ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದ ಸಿದ್ದಲಿಂಗೇಶ್ವರ ವಿರಕ್ತ ಮಠದ ಆವರಣದಲ್ಲಿ ಜು.20ರಂದು ಜೇವರ್ಗಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 9:00 ಗಂಟೆಗೆ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೊನ್ನ, ಕಲ್ಲಹಂಗರಗಾ ಹಾಗೂ ಹರನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಬಳಿ ಮಟ್ಟದ ಜನಸ್ಪಂದನದಲ್ಲಿ ರೈತರ ಮತ್ತು ಸಾರ್ವಜನಿಕರ ಕುಂದು-ಕೊರತೆ ಅಹವಾಲುಗಳನ್ನು ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಸ್ವೀಕರಿಸಲಿದ್ದು, ಸ್ಥಳದಲ್ಲಿಯೇ ಬಗೆ ಹರಿಯುವ ಅಹವಾಲುಗಳನ್ನು ಜನಸ್ಪಂದನ ಕಾರ್ಯಕ್ರಮದಲ್ಲಿಯೆ ಇತ್ಯರ್ಥ ಮಾಡಲಾಗುವುದು, ಸದರಿ ಜನಸ್ಪಂದನದ ಸದುಪಯೋಗವನ್ನು
ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ ಮಲ್ಲಣ್ಣ ಯಲಗೋಡ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್