ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕು ಪ್ರತಿ ವರ್ಷದಂತೆ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿಯನ್ನು ಜುಲೈ 21 ರಂದು ಆಚರಿಸುವ ಕುರಿತು ತಾಲೂಕು ತಹಶಿಲ್ದಾರರ ಕಚೇರಿಯ ಸಭಾಂಗಣದಲ್ಲಿ ಶ್ರೀ ಜಗದೀಶ್ ಸರ ತಾಲೂಕು ತಹಶಿಲ್ದಾರರು ಮತ್ತು ಶಹಾಬಾದ ತಾಲೂಕು ಪೋಲಿಸ್ ಠಾಣೆಯ (ಪಿ.ಎಸ್ ಐ) ಚಂದ್ರಕಾಂತ, ಹಾಗೂ ಅನೇಕ ಇಲಾಖೆಯ ಸಿಂಬದ್ದಿ ಹಾಗೂ ಸಮಾಜದ ಮುಖಂಡರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ಅವರು ಮಾತನಾಡಿ, ಜುಲೈ 21 ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಶಿವಶರಣ ಹಡಪದ ಅಪ್ಪಣ್ಣ 890 ಜಯಂತಿಯನ್ನು ಆಚರಿಸಲಾಗುವುದು. ಜಯಂತಿ ಕಾರ್ಯಕ್ರಮವನ್ನು ತಹಶಿಲ್ದಾರರ ಕಚೇರಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದರು.
ಸಭೆಗೆ ವಿವಿಧ ಸಮಾಜದ ಮುಖಂಡರು ಭಾಗವಹಿಸಿ ಸಲಹೆ, ಸೂಚನೆ ನೀಡಿದರು. ತಾಲೂಕು ಸಹಾಯಕ ನಿರ್ದೇಶಕರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ಸಂಧರ್ಭದಲ್ಲಿ ಶ್ರೀ ಶಹಾಬಾದ ಸಮಾಜದ ಮುಖಂಡರು ಶ್ರೀ ಬಸವರಾಜ ಹಡಪದ ಹಳ್ಳಿ ಶಹಾಬಾದ ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಜ್ಯ ಕಾನೂನು ಸಲಹೆಗಾರ-ರಮೇಶ ವಕೀಲರು ಮಲಕೋಡ್ ಹಾಗೂ ಜಿಲ್ಲಾ ಸಹ ಕಾರ್ಯದರ್ಶಿ ಮಹಾದೇವ ರಾವೂರ,ತಾಲೂಕು ಗೌರವಾಧ್ಯಕ್ಷ ನಾಗಣ್ಣ ಮುತ್ತಕೋಡ್,ಶಹಾಬಾದ ತಾಲೂಕು ಅಧ್ಯಕ್ಷರು ಶಿವರಾಜ ಹಡಪದ ಮಾರಡಗಿ, ಕಾರ್ಯಾಧ್ಯಕ್ಷರು-ಭೀಮಾಶಂಕರ ಹಡಪದ ಮತ್ತು ಭಾಗಣ್ಣ ಹಡಪದ ಮುತ್ತಕೋಡ್, ಪ್ರಧಾನ ಕಾರ್ಯದರ್ಶಿ -ಸಿದ್ರಾಮ ಯಾಗಾಪೂರ, ಉಪಾಧ್ಯಕ್ಷರು- ಮಲ್ಲಿಕಾರ್ಜುನ ತರಹನಹಳ್ಳಿ , ನೀಲಕಂಠ ಹಳೇ ಶಹಾಬಾದ,ತೋಟೇಂದ್ರ ಚನ್ನೂರ ಸಂಘಟನಾ ಕಾರ್ಯದರ್ಶಿ,ತಾ.ಖಜಾಂಚಿ ಅನಿಲವಾಗಿ ಮಾರಡಗಿ,ಸಹ ಕಾರ್ಯದರ್ಶಿ ಗುರು ಕುಕ್ಕುಂದಾ ,ರಮೇಶ್ ಕುಕ್ಕುಂದಾ, ಕಾನೂನು ಸಲಹೆ ಗಾರ ಸಚಿನ ಭಂಕೂರ,ಸಮಾಜದ ಮುಖಂಡರು ದೋಳಪ್ಪ ಹಡಪದ,ಶಿವರಾಜ ಹಡಪದ ಶಾಂತ ನಗರ, ರೇವಣ್ಣಸಿದ್ದ ಹಡಪದ ಶಹಾಬಾದ, ಈರಣ್ಣ ಮುತ್ತಗಿ, ಅನಿಲಕುಮಾರ ಹಳೇ ಶಹಾಬಾದ, ಶಿವಲಿಂಗ ಹಡಪದ ಸುಗೂರ, ಭಾಗಣ್ಣ ದಂಡಗುಂಡ, ಬಸವರಾಜ ನಂದ್ಯಳ್ಳಿ, ಸಿದ್ದು ಕೊರವಾರ್,ಅಣ್ಣವೀರ ಕೋರವಾರ, ರಾಜು ಶಹಾಬಾದ,ಗಣೇಶ ಕೋರವಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.