನು ಕೂಡಿಸಿ ದಿನ ನಿತ್ಯ ಅಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರ ಕುಣಿತ, ಹುಲಿ ವೇಷಗಾರರು,ಕಳ್ಳಳ್ಳಿ ಬವ್ವಾ ಸೇರಿದಂತೆ ವಿವಿಧ ಕಲಾವಿದರು ಭಕ್ತಿಭಾವದಿಂದ ಕುಣಿದು ಕುಪ್ಪಳಿಸಿದರು. ಜು.17 ರಂದು ಅಲೈ ದೇವರುಗಳನ್ನು ಹೊಳೆಗೆ (ದಫನ್) ಗೂ ಮುನ್ನ ಎಲ್ಲಾ ದೇವರುಗಳನ್ನು ವಿವಿಧ ವಾದ್ಯ ಮೇಳದೊಂದಿಗೆ ಶ್ರದ್ದಾ ಭಕ್ತಿಯಿಂದ ಮೆರವಣಿಗೆ ನಡೆಸಿ. ಉತ್ತತ್ತಿ,ಸಕ್ಕರಿ ಅರ್ಪಿಸಿದ ಬಳಿಕ ರಾತ್ರಿ ಅಲೈ ದೇವರನ್ನ ಹೊಳೆಗೆ ಕಳಿಸಿದರು.
ಬರಹ: ಶರಣಬಸಪ್ಪ ದಾನಕೈ ಯಲಬುರ್ಗಾ