ಪಾವಗಡ:ಸರ್ಕಾರದ ಬಹಳಷ್ಟು ಯೋಜನೆಗಳ ಅಡಿಯಲ್ಲಿ ಕಡು ಬಡವರಿಗೆ ಮನೆ ನಿರ್ಮಾಣಕ್ಕೆ ಆದೇಶವಿದ್ದರೂ ಸಹ ಉಳ್ಳವರಿಗೆ ಮಾತ್ರ ಮನೆ ನೀಡಲಾಗುತ್ತಿದ್ದೂ, ಇಲ್ಲದವರಿಗೆ ಕಣ್ಣೀರಿನ ಗತಿಯೇ ಆಗಿದೆ.
ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಎಸ್.ಸಿ.ಕಾಲೋನಿ ಯಲ್ಲಿ ವಾಸವಿರುವ ದೇವಿ ಎನ್ನುವ ಅವಿವಾಹಿತೆ ಮಹಿಳೆ ತಂದೆ ತಾಯಿಯನ್ನು ಕಳೆದುಕೊಂಡು 6 ವರ್ಷಗಳಿಂದ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದೂ ಮನೆ ನಿರ್ಮಾಣಕ್ಕೆ ಆರ್ಥಿಕ ಶಕ್ತಿ ಇಲ್ಲದೆ ಮರದ ಕಟ್ಟಿಗೆ ಮೂಲಕ ಬ್ಯಾನರ್ ಗೋಡೆ, ಮೇಲ್ಚಾವಣಿಗೆ ತುಂಡು ತುಂಡು ಹೊಡೆದ ಸಿಮೆಂಟ್ ಶೀಟ್ ಬ್ಯಾನರ್ ಹೊದಿಕೆ ಹೊದಿಸಿಕೊಂಡು, ಮಳೆ ಗಾಳಿ ಬಂದಾಗ ಯಾವಾಗ ಮೇಲೆ ಬೀಳುತ್ತೋ ಅನ್ನುವ ಪ್ರಾಣ ಬಯದೊಂದಿಗೆ ಜೀವನ ಸಾಗಿಸುತ್ತಾ, ಸ್ಥಳೀಯ ಗ್ರಾಮ ಪಂಚಾಯತ್,ಪ್ರಜಾ ಪ್ರತಿನಿಧಿಗಳ ಬಳಿ ಸೂರು ವಿಚಾರ ಗಮನಕ್ಕೆ ತಂದರು ಸಹ ನನ್ನ ಕಷ್ಟಕ್ಕೆ ಸ್ಪಂದಿಸದೆ ಇದ್ದಾಗ ಪತ್ರಿಕಾ ಮಿತ್ರರಿಗೆ ಕಣ್ಣೀರ ಬಾದೆಯ ಮಾಹಿತಿ ನೀಡಿದಾಗ ಸದರಿ ಪತ್ರಿಕಾ ಮಿತ್ರರು ಹೆಲ್ಪ್ ಸೊಸೈಟಿ ಸಂಸ್ಥೆ ಗಮನಕ್ಕೆ ತರಲಾಗಿ ಕೂಡಲೇ ಸ್ಪಂದಿಸಿದ ಹೆಲ್ಪ್ ಸೊಸೈಟಿ ಸಂಸ್ಥೆ ಅಧ್ಯಕ್ಷರಾದ ಮಾನಂ ಶಶಿಕಿರಣ್ ಸ್ಥಳಕ್ಕಾಗಮಿಸಿ ಒಂಟಿ ಮಹಿಳೆಯ ನರಕಯಾ ತಾನೆ, ಶೌಚಾಲಯದ ದುಸ್ಥಿತಿ ಕಂಡು ಇಂತಹ ಸನ್ನಿವೇಶ ಯಾವ ಮಹಿಳೆಗೆ ಬರಬಾರದು ಎಂದು ಅವೇದನೆ ವ್ಯಕ್ತಪಡಿಸಿ, ಈ ಬಡ ಮಹಿಳೆಗೆ ಸೂರು ಕಲ್ಪಿಸುವ ಸಂಪೂರ್ಣ ಜವಾಬ್ದಾರಿ ಹಾಗೂ ಮನೆ ನಿರ್ಮಾಣದ ಸಂಪೂರ್ಣ ಖರ್ಚು ನಮ್ಮ ಸಂಸ್ಥೆ ವಹಿಸಳಿದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಬಡ ಮಹಿಳೆಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಪದಾರ್ಥ ನೀಡಿ ಮಹಿಳೆಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಬಡ ಮಹಿಳೆ ನನಗೆ ಸಹಾಯ ಹಸ್ತ ನೀಡಲು ಮುಂದೆ ಬಂದಂತಹ ಹೆಲ್ಪ್ ಸೊಸೈಟಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.