ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಕಲಬುರಗಿ ಜಿಲ್ಲೆಯ ಚಿತ್ತಾಪುರ:ವಾರ್ಡ್ 13,14,18ರಲ್ಲಿ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲುಗಳು ಸ್ವೀಕಾರ ಮಾಡಲಾಯಿತು. ಇದೇ ಸಮಯದಲ್ಲಿ
ವಾರ್ಡ್ ಸಂಖ್ಯೆ ೧೩ ಮತ್ತು ೧೪ಗಳಲ್ಲಿ ಮೊಹಲ್ಲಾ ಕ್ಲಿನಿಕಗಳು ಆರಂಭಿಸಲು ಜನಸ್ಪಂದನ ಸಭೆಯಲ್ಲಿ ಮನವಿ ಮಾಡಲಾಯಿತು.
ಚಿತ್ತಾಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ  ಬಹುತೇಕರಿಗೆ ದೂರವಾಗುವುದು. ಆದ್ದರಿಂದ ದೊಡ್ಡ ವಾರ್ಡ್ ಗಳಲ್ಲಿ ಮೊಹಲ್ಲಾ ಕ್ಲಿನಿಕ್ ಆರಂಭಿಸಬೇಕೆಂದು ಹಿರಿಯ ಸಾಮಾಜಿಕ ಮುಖಂಡ ಅಂಬಾದಾಸ ತುರೆ ಮನವಿ ಮಾಡಿದರು.
ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದ ಆವರಣದಲ್ಲಿ ಪೌರಾಡಳಿತ ನಿರ್ದೇಶನಾಲಯ ಜಿಲ್ಲಾ ನಗರಾಭಿವೃದ್ಧಿ ಕೋಶ, ಪುರಸಭೆ ಕಾರ್ಯಾಲಯ ಚಿತ್ತಾಪುರವತಿಯಿಂದ ಗುರುವಾರ ಹಮ್ಮಿಕೊಂಡಿರುವ ಸಾರ್ವಜನಿಕ ಅಹವಾಲು—ಕುಂದುಕೊರತೆಗಳ ಕುರಿತು ಜನಸ್ಪಂದನಾ ಸಭೆಯಲ್ಲಿ 
ಮಾತನಾಡಿದ ಅವರು, ಪಟ್ಟಣದ ವಾರ್ಡ್ ಸಂಖ್ಯೆ ೧೩ ಮತ್ತು ೧೪ಗಳಲ್ಲಿ ಜನಸಂಖ್ಯೆ ಹೆಚ್ಚಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಚಿಕ್ಕ ಆಸ್ಪತ್ರೆ ಇಲ್ಲವೇ ಸರ್ಕಾರದ ಯೋಜನೆಗಳಾದ  ಮೊಹಲ್ಲಾ ಕ್ಲಿನಿಕ್ ಆರಂಭಿಸಬೇಕೆಂದರು.
ಸಮಾಜ ಸೇವಕ ಅಂಬರೀಷ ಸುಲೆಗಾಂವ್ ಮಾತನಾಡಿ, ಕೆಳಗೇರಿಯ ಮಲ್ಲಿಕಾರ್ಜುನ ಮಂದಿರ ಹತ್ತಿರದ ಸ್ವಚ್ಚತೆ ಬಗ್ಗೆ ಅಲ್ಲಿನ ರಸ್ತೆ, ಚರಂಡಿ ಅವ್ಯವಸ್ಥೆ ಬಗ್ಗೆ, ಸ್ಟೇಷನ್ ಏರಿಯಾ, ನಾಗಾವಿ ಚೌಕ್, ಹಿಡಿದು ಇಡೀ ಊರಿನ ಬಹುತೇಕ ಚರಂಡಿ ನೀರು ನಮ್ಮ ಕೆಳಗೇರಿಯ ಮಲ್ಲಿಕಾರ್ಜುನ ಗುಡಿ ಹತ್ತಿರ ಬರುತ್ತಿದೆ. ಆದ್ದರಿಂದ ರಾಜಕಾಲುವೆ ನಿರ್ಮಿಸಿ ಎತ್ತರಗೊಳಿಸಬೇಕು.ಅಲ್ಲಿರುವ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಯ ಸುತ್ತ ಬಯಲಿನಲ್ಲಿ ಸಾರ್ವಜನಿಕರು ಶೌಚಾಲಯಕ್ಕಾಗಿ ಉಪಯೋಗಿಸುತ್ತಾರೆ. ಇದರಿಂದಾಗಿ ಅಲ್ಲಿರುವ  ಮಕ್ಕಳ ಆರೋಗ್ಯದ ಮೇಲೆ ಬೀಳುತ್ತದೆ.  ಮಹಿಳೆಯರಿಗಾಗಿ ಉದ್ಘಾಟನೆಗೋಸ್ಕರ್ ಆರಂಭಿಸಿದ ಶೌಚಾಲಯ ಒಂದು ವಾರದಲ್ಲಿಯೇ ಬೀಗ ಜಡಿಯಲಾಗಿದೆ. ಇನ್ನೆರಡು ಶೌಚಾಲಯಗಳು  ಅಸ್ತವ್ಯಸ್ತಗೊಂಡಿದ್ದು ಉಪಯೋಗಕ್ಕೆ ಬರದಂತಾಗದೆ. ಕೂಡಲೇ ಗುಣಮಟ್ಟದ ಶೌಚಾಲಯ ನಿರ್ಮಾಣವಾಗಬೇಕೆಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುಗೌಡ ಪಾಟೀಲ್ ನಮ್ಮ ಹೊಲ ನಮ್ಮ ದಾರಿ ಬಗ್ಗೆ, ಖಾತಾ ನಕಲ್ ತುರ್ತು ನೀಡುವಂತೆ, ಶುಲ್ಕ ಕಡಿಮೆಗೊಳಿಸುವಂತೆ , ನೀರಿನ ಟಾಕಿ ಹತ್ತಿರ ಸ್ವಚ್ಚತೆ ಕಾಪಾಡುವಂತೆ ಮತ್ತು ನೀರು ಪ್ರತಿನಿತ್ಯ ಒಂದೇ ಸಮಯಕ್ಕೆ ಬಿಡಬೇಕು ಮತ್ತು  ವಾಲ್ ಗಳಿಗೆ ಮುಚ್ಚಳ ಹಾಕಬೇಕು. ಸಿನಿಮಾ ಟಾಕೀಸ್ ಹತ್ತಿರ ಚರಂಡಿ ಮೇಲೆ ಹಾಕಿರುವ ಹಾಕಿರುವ ಬೆಡ್ ಹಾಳಾಗಿದ್ದು ಕೂಡಲೇ ಗುಣಮಟ್ಟದ ಬೆಡ್ ಹಾಕಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ವಿರೂಪಾಕ್ಷರುದ್ರ ಬೆಣ್ಣಿ, ಪ್ರಹ್ಲಾದ ವಿಶ್ವಕರ್ಮ ಅವರು ಚಿತಾವಲೀ ಚೌಕ್ ನಲ್ಲಿ ೪೦ ವರ್ಷಗಳ ಬೇಡಿಕೆಯಾದ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. ರಸ್ತೆ ಅಗಲೀಕರಣದಲ್ಲಿ ಒಡೆಯದೇ ಉಳಿದ ಪುರಸಭೆ ಮಳಿಗೆಗಳು ೧೦ ವರ್ಷದಿಂದ ಯಾವ ಉಪಯೋಗಕ್ಕೆ ಬರುತಿಲ್ಲ ಆ ಸ್ಥಳದಲ್ಲಿ ಮಾಡಿದರೆ ಉಪಯುಕ್ತ ಎಂದರು. ಮಹಿಳೆಯರು ಮತ್ತು ವ್ಯಾಪಾರಸ್ಥರಿಗಾಗುವ ಅನುಕೂಲ, ಪಕ್ಕದಲ್ಲಿಯೇ ಶಾಲೆಗಳು ಇವೆ, ಆದ್ದರಿಂದ ಸಫಾಯಿ ಕರ್ಮಚಾರಿಗಳ ಸಹಿತ ನಿರಂತರವಿರುವ ಸುಲಭ ಶೌಚಾಲಯ ತ್ವರಿತ ಅವಶ್ಯಕವೆಂದು ಮನವಿ ಮಾಡಿದರು.
ಮಹಿಳೆ ಶರಣಮ್ಮ ಹುಳಗೋಳ ಅವರ ಮೊಮ್ಮಗಳ ಇಂದ್ರಿಯ ದೌರ್ಬಲ್ಯದಿಂದ ಬಳಲುತಿದ್ದು ಥಂಬ್ ಇಂಪ್ರೆಷನ ಅಗುತ್ತಿಲ್ಲ ಕೂಡಲೇ ತಾಲುಕು ಆರೋಗ್ಯ ಅಧಿಕಾರಿಗಳು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೂಚಿಸಿದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ  ಸಮಸ್ಯೆ ಆಲಿಸಿ ಕೆಲವೊಂದು ಸ್ಥಳದಲ್ಲಿಯೇ ಪರಿಹರಿಹಿಸಿ ಉಳಿದ ಬೇಡಿಕೆಯುಳ್ಳ ಕಾಮಗಾರಿಗಳನ್ನು ಸರ್ವೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸುವುದಾಗಿ ಹೇಳಿದರು.
ಗ್ರೇಡ್-೨ ತಹಸೀಲ್ದಾರ್ ರಾಜಕುಮಾರ ಮರತೂರಕರ್, ಕಂದಾಯ ನಿರೀಕ್ಷಕ  ಮಧುಸೂಧನ ಘಾಳೆ, ಪುರಸಭೆ ಸದಸ್ಯ ಶ್ಯಾಮ್ ಮೇಧಾ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಡಾ ಶಾಂತಯ್ಯ ಮಾತನಾಡಿದರು. 
ಆರೋಗ್ಯ ನಿರೀಕ್ಷಕರೊಂದಿಗೆ ವಾರ್ಡ್ ನ ರೈತ ಮಲ್ಲರೆಡ್ಡಿ ಗೋಪಶೇನ್ ಆವರು ಚರಂಡಿ ಹಾಗೂ ರಸ್ತೆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಕಿರಿಯ ಆರೋಗ್ಯ ನಿರೀಕ್ಷಕರಾದ ಶರಣು ಮೂಕೆ, ವೆಂಕಟೇಶ್, ಆರ್ ಐ ರಿಯಾಜುದ್ದಿನ, ರವಿಶಂಕರ ಯಾದವ್, ಅಂಬರೀಷ ಸರಡಗಿ, ಜೆಇ ಮಲ್ಲಿಕಾರ್ಜುನ, ಪ್ರಮುಖರಾದ ಮಲ್ಲರೆಡ್ಡಿ ಗೋಪಸೇನ, ಬಸವರಾಜ ಸಂಕನೂರ, ತೀರ್ಥಪ್ಪ ವಡ್ಡಡಗಿ, ಕರಬಸಯ್ಯ ಶಾಸ್ತ್ರಿ, ವೆಂಕಟೇಶ ಬಳಿಚಕ್ರ, ನಾಗರಾಜ ಹೂಗಾರ, ಮಂಜು ಧರಪೂರ ಸೇರಿದಂತೆ ಇನ್ನಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ