ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಹಕಾರ ತತ್ವಕ್ಕೆ ಬದ್ಧರಾಗೋಣ: ಧೂಪದ

ಬಾಗಲಕೋಟೆ/ಸೂಳೇಬಾವಿ:ನಮ್ಮ ಜೀವನ ನಿರ್ವಹಣೆಗಾಗಿ ನಾವು ಒಂದಿಲ್ಲೊಂದು ಬಗೆಯಲ್ಲಿ ಉದ್ಯೋಗ, ಉದ್ಯಮ ಮಾಡಿಕೊಂಡಿದ್ದೇವೆ. ಜೊತೆಗೆ ನಮ್ಮವರು, ನಮ್ಮ ನೆರೆಹೊರೆಯವರ ಬದುಕಿನ ಒಳಿತಿಗಾಗಿಯೂ ಸಹ ನಮ್ಮ ಸೇವಾಗುಣ ಅರ್ಪಿಸಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ಸುತ್ತಮುತ್ತಲ ಸಮಾಜ ಸಹಬಾಳ್ವೆಯಿಂದ ಬದುಕಲು ಸಾಧ್ಯ ಎಂದು ಮಾಜಿ ತಾಲೂಕು ಪಂಚಾಯ್ತಿ ಸದಸ್ಯ, ಜನಸ್ನೇಹಿ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಚಿದಾನಂದ ಧೂಪದ ಅಭಿಪ್ರಾಯ ಪಟ್ಟರು.
ಸೂಳೇಭಾವಿ-ಅಮೀನಗಡ ಹೆದ್ದಾರಿಯ ನಾಗರಾಳರ ಕಾಂಪ್ಲೆಕ್ಸ್ ನಲ್ಲಿ ನೂತನಾಗಿ ಸ್ಥಾಪಿಸಲಾದ ಜನಸ್ನೇಹಿ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
ಯಾವುದೇ ಒಂದು ಸಂಘ ಅಥವಾ ಸಂಸ್ಥೆ ಅಭಿವೃದ್ಧಿಯತ್ತ ತನ್ನ ಹೆಜ್ಜೆ ಇರಿಸಬೇಕಾದರೆ ಸರ್ವಸದಸ್ಯರ ಸಲಹೆ, ಸೂಚನೆ, ಮಾರ್ಗದರ್ಶನ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ವಿಶ್ವಾಸ ನಂಬಿಕೆ ತುಂಬ ಮುಖ್ಯ. ಅಂತಹ ವಿಶ್ವಾಸವನ್ನಿಟ್ಟು ಸರ್ವಾನುಮತದಿಂದ ಅಧ್ಯಕ್ಷನನ್ನಾಗಿ ಆಯ್ಕೆಗೊಳಿಸಿ ಜವಾಬ್ದಾರಿ ನೀಡಿದ್ದೀರಿ ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
ಉಪಧ್ಯಕ್ಷ ಮಲ್ಲು ಕತ್ತಿ ಅವರು ಮಾತನಾಡಿ ಸದಸ್ಯರ ಗುಂಪಿನಲ್ಲಿ ನನಗಿಂತಲೂ ಹೆಚ್ಚಿನ ವಯಸ್ಸು ಹಾಗೂ ಅನುಭವ ಉಳ್ಳವರಿದ್ದರೂ ಉಪಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆಗೊಳಿಸಿ ಜವಾಬ್ದಾರಿ ಹೆಚ್ಚಿಸಿದ್ದೀರಿ. ನಿಮ್ಮ ವಿಶ್ವಾಸ ಮತ್ತು ನಂಬಿಕೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಸಂಸ್ಥೆಯ ವ್ಯವಸ್ಥಾಪಕ ಸಂಜು ಗೌಡರ ಉಪಸ್ಥಿತರಿದ್ದರು.
ಸದಸ್ಯರಾದ ಗೈಬುಸಾಬು ಶಿರೂರ, ರಮೇಶ ಕುರಿ, ಪರಶುರಾಮ ಸಂಗಮ, ಜಗದೀಶ ರಕ್ಕಸಗಿ, ಇಬ್ರಾಹಿಂ ಮಳಗಾಂವಿ, ವೀರೇಶ ನೀಲುಗಲ್ಲ, ಶಿವು ಬಳಬಟ್ಟಿ, ಶ್ರೀಮತಿ ಮೀನಾಕ್ಷಿ ಧುತ್ತರಗಿ, ಶ್ರೀಮತಿ ಮಲ್ಲಮ್ಮ ಹನಮಂತ ಹಂಡಿ, ಕಲ್ಯಾಣಿ ಭಜಂತ್ರಿ, ನಿಂಬಣ್ಣ ಹಣಗಿ ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ