ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನಿಂದ ಜಿಲ್ಲಾ ಕೇಂದ್ರವಾದ ಯಾದಗಿರಿ ಪದವಿ ಕಾಲೇಜಿಗೆ ಹಾಗೂ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ.
ವಡಗೇರಾ ತಾಲ್ಲೂಕು ಕೇಂದ್ರವಾದರೂ ಇಲ್ಲಿ ಯಾವುದೇ ಕಾಲೇಜು ಇಲ್ಲದ ಕಾರಣ ಹಾಗೂ ಇಲ್ಲದಂತೆ ಇರುವ ಶಾಲೆಗಳಿಂದಾಗಿ ವ್ಯಾಸಂಗಕ್ಕಾಗಿ ಯಾದಗಿರಿಯ ಶಾಲಾ ಕಾಲೇಜುಗಳಿಗೆ ಅವಲಂಬಿತವಾಗಿದೆ. ಹಾಗಾಗಿ ದಿನನಿತ್ಯ ಬಸ್ಸ ಪ್ರಯಾಣ ಶಾಲಾ ಕಾಲೇಜ ತಲುಪಲು ಹರಸಾಹಸ ಪಡಬೇಕಾಗಿರುವುದು ನಾಚಿಕೆಗೇಡಿನ ಸಂಗತಿ.
“ಕಷ್ಟಪಟ್ಟು ಸರಿಯಾದ ಸಮಯಕ್ಕೆ ತಲುಪಲು ಬಸ್ಸ್ ಸ್ಟ್ಯಾಂಡಿಂಗ್ ಬಂದರೆ ಬಸ್ಸಗಳೆ ನಾಪತ್ತೆ,
ಬಸ್ಸು ಬರದ ಕಾರಣ ನಾವುಗಳು ಪ್ರೈವೇಟ್ ವಾಹನಗಳ ಮೊರೆ ಹೋಗಬೇಕಾಗಿದೆ,
ನಮಗೆ ಶಾಲಾ ಕಾಲೇಜಿಗೆ ಸರಿಯಾದ ಸಮಯಕ್ಕೆ ತಲುಪಲು ಬಸ್ಸಿನ ವ್ಯವಸ್ಥೆ ಮಾಡಿಕೊಡಿ ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ”ಎಂದು ಆಕ್ರೋಶಗೊಂಡ ವಿಧ್ಯಾರ್ಥಿಗಳು.
ಬಸ್ ಬಾರದೆ ಹೋದರೆ ಶಾಲೆ,ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗಬೇಕಾಗಿದೆ. ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ.ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಂದ ಮನೆಗೆ ತೆರಳಬೇಕಾದರೂ ಬಸ್‌ಗಳಿಲ್ಲದೆ, ಪರ್ಯಾಯ ಮಾರ್ಗವಿಲ್ಲದೆ ಕಷ್ಟ ಪಡುತ್ತಿದ್ದಾರೆ.
ಈ ಬಗ್ಗೆ ಹಲವು ಗ್ರಾಮಗಳ ವಿದ್ಯಾರ್ಥಿಗಳು ಘಟಕದ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಯಾದಗಿರಿಯಿಂದ ಬೇರೆಡೆಗೆ ಹತ್ತು ಹಲವು ಬಸ್‌ಗಳು ಹಲವು ಬಾರಿ ಜನರಿಲ್ಲದೆ ಖಾಲಿ ಸಂಚರಿಸುತ್ತಿದ್ದರೂ ವಡಗೇರಾ ವಿದ್ಯಾರ್ಥಿಗಳಿಗೆ ಬಸ್ಸ್ ಸೌಲಭ್ಯ ಒದಗಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಶಿವರಾಜ ಸಾಹುಕಾರ್ ವಡಗೇರಾ